Updated News From Kaup

ಫಿಶ್ ಕೋರ್ಟ್ ಬಗ್ಗೆ ಒಂದಿಷ್ಟು - Steevan Colaco

Posted On: 05-03-2020 04:59PM

ಒಳ್ಳೆಯ ಊಟ, ಕ್ರ್ಯಾಬ್ ಗಿ ರೋಸ್ಟ್ ಬಹಳಾನೇ ರುಚಿಕರವಾಗಿದೆ, ಕುಟುಂಬ ಸಮೇತ ಹೋಗಿ ಆರಾಮವಾಗಿ ಊಟ ಮಾಡಬಹುದಾದಂತ ಹೋಟೆಲ್ "ಫಿಶ್ ಕೋರ್ಟ್" ಸಮಂಜಸವಾದ ದರದಲ್ಲಿ ಹೊಟ್ಟೆ ತುಂಬಾ ರುಚಿಕರವಾದ ಊಟ ಮಾಡಿ

ಕಾಪು ಕಡಲ ತೀರದಲ್ಲಿ ನೆಲೆಯಾಗಿರುವ ಬ್ರಹ್ಮಲಿಂಗೇಶ್ವರನಿಗೆ ಶಿವರಾತ್ರಿ ಸಂಭ್ರಮ

Posted On: 05-03-2020 04:59PM

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಪಡುಗ್ರಾಮ, ಕಾಪು ಮಹಾಶಿವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಇಂದು ವಿಜೃಂಭಣೆಯಿಂದ ನಡೆಯಿತು.. ಸಂಜೆ 5 ರಿಂದ ಕಾಪು ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 11 ಕ್ಕೆ ಮಹಾಪೂಜೆ,ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ... ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ನಮ್ಮ ಕಾಪು

ಉಳಿಯಾರಿನಲ್ಲಿ ಭಜನೆಗೆ ಒಲಿದ ಭಗವತಿಯ ಸಾನಿಧ್ಯದಲ್ಲಿ ಶಿವರಾತ್ರಿ ಸಂಭ್ರಮ

Posted On: 05-03-2020 04:59PM

ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವವು ಇಂದಿನಿಂದ ಮೊದಲ್ಗೊಂಡು ದಿನಾಂಕ 25-02-2020 ರ ಪರ್ಯಂತ ವಿಜ್ರಂಭಣೆಯಿಂದ ಜರಗಲಿರುವುದು. ದಿನಾಂಕ 22-02-2020 ರಂದು ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯಮಯ ನಾಟಕ "ಪಿರ ಪೋಂಡುಗೆ" ಈ ಎಲ್ಲಾ ಕಾರ್ಯಕ್ರಮಗಳಿಗೆ ಆದರದ ಸ್ವಾಗತ ಬಯಸುವ :- ಊರ ಹತ್ತು ಸಮಸ್ತರು, ವ್ಯವಸ್ಥಾಪನಾ ಸಮಿತಿ ಮತ್ತು ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಉಳಿಯಾರು ನಮ್ಮ ಕಾಪು

ಇಂದು ಕಟಪಾಡಿಯಲ್ಲಿ ಮಹಿಮಾ ಆಟೋಮೊಬೈಲ್ ಸ್ಪೇರ್ಸ್ ಶುಭಾರಂಭ

Posted On: 05-03-2020 04:59PM

ಕಾಪು ಕಟಪಾಡಿಯಲ್ಲಿ ಸೆಬಸ್ಟಿಯನ್ ಇವರು ಹೊಸದಾಗಿ "ಮಹಿಮಾ ಆಟೋಮೊಬೈಲ್ ಸ್ಪೇರ್ಸ್" ಎಂಬ ಅಂಗಡಿಯನ್ನು ತೆರೆದಿದ್ದು. ಇದರ ಉದ್ಘಾಟನಾ ಸಮಾರಂಭ ಮಹಾಶಿವರಾತ್ರಿಯ ಈ ಶುಭದಿನದಂದು ನಡೆದಿರುತ್ತದೆ.. ಇಲ್ಲಿ ಎಲ್ಲಾ ಬಗ್ಗೆಯ ಕಾರುಗಳ ಬಿಡಿ ಭಾಗಗಳು ದೊರೆಯುತ್ತವೆ. ವಿಳಾಸ : ಗ್ರಾಂಡ್ ಮೆರಿಡಿಯನ್ ಅಪಾರ್ಟ್ಮೆಂಟ್, ಶಾಪ್ ನಂಬರ್. 4-134-A-3 ಕಾರ್ಪೋರೇಶನ್ ಬ್ಯಾಂಕ್ ಎದುರುಗಡೆ, ಕಟಪಾಡಿ. ಪಿನ್ - 574105 ಹೆಚ್ಚಿನ ಮಾಹಿತಿಗಾಗಿ : 7204574714, 8971170429 ನಮ್ಮ ಕಾಪು

800 ವರ್ಷ ಇತಿಹಾಸವಿರುವ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ

Posted On: 05-03-2020 04:59PM

Sri Laxmi Janardhan Temple - Kaup 18th Feb 2020 Annual car festival. ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಕಾಪು. ಕಾಪು ಸಾವಿರ ಸೀಮೆಯ ಒಡೆಯ ಎಂದೇ ಪ್ರಖ್ಯಾತವಾಗಿರುವ ದೇವರು ಶ್ರೀ ಲಕ್ಷ್ಮೀಜನಾರ್ದನ ದೇವರು. ಕಾಪು ದೇವಸ್ಥಾನದಲ್ಲಿ ನೂರಾರು ವರುಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟು ಪೂಜಿಸಲ್ಪಡುವ ದೇವರು ಶ್ರೀ ಲಕ್ಷ್ಮೀಜನಾರ್ದನ ದೇವರು . ಈ ದೇವಸ್ಥಾನಕ್ಕೆ 800 ವರುಷಗಳಷ್ಟು ಹಳೆಯ ಇತಿಹಾಸವಿದ್ದು ಇಲ್ಲಿಯ ಪ್ರಸಿದ್ಧ ಹಳೆಯ ದೇವಸ್ಥಾನಗಲ್ಲಿ ಒಂದಾಗಿದೆ. ಲಕ್ಷ್ಮೀ ಸಮೇತನಾಗಿರುವ ಜನಾರ್ದನ ಸ್ವಾಮಿಯು ಭಕ್ತಜನರ ಪ್ರಾರ್ಥನೆಗೆ ಬಹುಶಿಘ್ರದಲ್ಲಿ ಉತ್ತರಿಸುವವನಾಗಿರುವುದು ಪ್ರಸಿದ್ದಿಯಾಗಿದೆ. ಇಲ್ಲಿಯ ಮೂಲ ವಿಗ್ರಹವು ಭಾರ್ಗವ ಋಷಿಯಿಂದ ಪೂಜಿಸಲ್ಪಟ್ಟದ್ದಾಗಿ ಇಲ್ಲಿಯ ಸ್ಥಳಪುರಾಣಗಳು ಹೇಳುತ್ತವೆ. ವರ್ಷಾವಧಿ ಜಾತ್ರೆಯು ಫೆಬ್ರವರಿ ತಿಂಗಳಲ್ಲಿ ನಡೆಯುತ್ತದೆ ಅಲ್ಲದೆ ರಾಶಿ ಪೂಜೆಯು ಏಪ್ರಿಲ್ 24 ನೆಯ ತಾರೀಕಿನಂದು ಬಹುವಿಜ್ರಭಣೆಯಿಂದ ನೆರವೇರುತ್ತದೆ. ಕಾಪು ಕ್ಷೇತ್ರವು ಉಡುಪಿಯಿಂದ 12 K M ದೂರದಲ್ಲಿದ್ದು ಉಡುಪಿ ಮಂಗಳೂರು ಹೈ ವೇಯಲ್ಲಿದೆ. ದೇವಸ್ಥಾನದಲ್ಲಿ ನಾದಸ್ವರ ಊದುವವರು ಮುಸ್ಲಿಂ ಜನಾಂಗಕ್ಕೆ ಸೇರಿದವರಾಗಿದ್ದು , ನನಗೆ ತಿಳಿದಂತೆ ಪ್ರಸ್ತುತದವರು ನಾಲ್ಕನೆಯ ತಲೆಮಾರಿನವರು. ಈಗಿನವರ ತಂದೆ, ಅಜ್ಜ ಮುತ್ತಜ್ಜ ನಾದಸ್ವರ ಊದುವುದನ್ನು ನಾನು ಕಂಡಿದ್ದೇನೆ Kamalaatanaya ( Kaup Laxmikantha Tantry ) The idol worshipped in this temple is Lord Mahavishnu also known as Lord Janardhana. Temple has a history of over 800 years and is considered to be one among the oldest temples. This historical temple is believed to have been existed since the thirteenth century. Along with the temple dedicated to Shri Janardhana, the presence of Lakshmi in the temple complex has been one of the significant features of this sacred place. It has been believed that the deity of this temple, Shri Janardhana Swami who is prompt in answering the prayers of the devotees was installed thousands of years earlier by Bhargava Rushi. It is one of the ancient temples dedicated to Lord Vishnu. On the day of the car festival, the main Deity Lord Janardhana is carried by the priest upon his head and then taken to the decorated car. Later in the late night the car will be pulled by all devotees and at the end there will be a fire work presentation to the Lord. Annual Raasi pooja will be held on 25th of April. every year. Kaup is just 12 KM from Udupi on the way to Mangalore on National highway. Kamalaatanaya (Kaup Laxmikantha Tantry) ನಮ್ಮ ಕಾಪು.

ಬಂಟಕಲ್ಲು ಜಾತ್ರೆ ಎಪ್ರಿಲ್-3-2020

Posted On: 05-03-2020 04:59PM

ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಹಿರಿಯರು ಸಂಸ್ಥಾಪಿಸಿ ಪೂಜಿಸಿ ಭಜಿಸಿಕೊಂಡು ಬರುತ್ತಿರುವ ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳವು 1942 ರಲ್ಲಿ ಪ್ರತಿಷ್ಠಾಪನೆಗೊಂಡಿದ್ದು, 2019 ರಲ್ಲಿ ಶ್ರೀ ಕ್ಷೇತ್ರದ ಸಂಪೂರ್ಣ ಜೀರ್ಣೋದ್ದಾರ ಕಾರ್ಯ ನಡೆದು, ಶಿಲಾಮಯ ಗರ್ಭಗುಡಿ, ಸುತ್ತುಪೌಳಿ ಮತ್ತು ಸಂಪೂರ್ಣ ತಾಮ್ರ ಚಾವಣಿಯ ಜೊತೆಗೆ ಶ್ರೀ ಸಿದ್ದಿವಿನಾಯಕ, ಶ್ರೀ ಸುಬ್ರಮಣ್ಯ, ಶ್ರೀ ರಾಮ ಮಂದಿರದೊಂದಿಗೆ ಸಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠೆ, ಧಾರ್ಮಿಕ ಅನುಷ್ಠಾನಗಳು 2019 ಮೇ 7 ರಿಂದ 18 ರ ಪರ್ಯಂತ, ಸಮಾಜದ ಗುರುವರ್ಯರಾದ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಸಮಾಜದ ಹಿರಿಯ ವೈದಿಕರ ನೇತೃತ್ವದಲ್ಲಿ ಸಮಾಜ ಭಾಂದವರ ಶ್ರದ್ದಾ ಭಕ್ತಿ ತನು ಮನ ಧನಗಳ ಸಹಕಾರದಿಂದ ಅದ್ದೂರಿಯಾಗಿ ನಡೆದಿರುವುದು ಒಂದು ಇತಿಹಾಸವೇ ಆಗಿದೆ. ಶ್ರೀ ದೇವಳದ ಪ್ರತಿಷ್ಠಾ ವರ್ದನ್ತ್ಯುತ್ಸವ ತಾರೀಕು 03/04/2020 ರಂದು ನಡೆಯಲಿದೆ.. ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ನಮ್ಮ ಕಾಪು

