Updated News From Kaup

ಇನ್ನಂಜೆ : ಮರ್ಕೊಡಿ ಪರಿಸರದ ತ್ಯಾಜ್ಯ ವಿಲೇವಾರಿ

Posted On: 06-05-2021 04:49PM

ಕಾಪು : ಇಂದು ಮರ್ಕೋಡಿ ಪರಿಸರದ ಶುಚಿತ್ವವು ಇನ್ನಂಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ರೋಕೆಶ್ ಮತ್ತು ತಂಡದಿಂದ ನಡೆಯಿತು.. ಗ್ರಾ.ಪಂ ಸದಸ್ಯರಾದ ನಿತೇಶ್ ಸಾಲ್ಯಾನ್ ಕಲ್ಯಾಲು, ಸ್ಥಳೀಯರಾದ ರಾಜ್ ಸಾಲ್ಯಾನ್ ಮತ್ತು ಬಾಲಕೃಷ್ಣ ಆರ್. ಕೋಟ್ಯಾನ್ ಕಾಪು ಉಪಸ್ಥಿತರಿದ್ದು ಮರ್ಕೊಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಇನ್ನಂಜೆ ಗ್ರಾ. ಪಂ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ, ಇನ್ನಂಜೆ ಗ್ರಾ. ಪಂ. ಸದಸ್ಯರಾದ ದಿವೇಶ್ ಶೆಟ್ಟಿ ಹಾಗೂ ಮಾಲಿನಿ ಶೆಟ್ಟಿಯವರು ಸ್ವಚ್ಛತಾ ಸಿಬ್ಬಂದಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ. ಸ್ಥಳೀಯರೊಂದಿಗೆ ಮಾತನಾಡಿದ ಅವರು ಮುಂದಿನ ದಿನಗಳಲ್ಲಿಯೂ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಕಾಪು ಠಾಣೆಯ ಹೊಯ್ಸಳದ ಸಬ್ ