Updated News From Kaup
ಬಂಟಕಲ್ಲು: ಕೋವಿಡ್ ಲಸಿಕೆ ಪೂರ್ವ ರಕ್ತದಾನ ಶಿಬಿರ

Posted On: 30-04-2021 08:19PM
ಕಾಪು : ಸ್ಥಳೀಯ ರಾಜಾಪುರ ಸಾರಸ್ವತ ಯುವ ವೃಂದದ ಸದಸ್ಯರು ಕೋವಿಡ್ ಲಸಿಕೆ ಪಡೆಯುವ ಮುಂಚಿತವಾಗಿ ರಕ್ತದಾನ ಮಾಡುವ ಉಪಯುಕ್ತ ಕಾರ್ಯಕ್ರಮವು ಇಂದು ಜರುಗಿತು. 60 ಕ್ಕೂ ಹೆಚ್ಚು ಭಾರಿ ರಕ್ತ ದಾನ ಮಾಡಿದ ರಕ್ತದಾನಿ ಶ್ರೀ ದೇವದಾಸ್ ಪಾಟ್ಕರ್ ಲವರ ನೇತೃತ್ವದಲ್ಲಿ ಇಂದು ಮಣಿಪಾಲ ಕೆ ಎಮ್ ಸಿ ಯ ಬ್ಲಡ್ ಬ್ಯಾಂಕ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಿರ್ವ ಗ್ರಾ.ಪಂ ಅಧ್ಯಕ್ಷ , ರಾ ಸಾ ಯುವ ವೃಂದದ ಗೌರವಾಧ್ಯಕ್ಷರೂ ಆಗಿರುವ ಕೆ. ಆರ್. ಪಾಟ್ಕರ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು. ಕೊರೋನಾ ಸಂಕಷ್ಟ ಸಮಯದಲ್ಲಿ ಯುವ ವೃಂದದ ಸದಸ್ಯರು ಲಸಿಕೆ ಪಡೆಯುವ ಮುಂಚಿತವಾಗಿ ಸ್ವಯಂ ಪ್ರೇರಿತರಾಗಿ ರಕ್ತ ದಾನ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.

ರಕ್ತದ ಕೊರತೆಯಾಗುವಂತಹ ಈ ಸಂಧರ್ಭದಲ್ಲಿ ಇದರ ನೇತೃತ್ವ ವಹಿಸಿ ಕಾರ್ಯಕ್ರಮ ಆಯೋಜಿಸಿದ ರಕ್ತದಾನಿ ದೇವದಾಸ ಪಾಟ್ಕರ್ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತ ನಿಧಿ ಮಣಿಪಾಲ ಇವರು ಸಹಯೋಗ ನೀಡಿದ್ದು ಅಭಯ ಹೆಲ್ಪ್ ಲೈನ್ ನ ಸತೀಶ್ ಸಾಲಿಯಾನ್, ರಕ್ತ ನಿಧಿಯ ಡಾ| ದಿವ್ಯ , ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಡಾ| ಶ್ರೀರಾಮ್ ಮರಾಠೆ ಹಾಗೂ ಯುವ ವೃಂದದ ಸದಸ್ಯರು ಉಪಸ್ಥಿತರಿದ್ದರು. 25 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ವೃಂದದ ಪೂರ್ವಧ್ಯಕ್ಷ ವಿರೇಂದ್ರ ಪಾಟ್ಕರ್ ಹಾಗೂ ಸುಬ್ರಹ್ಮಣ್ಯ ವಾಗ್ಲೆ ಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಯುವ ವೃಂದದ ಸದಸ್ಯರೆಲ್ಲರು ರಕ್ತದಾನ ಮಾಡಿದರು, ರಕ್ತ ನಿಧಿಯ ಡಾ| ದಿವ್ಯರವರು ರಕ್ತ ನಿಧಿಯ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಬಂಟಕಲ್ಲಿನಿಂದ ಮಣಿಪಾಲಕ್ಕೆ ಹೋಗಿ ಬರಲು ಮಣಿಪಾಲ ರಕ್ತ ನಿಧಿಯಿಂದ ಬಸ್ ನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಬಂಟಕಲ್ಲು: ಕೋವಿಡ್ ಲಸಿಕೆ ಪೂರ್ವ ರಕ್ತದಾನ ಶಿಬಿರ

Posted On: 30-04-2021 08:18PM
ಕಾಪು : ಸ್ಥಳೀಯ ರಾಜಾಪುರ ಸಾರಸ್ವತ ಯುವ ವೃಂದದ ಸದಸ್ಯರು ಕೋವಿಡ್ ಲಸಿಕೆ ಪಡೆಯುವ ಮುಂಚಿತವಾಗಿ ರಕ್ತದಾನ ಮಾಡುವ ಉಪಯುಕ್ತ ಕಾರ್ಯಕ್ರಮವು ಇಂದು ಜರುಗಿತು. 60 ಕ್ಕೂ ಹೆಚ್ಚು ಭಾರಿ ರಕ್ತ ದಾನ ಮಾಡಿದ ರಕ್ತದಾನಿ ಶ್ರೀ ದೇವದಾಸ್ ಪಾಟ್ಕರ್ ಲವರ ನೇತೃತ್ವದಲ್ಲಿ ಇಂದು ಮಣಿಪಾಲ ಕೆ ಎಮ್ ಸಿ ಯ ಬ್ಲಡ್ ಬ್ಯಾಂಕ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಿರ್ವ ಗ್ರಾ.ಪಂ ಅಧ್ಯಕ್ಷ , ರಾ ಸಾ ಯುವ ವೃಂದದ ಗೌರವಾಧ್ಯಕ್ಷರೂ ಆಗಿರುವ ಕೆ. ಆರ್. ಪಾಟ್ಕರ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು. ಕೊರೋನಾ ಸಂಕಷ್ಟ ಸಮಯದಲ್ಲಿ ಯುವ ವೃಂದದ ಸದಸ್ಯರು ಲಸಿಕೆ ಪಡೆಯುವ ಮುಂಚಿತವಾಗಿ ಸ್ವಯಂ ಪ್ರೇರಿತರಾಗಿ ರಕ್ತ ದಾನ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.

ರಕ್ತದ ಕೊರತೆಯಾಗುವಂತಹ ಈ ಸಂಧರ್ಭದಲ್ಲಿ ಇದರ ನೇತೃತ್ವ ವಹಿಸಿ ಕಾರ್ಯಕ್ರಮ ಆಯೋಜಿಸಿದ ರಕ್ತದಾನಿ ದೇವದಾಸ ಪಾಟ್ಕರ್ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತ ನಿಧಿ ಮಣಿಪಾಲ ಇವರು ಸಹಯೋಗ ನೀಡಿದ್ದು ಅಭಯ ಹೆಲ್ಪ್ ಲೈನ್ ನ ಸತೀಶ್ ಸಾಲಿಯಾನ್, ರಕ್ತ ನಿಧಿಯ ಡಾ| ದಿವ್ಯ , ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಡಾ| ಶ್ರೀರಾಮ್ ಮರಾಠೆ ಹಾಗೂ ಯುವ ವೃಂದದ ಸದಸ್ಯರು ಉಪಸ್ಥಿತರಿದ್ದರು. 25 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ವೃಂದದ ಪೂರ್ವಧ್ಯಕ್ಷ ವಿರೇಂದ್ರ ಪಾಟ್ಕರ್ ಹಾಗೂ ಸುಬ್ರಹ್ಮಣ್ಯ ವಾಗ್ಲೆ ಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಬಿಲ್ಲವ ಸೇವಾ ಸಂಘ ಇನ್ನಂಜೆ : ಗುರು ಮಂದಿರದ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ

Posted On: 29-04-2021 10:42PM
ಕಾಪು : ಬಿಲ್ಲವ ಸೇವಾ ಸಂಘ (ರಿ.) ಇನ್ನಂಜೆಯ ನಾರಾಯಣಗುರು ಮಂದಿರದ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವವು ಸರ್ಕಾರದ ನಿರ್ದೇಶನದಂತೆ ಕೋವಿಡ್ ನಿರ್ಬಂಧದಂತೆ ಸರಳ ರೀತಿಯಲ್ಲಿ ಆಚರಿಸಲಾಯಿತು.

ಆ ಪ್ರಯುಕ್ತ ಏಪ್ರಿಲ್ 29, ಶುಕ್ರವಾರ ಬೆಳಿಗ್ಗೆ 7.00 ಗಂಟೆಗೆ ಮಹಾಗಣಪತಿ ಹೋಮ, ನವಕ ಪ್ರಧಾನ ಕಲಶ, 8.00 ಗಂಟೆಗೆ ಸಾಮೂಹಿಕ ಗುರುಪೂಜೆ ಜರಗಿತು. ನಂತರ ಭಜನಾ ಮಂಗಳ ಹಾಗೂ ಪ್ರಸಾದ ವಿತರಣೆ ನಡೆಯಿತು.
ಸೂರ್ಯನಮಸ್ಕಾರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಉಡುಪಿಯ ರೇಣುಕಾ ಗೋಪಾಲಕೃಷ್ಣ

Posted On: 29-04-2021 12:57PM
ಕಾಪು : ಸತತ ಪರಿಶ್ರಮದ ಮೂಲಕ ಯೋಗದಲ್ಲಿ ಸಾಧನೆಯನ್ನು ಮಾಡಿ ಇದೀಗ 17 ನಿಮಿಷ, 49 ಸೆಕೆಂಡ್ ಗಳಲ್ಲಿ 170 ಸೂರ್ಯನಮಸ್ಕಾರ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ ಉಡುಪಿ ಸಮೀಪದ ಪೆರಂಪಳ್ಳಿ ಬೊಬ್ಬರ್ಯಕಟ್ಟೆ ರೇಣುಕಾ ಗೋಪಾಲಕೃಷ್ಣ.

ಈ ಮೂಲಕ ಅಸ್ಸಾಮಿನ ಪುಷ್ಪಾಂಜಲಿ ಸೇನಾಪತಿ ಅವರ 1 ಗಂಟೆ 15 ನಿಮಿಷ 48 ಸೆಕೆಂಡ್ ಗಳಲ್ಲಿ 132 ಸೂರ್ಯನಮಸ್ಕಾರದ ದಾಖಲೆಯನ್ನು ರೇಣುಕಾ ಗೋಪಾಲಕೃಷ್ಣ ಮುರಿದಿದ್ದಾರೆ.

ಈ ಸಂದರ್ಭ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ಸತೀಶ್, ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನ ಹರೀಶ್ ಆರ್., ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ., ಮಲ್ಪೆ ಸಿಎಸ್ಪಿ ಶಾಖಾಧೀಕ್ಷಕ ಗೋಪಾಲಕೃಷ್ಣ, ಮಲ್ಪೆ ಸಿಎಸ್ಪಿ ನಿವೃತ್ತ ಪಿಎಸ್ಐ ಬಿ. ಮನಮೋಹನ ರಾವ್ ಉಪಸ್ಥಿತರಿದ್ದರು.
ಇನ್ನಂಜೆ : ಶ್ರೀ ದೇವಿ ಭಜನಾ ಮಂಡಳಿಯ 43ನೇ ಭಜನಾ ಮಂಗಳೋತ್ಸವ

Posted On: 28-04-2021 10:08AM
ಕಾಪು : ಇನ್ನಂಜೆ ಗ್ರಾಮದ ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯ 43ನೇ ಭಜನಾ ಮಂಗಳೋತ್ಸವವನ್ನು ಗ್ರಾಮದ ಹಿರಿಯರು, ಧಾರ್ಮಿಕ ಚಿಂತಕರು, ಸಮಾಜಸೇವಕರಾದ ಸದಾನಂದ ಕೆ. ಶೆಟ್ಟಿ ದೀಪ ಪ್ರಜ್ವಲಿಸಿ ಭಜನಾಮಂಗಲೋತ್ಸವಕ್ಕೆ ಚಾಲನೆ ನೀಡಿದರು.
ಮಧ್ಯಾಹ್ನ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯು ಮಂಡಳಿಯ ಸ್ಥಾಪಕ ಅಧ್ಯಕ್ಷರಾದ ಜಯಕರ ಶೆಟ್ಟಿ ದಂಪತಿಗಳ ಉಪಸ್ಥಿತಿಯಲ್ಲಿ ನೆರವೇರಿತು.
ಈ ಸಂದರ್ಭ ಗ್ರಾಮದ ಹಿರಿಯರು ಹಾಗೂ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಶಂಕರಪುರ ಸಾಯಿ ಬಾಬಾ ಮಂದಿರಕ್ಕೆ ಮೂರ್ತಿಗಳ ಆಗಮನ

Posted On: 23-04-2021 10:04AM
ಉಡುಪಿ : ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಮೇ ತಿಂಗಳ 1,2 ಮತ್ತು 3 ರಂದು ನಡೆಯುವ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಇಂದು ಸಾಯಿ ಬಾಬಾ ಮೂರ್ತಿಯನ್ನು ಶಂಕರಪುರದ ಮಂದಿರಕ್ಕೆ ಸ್ವಾಗತಿಸಲಾಯಿತು.

ರಾಜಸ್ಥಾನದ ಜೈಪುರದಲ್ಲಿ ಕೆತ್ತಲಾದ ಅಮೃತಶಿಲೆಯ ದ್ವಾರಕಾಮಾಯಿ ಸಾಯಿ ಬಾಬಾ ಮತ್ತು ಧನ್ವಂತರಿ ಸಾಯಿಬಾಬಾ ಮೂರ್ತಿಗಳ ಜೊತೆಗೆ ಕರಿಗಲ್ಲಿನ ಗಣಪತಿ, ಆಂಜನೇಯ, ಅಯ್ಯಪ್ಪ, ಸುಬ್ರಮಣ್ಯ ಮೂರ್ತಿಗಳನ್ನು ಉಡುಪಿಯ ಜೋಡುಕಟ್ಟೆಯಿಂದ ವಾಹನ ಮೆರವಣಿಗೆಯಲ್ಲಿ ಶಂಕರಪುರಕ್ಕೆ ತರಲಾಯಿತು.

ಜಯಕರ ಶೆಟ್ಟಿ ಇಂದ್ರಾಳಿ,ಸುಪ್ರಸಾದ್ ಶೆಟ್ಟಿ, ಕಿರಣ್ ಜೋಗಿ, ಪ್ರಕಾಶ್ ಬಾರಾಡಿ, ಗೀತಾಂಜಲಿ ಸುವರ್ಣ ಕಟಪಾಡಿ , ವೀಣಾ ಶೆಟ್ಟಿ, ಸತೀಶ್ ಉದ್ಯಾವರ, ವಿಶ್ವನಾಥ ಸುವರ್ಣ, ಉಮೇಶ್ ನಾಯ್ಕ್ ,ಸಂಪತ್ ಶೆಟ್ಟಿ, ಸುಧಾಕರ ಶೆಟ್ಟಿ, ಯಶ್ ಪಾಲ್ ಸುವರ್ಣ , ರಾಧಾಕೃಷ್ಣ ಮೆಂಡನ್,ವಿಜಯ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಮಂಡೇಡಿ, ಇನ್ನಂಜೆ : ಶ್ರೀ ದೇವಿ ಭಜನಾ ಮಂಡಳಿಯ 43ನೇ ಭಜನಾ ಮಂಗಲೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾ ಅನ್ನಸಂತರ್ಪಣೆ

Posted On: 20-04-2021 10:41AM
ಕಾಪು : ಕಾಪು ತಾಲೂಕಿನ ಮಂಡೇಡಿ, ಇನ್ನಂಜೆಯ ಶ್ರೀ ದೇವಿ ಭಜನಾ ಮಂಡಳಿಯ ವಾರ್ಷಿಕೋತ್ಸವದ ಪ್ರಯುಕ್ತ 43ನೇ ಭಜನಾ ಮಂಗಲೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾ ಅನ್ನಸಂತರ್ಪಣೆಯು ಏಪ್ರಿಲ್ 22, ಗುರುವಾರ ನಡೆಯಲಿದೆ.

ಏಪ್ರಿಲ್ 22, ಗುರುವಾರ ಬೆಳಿಗ್ಗೆ ಗಂಟೆ 10 ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 12 ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 6ರಿಂದ ದೀಪ ಪ್ರತಿಷ್ಠೆಯೊಂದಿಗೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಆರಂಭ, ಪ್ರಾತಃ ಕಾಲ ರಾತ್ರಿ ಗಂಟೆ 12-30ಕ್ಕೆ ಭಜನಾ ಮಂಗಳೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪುತ್ತಿಗೆ ಶ್ರೀಗಳಿಗೆ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ

Posted On: 18-04-2021 04:17PM
ಮಂಗಳೂರು : ಜಗತ್ತಿನೆಲ್ಲೆಡೆ ಕೃಷ್ಣ ಮಂದಿರಗಳನ್ನು ಸ್ಥಾಪಿಸಿ ಜಗದ್ಗುರುಗಳಾದ ಶ್ರೀ ಮಧ್ವಾಚಾರ್ಯರ ಭಕ್ತಿ ಸಿದ್ದಾಂತವನ್ನು ಜಗತ್ತಿನೆಲ್ಲೆಡೆ ಪ್ರಚಾರ ನಡೆಸಿದ ಹಾಗೆಯೇ ವಿಶ್ವ ಧಾರ್ಮಿಕ ನಾಯಕರ ಒಕ್ಕೂಟದ ಅಧ್ಯಕ್ಷರಾಗಿ ಎಲ್ಲಾ ಮತಗಳ ಸಮನ್ವಯತೆಯನ್ನು ಸಾಧಿಸಿದ ಹಿರಿಮೆಯ ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರೂಪುಗೊಳ್ಳುವ ಶಿಕ್ಷಣದಿಂದ ವ್ಯಕ್ತಿ ಯಶಸ್ಸಿ ಬದುಕು ಕಟ್ಟಲು ಸಾಧ್ಯ ಮತ್ತು ಸಚ್ಚಾರಿತ್ಯದಿಂದ ಕೂಡಿದ ಸಮಾಜ ಸಾಕಾರಗೊಳ್ಳುತ್ತದೆ. ಶಿಕ್ಷಣ ಆಧ್ಯಾತ್ಮಿಕ ತಳಹದಿ ಹೊಂದದಿರುವುದು ಇಂದಿನ ಅನೇಕ ಅವಾಂತರಗಳಿಗೆ ಕಾರಣ ಎನ್ನುತ್ತಾ ಶ್ರೀನಿವಾಸನ ಹೆಸರಿನಿಂದ ಬೆಳಗುತ್ತಿರುವ ವಿಶ್ವವಿದ್ಯಾಲಯವು ಮಹತ್ತರ ಸಾಧನೆಯನ್ನು ನಡೆಸುವಂತಾಗಲಿ ಎಂದು ಹರಸಿದರು.
ಇನ್ನೋರ್ವ ಗೌರವ ಡಾಕ್ಟರೇಟ್ ಪುರಸ್ಕೃತ ಬೆಂಗಳೂರಿನ ಆಚಾರ್ಯ ಧನ್ವಂತ್ ಸಿಂಗ ಮಾತನಾಡಿ ವಿದ್ಯಾರ್ಥಿಗಳು ಉನ್ನತ ಮೌಲ್ಯಗಳನ್ನು ಮೈಗೂಡಿಸಿ ಪ್ರಾಮಾಣಿಕ ಮತ್ತು ಸಮಗ್ರತೆಯ ಆಧಾರದಲ್ಲಿ ಬದುಕು ಕಟ್ಟಬೇಕು ಎಂದರು. ಶ್ರೀನಿವಾಸ ವಿ. ವಿ. ಯ ಉಪಕುಲಪತಿ ಡಾ. ಸಿ.ಎ. ರಾಘವೇಂದ್ರ ರಾವ್ ಪ್ರತಿಜ್ಞಾವಿಧಿ ಭೋಧಿಸಿದರು. ಸಹಕುಲಪತಿ ಡಾ.ಎ. ಶ್ರೀನಿವಾಸ ರಾವ್ ಸ್ವಾಗತಿಸಿದರು. ಕುಲಪತಿ ಡಾ. ಪಿ.ಎಸ್. ಐತಾಳ ವಿ.ವಿ. ಯ ವಾರ್ಷಿಕ ವರದಿ ಮಂಡಿಸಿದರು. ಡಾ. ಶ್ರೀನಿವಾಸ ಮಯ್ಯ ಗೌರವ ಡಾಕ್ಟರೇಟ್ ಪತ್ರ ವಾಚಿಸಿದರು. ಆಡಳಿತ ಮಂಡಳಿಯ ಟ್ರಷ್ಟಿ ವಿಜಯಲಕ್ಷೀ ರಾವ್, ಪ್ರಾ. ಮಿತ್ರಾ ರಾವ್, ಡಾ. ಅಜಯ ಕುಮಾರ್, ಅದಿತ್ಯ ಕುಮಾರ್ ಉಪಸ್ಥಿತರಿದ್ದರು.
ಕುಲಸಚಿವ ಡಾ. ಅನಿಲ್ ಕುಮಾರ್ ವಂದಿಸಿದರು. ಶ್ರೀನಿವಾಸ ವಿ. ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ರೋಹನ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.
ಕಾಪು ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿಯವರಿಗೆ ಬಂಟಕಲ್ಲು ನಾಗರಿಕ ಸೇವಾ ಸಮಿತಿಯಿಂದ ಅಭಿನಂದನೆ

Posted On: 18-04-2021 12:00PM
ಕಾಪು : ಕಳೆದ ನವೆಂಬರ್ ತಿಂಗಳಲ್ಲಿ ಬಂಟಕಲ್ಲು ದೇವಸ್ಥಾನ ಸಮೀಪದ ಶ್ರೀಮತಿ ವಸಂತಿ ಎಂಬವರಲ್ಲಿ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದರೋಡೆಗೈದ ಪ್ರಕರಣವನ್ನು ಬೇಧಿಸಿ, ದರೋಡೆಕೋರನನ್ನು ಬಂಧಿಸಿ ಚಿನ್ನದ ಸರವನ್ನು ವಶಪಡಿಸಿ ಮರಳಿ ಮಹಿಳೆಗೆ ಹಿಂತಿರುಗಿಸುವಲ್ಲಿ ಕರ್ತವ್ಯ ನಿರ್ವಹಿಸಿ , ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಕಾಪು ವೃತ್ತನಿರೀಕ್ಷರಾದ ಪ್ರಕಾಶ್, ಕ್ರೈಮ್ ಸಿಬ್ಬಂದಿಗಳಾದ ಪ್ರವೀಣ್, ರಾಜೇಶ್ ಹಾಗೂ ಸಿಬ್ಬಂದಿಯವರನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ವತಿಯಿಂದ ವೃತ್ತನಿರೀಕ್ಷಕರ ಕಛೇರಿಯಲ್ಲಿ ಶಾಲು ಹೊದಿಸಿ ಅಭಿನಂದಿಸಲಾಯಿತು.

ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್. ಪಾಟ್ಕರ್, ಉಪಾಧ್ಯಕ್ಷ ಪುಂಡಲೀಕ ಮರಾಠೆ, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೊಶಾಧಿಕಾರಿ ಜಗದೀಶ್ ಆಚಾರ್ಯ, ಉಮೇಶ್ ರಾವ್, ವೃತ್ತ ನಿರೀಕ್ಷಕರ ಕಛೇರಿ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಪೆರ್ಡೂರು ಟು ಗೋವಾ : ದಾರಿ ಮಧ್ಯೆ ಹಣ್ಣಿನ ಗಿಡಗಳ ನೆಟ್ಟು ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ ಮಾಡಿದ ಯುವಕರು

Posted On: 18-04-2021 11:32AM
ಕಾಪು : ಕಾಡಿನ ನಾಶ, ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಪರಿಸರ ಜಾಗೃತಿಗಾಗಿ ಫೆಡಲ್ ಫಾರ್ ಗ್ರೀನ್ ಎಂಬ ಘೋಷವಾಕ್ಯದೊಂದಿಗೆ ಪೆರ್ಡೂರಿಂದ ಗೋವಾದ ಪೊಂಡಕ್ಕೆ ಸುಮಾರು 320 ಕಿಲೋಮೀಟರ್ ಸೈಕಲ್ ಜಾಥಾದ ಮೂಲಕ ಕೃಷ್ಣಾನಂದ ನಾಯಕ್, ವಿಜ್ಞೇಶ್ ನಾಯಕ್, ವಿಜೇತ ನಾಯಕ್ ಆದಿತ್ಯವಾರದಿಂದ ಬುಧವಾರದವರೆಗೆ ಜಾಗೃತಿ ಮೂಡಿಸಿದರು.

ದಾರಿ ಮಧ್ಯೆ ಸಿಗುವ ನರ್ಸರಿಯಲ್ಲಿ ಸುಮಾರು 15 ಬಗೆಯ ಹಣ್ಣುಗಳನ್ನು ನೀಡುವ ಗಿಡಗಳನ್ನು ಅಲ್ಲಲ್ಲಿ ನೆಡುವ ಮೂಲಕ ಸ್ಥಳೀಯರಿಗೂ ಇದರ ಬಗ್ಗೆ ತಿಳಿಸಿ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಯಿತು.
ಕೃಷ್ಣಾನಂದ ನಾಯಕ್ ರೆಗಲಿಕ್ಸ್ ನಲ್ಲಿ ಡಿಸೈನರ್ ಆಗಿ, ವಿಜ್ಞೇಶ್ ನಾಯಕ್ ಕೊಕ್ ಇಂಡಸ್ಟ್ರಿಯಲ್ಲಿ ಅಕೌಂಟೆಂಟ್ ಆಗಿ, ವಿಜೇತ್ ನಾಯಕ್ ಉಡುಪಿ ಪ್ರವಾಸೋದ್ಯಮ ಇಲಾಖೆಯಲ್ಲಿ ಇಂಟನ್೯ಶಿಪ್ ಮಾಡುತ್ತಿದ್ದಾರೆ. ಇವರ ಪರಿಸರ ಜಾಗೃತಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.