ಉಡುಪಿಯ ತನುಶ್ರೀ ಪಿತ್ರೋಡಿ - ಯೋಗಸಾನದಲ್ಲಿ ಬರೋಬ್ಬರಿ ಐದು ವಿಶ್ವದಾಖಲೆ

Posted On: 05-03-2020 04:59PM

ಈಗಾಗಲೇ ಯೋಗಾಸನದಲ್ಲಿ ನಾಲ್ಕು ವಿಶ್ವದಾಖಲೆ ಮಾಡಿರುವ ತನುಶ್ರೀ ಪಿತ್ರೋಡಿ, ದಿನಾಂಕ 22-02-2020ರಂದು ಸಂಜೆ 4.30ಕ್ಕೆ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ತನ್ನ 5ನೇ ವಿಶ್ವದಾಖಲೆಗೆ ಪ್ರಯತ್ನಿಸಲಿದ್ದಾಳೆ.ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿ ತನುಶ್ರೀ ಯನ್ನು ಪ್ರೋತ್ಸಾಹಿಸಿ ನಮ್ಮ ಕಾಪು

ಕಟಪಾಡಿ ಕುರ್ಕಾಲು ಕಂಬಳಕ್ಕೆ ಕ್ಷಣಗಣನೆ

Posted On: 05-03-2020 04:59PM

ಕುರ್ಕಾಲು ಪಟ್ಟಾ ಚಾವಡಿ ಸಾರಲು ಧೂಮಾವತಿ ದೈವಸ್ಥಾನ, ಇದರ ವಾರ್ಷಿಕ ಕಂಬಳವು 01/03/2020 ರಂದು ನಡೆಯಲಿರುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿ ಧೂಮಾವತಿ ಯ ಕೃಪೆಗೆ ಪಾತ್ರಾಗಬೇಕೆಂದು ಸಮಸ್ಥ ಕಂಬಲಾಬಿಮಾನಿಗಳಿಗೆ ಆದರದ ಸ್ವಾಗತ ಬಯಸುವ.. ಕುರ್ಕಾಲು ಮನೆ ಪಟ್ಟಾ ಚಾವಡಿ ಕುಟುಂಬಸ್ಥರು, ಕುರ್ಕಾಲು ಸಾನದ ಮನೆ ಕುಟುಂಬಸ್ಥರು, ನಾಡಗೊಳಿ ಫ್ರೆಂಡ್ಸ್ ಕುರ್ಕಾಲು, ಮತ್ತು ಊರ ಹತ್ತು ಸಮಸ್ತರು ನಮ್ಮ ಕಾಪು

ಏಳರ ಹರೆಯದ ಕರಾಟೆ ಚಾಂಪಿಯನ್ - ಶಿವಾನಿ ಭಟ್ ಇನ್ನಂಜೆ

Posted On: 05-03-2020 04:59PM

ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಫೆಬ್ರವರಿ 1 ರಂದು ನಡೆದ 30ನೇ ರಾಜ್ಯಮಟ್ಟದ ಅಂತರ್ ಡೋಜೋ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಇನ್ನಂಜೆಯ ಶಿವಾನಿ ಭಟ್ ಅವರು ಎಂಟು ವರ್ಷದ ಒಳಗಿನ ವೈಯುಕ್ತಿಕ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಇನ್ನಂಜೆ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಇನ್ನಂಜೆ ಮಯೂರ್ ಭಟ್ ಮತ್ತು ಆಶಾ ಭಟ್ ದಂಪತಿಯ ಪುತ್ರಿಯಾಗಿದ್ದು. ಕಟಪಾಡಿ ಸುರೇಶ್ ಆಚಾರ್ಯ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಕಾಪು

ಬಂಟಕಲ್ಲಿನ ಹಾಳೆ ಮರ - ಇನ್ನು ನೆನಪು ಮಾತ್ರ

Posted On: 05-03-2020 04:59PM

ಇದು ಕಾಪು ಫಿರ್ಕದಲ್ಲಿರುವ ನಮ್ಮೆಲ್ಲರ ಪ್ರೀತಿಯ ಹಳೇ ಬಂಟಕಲ್ಲು. ನನ್ನ ಹುಟ್ಟು ಇಲ್ಲಿಂದ ಎರಡು ಕಿಲೋಮೀಟರು ದೂರದ 92, ಹೆರೂರಿನಲ್ಲಿ ಆಗಿದ್ದರೂ, ಪ್ರಾಥಮಿಕ ಶಿಕ್ಷಣ ಬಂಟಕಲ್ಲಿನ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಹಾಗಾಗಿ ಬಂಟಕಲ್ಲಿಗೂ ನನಗೂ ಅವಿನಾಭಾವ ಸಂಬಂಧವಿದೆ. ಅದರಲ್ಲಿಯೂ ಪೇಟೆಯ ನಡುವೆ ಇದ್ದ ಈ ಹಾಳೆ ಮರ ಅಂದರೆ ನಮಗೆಲ್ಲರಿಗೂ ಪಂಚ ಪ್ರಾಣ. ನಾನು ಬಹಳ ಚಿಕ್ಕವನಿದ್ದಾಗ ಉಡುಪಿಯಿಂದ ಮಂಚಕಲ್ಲಿಗೆ ಎರಡು ಬಸ್ಸುಗಳು ಬರುತ್ತಿದ್ದವು. ಒಂದು ‘’ಮರವೂರು’’ ಮತ್ತೊಂದು ‘’ಹನುಮಾನ್’’. ಇವೆರಡೂ ಇದೇ ಮರದ ಅಡಿಯಲ್ಲಿ ತಂಗುತ್ತಿದ್ದವು. ಹಾಗಾಗಿ ಬಂಟಕಲ್ಲಿನ ಮೊದಲ ಬಸ್ ತಂಗುದಾಣ ಇದೆ ಮರ ಎಂದು ಗುರುತಿಸಲಾಗುತ್ತಿತ್ತು. ಮಳೆಗಾಲ ಬರುವ ಹೊತ್ತಿಗೆ ದೂರದ ಊರಿಂದ ಕೊರಂಬು (ಗೊರಬು), ಕನ್ನಡಿ ಪುಡಾಯಿ (ಗೊಬ್ಬರ ಹೊರುವ ಬುಟ್ಟಿ), ತತ್ರ (ತಾಳೆ ಮರದ ಗರಿಯಿಂದ ತಯಾರಿಸಿದ ಕೊಡೆ) ಇತ್ಯಾದಿ ತಂದು ಮಾರಾಟ ಮಾಡುತ್ತಿದ್ದರು. ಮೇ ತಿಂಗಳಲ್ಲಿ ಹತ್ತಿರದ ಕುರ್ಕಾಲು ಗ್ರಾಮದಿಂದ ಗೆಣಸು ತುಂಬಿದ ಗೋಣಿ ಚೀಲಗಳ ಮೂಟೆಗಳನ್ನೂ ಇಲ್ಲಿ ಕಾಣಬಹುದಾಗಿತ್ತು. ಒಂದುರೀತಿಯಲಿ ಹೇಳುವುದಾದರೆ ಸೋಮವಾರ ಇದರಡಿಯಲ್ಲಿ ಒಂದು ಚಿಕ್ಕ ಸಂತೆ ನಡೆಯುತ್ತಿತ್ತು. ತಾಮ್ರದ ಕೊಡಪಾನ ರೆಪೇರಿ ಮತ್ತು ಕಲಾಯಿ ಹಾಕುವ ಕಟಪಾಡಿಯ ಹಾಜಬ್ಬನವರ ವರ್ಕಶಾಪ್ ಇದ್ದುದು ಇದೇ ಮರದಡಿ. ಬಸ್ಸುಗಳು ಹೆಚ್ಚಾಗುತ್ತಿದ್ದಂತೆ ಬಸ್ಸು ನಿಲ್ದಾಣವನ್ನು ಈ ಮರದಡಿಯಿಂದ ಈಗಿನ ಹೊಸ ತಂಗುದಾಣಕ್ಕೆ ಎತ್ತಂಗಡಿ ಮಾಡಲಾಯ್ತು. ಇದು ಹಕ್ಕಿಗಳಿಗೆ ವರದಾನವಾಯ್ತು. ಮರತುಂಬಾ ಹಕ್ಕಿಗಳ ಕಲರವ ನೋಡುವುದೇ ಚೆಂದ. ಆ ಕಾಲದಲ್ಲಿ ಈಗಿನ ಹಾಗೆ ಕೃಷಿಗೆ ವಿಷ ಹಾಕುತ್ತಿರಲಿಲ್ಲ ಹಾಗಾಗಿ ಬಣ್ಣ ಬಣ್ಣದ ಹಕ್ಕಿಗಳು ಎಲ್ಲಾ ಕಡೆ ಹಳ್ಳಿಗಳಲ್ಲಿ ಕಾಣಸಿಗುತ್ತಿದ್ದವು. ಹೂ ಬಿಟ್ಟಾಗಂತೂ ಮರತುಂಬ ಜೇನುನೊಣಗಳು ಮುತ್ತಿ ಬಿಡುತ್ತಿದ್ದವು. ಮದುವಣಗಿತ್ತಿ ಶೃಂಗರಿಸಿ ನಿಂತಂತೆ ಇಡೀ ಮರ ಹೂಬಿಟ್ಟು ನಿಂತಾಗ ನೋಡುವುದೇ ಚೆಂದ. ಮದ್ದಿನ ಗುಣ: ತುಳುನಾಡಿನಲ್ಲಿ, ಆಷಾಢ ಅಮವಾಸ್ಯೆಯ ದಿನ ಮುಂಜಾನೆ ಸೂರ್ಯ ಉದಯಿಸುವ ಮುನ್ನವೇಈ ಹಾಳೆ ಮರದ ಬಳಿಗೆ ತೆರಳಿ ಮೊಣಚಾದ ಕಲ್ಲಿನಿಂದ ಹಾಳೆಮರದ ತೊಗಟೆಯನ್ನು ತೆಗೆದು ಅದನ್ನು ಮನೆಗೆ ತಂದು ಚೆನ್ನಾಗಿ ಅರೆದು, ನಂತರ ಕುದಿಸಿ, ಕಾಳುಮೆನಸು, ಬೆಳ್ಳುಳ್ಳಿ ಹಾಕಿ, ನಂತರ ಚೆನ್ನಾಗಿ ಬೆಂಕಿಯಿಂದ ಕಾಯಿಸಿದ ಬಿಳಿಕಲ್ಲನ್ನು ಆ ಕಷಾಯಕ್ಕೆ ಹಾಕಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲಾರೂ ಈ ಕಷಾಯ ಕುಡಿಯಿವ ಪದ್ಧತಿ ಇದೆ. ಒಂದು ವೇಳೆ ಯಾವುದಾದರೂ ವಿಷಕಾರಿ ಅಂಶಗಳು ಅದರಲ್ಲಿ ಸೇರಿದ್ದರೆ ಕಾಯಿಸಿದ ಕಲ್ಲು ಅದನ್ನು ಹೀರುತ್ತದೆ ಎಂಬ ನಂಬಿಕೆ. ಅಮವಾಸ್ಯೆಯ ದಿನವೇ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂಬ ನಿಯಮವಿದೆ. ಇದು ಅತ್ಯಂತ ಕಹಿಯಾಗಿರುವುದರಿಂದ ಇದನ್ನು ಕುಡಿದ ನಂತರ ಮೆಂತೆ ಗಂಜಿ, ಗೋಡಂಬಿ ಬೀಜ ಹಾಗೂ ಬೆಲ್ಲವನ್ನು ಸೇವಿಸುವುದು ವಾಡಿಕೆಯಾಗಿದೆ. ಹೀಗೆ ಸೇವಿಸಿದ್ದಲ್ಲಿ ವರ್ಷಪೂರ್ತಿ ನಾವು ಆರೋಗ್ಯವಂತರಾಗಿರುತ್ತೇವೆ ಎಂಬುವುದು ಹಾಗೂ ಮಾರಕ ಖಾಯಿಲೆಯಿಂದ ತಪ್ಪಿಸಿಕೊಳ್ಳಬಹುದು ಎಂಬುವುದು ಹಿಂದಿನ ಕಾಲದಿಂದಲೂ ಹೇಳಿಕೊಂಡು ಬಂದ ಹಾಗೂ ಆಚರಿಸಿಕೊಂಡು ಬಂದ ನಂಬಿಕೆಇದೆ. ಹಾಗಾಗಿ ಯಾವುದೇ ಹೊಸ ವೈರಸ್ ತುಳುವರಿಗೆ ತಟ್ಟುವುದು ಕಡಿಮೆ. ಈ ಮರದಲ್ಲಿ ಫ್ಲಾವನೈಟ್, ನೈಸರ್ಗಿಕ ಸ್ಟೀರಾಯ್ಡ್, ಟರ್ಫೆನೈಟ್ಸ್ ಎಂಬ ಅಂಶ ಆಷಾಢ ಅಮವಾಸ್ಯೆಯ ದಿನ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಧರ್ಮಸ್ಥಳ ಆಯುರ್ವೇದ ಸಂಶೋಧನಾ ಕೇಂದ್ರ ತಿಳಿದಿದೆ. ಹಾಳೆ ಮಾರಕ್ಕೆ ಆಯುರ್ವೇದದಲ್ಲಿ “ಸಪ್ತಪರಣಿ” ಎಂದು ಕರೆಯುತ್ತಾರೆ. ಇದರ ಒಂದು ತೊಟ್ಟಿನಲ್ಲಿ ಏಳು ಎಲೆಗಳು ಇರುವ ಕಾರಣ ಇದಕ್ಕೆ ಸಪ್ತಪರಣಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಈ ಮರದ ತೊಗಟೆಯ ಕಷಾಯವನ್ನು ಅಮವಾಸ್ಯೆಯ ದಿನ ಸ್ವೀಕರಿಸಿದರೆ ಅದಕ್ಕೆ ಜ್ವರ, ಕ್ಯಾನ್ಸರ್ ಸಹಿತ ಮಾರಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ವಿಹಂಗಮ ನೋಟ: ನಾನು ಪ್ರಕೃತಿ ಪ್ರಿಯ. ನೋಡುವ ಕಣ್ಣುಗಳು, ಗ್ರಹಿಸುವ ಬುದ್ದಿ ಶಕ್ತಿ ಇದ್ದರೆ ನಮ್ಮ ಮನ:ಪಟಲದಲ್ಲಿ ಕಾಲ ಕಾಲಕ್ಕೆ ಪ್ರಕೃತಿ ವೀಕ್ಷಣೆಯಿಂದ ವಿಭಿನ್ನ ಚಿತ್ರಣಗಳನ್ನು ಗ್ರಹಿಸಬಹುದು. ಈ ಮರವನ್ನು ನಾನು ಎಲ್ಲಾ ದಿಕ್ಕುಗಳಿಂದ ಹಾಗೂ ಎಲ್ಲಾ ಕೋನಗಳಿಂದ ಬೇರೆ ಬೇರೆ ಸಮಯದಲ್ಲಿ ವೀಕ್ಷಿಸಿದ್ದೇನೆ. ಆಗ ಕಾಣುತ್ತಿದ್ದ ಅದ್ಭುತ ಚಿತ್ರಣ ಅದು ವಿವರಿಸಲಾಗದ ಮಾತು. ಈಗ ಈ ಮರವಿಲ್ಲ. ಅಭಿವೃದ್ದಿ ನೆಪದಿಂದ ಸಂಹಾರ ಮಾಡಲಾಗಿದೆ. ಆದರೂ ನನ್ನ ಸ್ಮೃತಿಪಟಲದಲ್ಲಿ ನಾನು ನೋಡಿದ ಚಿತ್ರಣ ಇನ್ನೂ ಹಸನಾಗಿದೆ. ಪೇಟೆಯ ಪಡುವಣ ಭಾಗದಲ್ಲಿದ್ದ ಈ ಮರವನ್ನು ದಿನಾಲೂ ಮುಂಜಾನೆ ಸೂರ್ಯೋದಯದ ವೇಳೆ ನೋಡಿದ್ದೇನೆ. ಹೊತ್ತು ನಿಧಾನವಾಗಿ ಮೇಲೇರುತ್ತಿದ್ದಂತೆ ಆ ಮರ ಒಮ್ಮೆಲೇ ಹೊಂಬಣ್ಣ ತಾಳುತ್ತಿತ್ತು. ಎಲೆಗಳು ಜೀವಂತಿಕೆಯಿಂದ ತುಂಬಿತುಳುಕುತ್ತಿತ್ತು. ನೋಡುನೋಡುತ್ತಿದ್ದಂತೆ ಆ ಮರದ ಆಪೂರ್ವ ಸೌಂದರ್ಯ ಸುತ್ತಮುತ್ತಲಿನ ಪ್ರದೇಶದ ಮೇಲೆಲ್ಲ ಹಬ್ಬಿಕೊಳ್ಳುತ್ತಿತ್ತು. ಹೊತ್ತು ಇನ್ನೂ ಮೇಲಕ್ಕೇರಿದಾಗ ಮರದ ಎಲೆಗಳು ಗಾಳಿಗೆ ಶಬ್ದ ಮಾಡುತ್ತ ಕುಣಿಯಲು ಆರಂಭಿಸುತ್ತಿದ್ದವು. ಪ್ರತಿಕ್ಷಣವೂ ಆ ಮರ ಹೊಸ ಹೊಸ ರೂಪ ತಾಳುವಂತೆ ಭಾಸವಾಗುತ್ತಿತ್ತು. ಸೂರ್ಯೋದಯದ ಮೊದಲು ಆ ಮರ ಕಪ್ಪು ರಾಶಿಯ ವೈಭವದಂತೆ, ಸ್ತಬ್ದವಾಗಿ ಮಂಕು ಕವಿದಂತೆ ನಮ್ಮಿಂದೆಲ್ಲ ದೂರ ಒಂಟಿಯಾಗಿ ನಿಂತಂತೆ ಕಂಡರೆ, ಬೆಳಕು ಹರಿದಂತೆ ಎಲೆಗಳು, ಬೆಳಕಿನ ಜತೆ ಆಡುತ್ತಾ ಸಂಪೂರ್ಣ ಹೊಸ ಅನುಭವ ಕೊಡುತ್ತಿತ್ತು. ಹೊತ್ತು ನೆತ್ತಿಗೇರುತ್ತಿದ್ದಂತೆ ಆ ಮರದ ನೆರಳು ದಟ್ಟವಾಗಿ, ಅದರಡಿಯಲ್ಲಿ ಕೂತು ನೀನು ಉರಿ ಬಿಸಿಲಿನ ಝಳದಿಂದ ರಕ್ಷಣೆ ಪಡೆಯುತ್ತಿಯಾ ಅಂತ ಕೇಳುತ್ತಿತ್ತು. ಸಂಜೆಯಾದಂತೆ ಹೊತ್ತು ಕಂತುವ ಸಮಯದಲ್ಲಿ ಪಶ್ಚಿಮದ ದಿಗಂತವೂ ಕೆಂಪು, ಹಳದಿ, ಹಸುರು ಬಣ್ಣಗಳಿಂದ ಕಂಗೊಳಿಸುತ್ತಿರುವಂತೆಯೇ ಆ ಮರ ಕಪ್ಪಾಗುತ್ತಾ ಮಬ್ಬಾಗುತ್ತಿತ್ತು. ತನ್ನೊಳಗೆ ತಾನು ನಿಧಾನವಾಗಿ ಮುಚ್ಚಿಕೊಳ್ಳುತ್ತಾ ಪ್ರಶಾಂತವಾಗಿ, ರಾತ್ರಿಯ ವಿಶ್ರಾಂತಿಗೆ ತಯಾರಾಗುತ್ತಿದ್ದಂತೆ ಕಾಣುತ್ತಿತ್ತು. ಈಗ ಈ ಮರ ನೆನಪು ಮಾತ್ರ. ಶ್ರೀನಿವಾಸ್ ಪಭು. ‘’ಸ್ಪೂರ್ತಿ’’ ಬಂಟಕಲ್ಲು. 92, ಹೇರೂರು. ಉಡುಪಿ. shrinitech@gmail.com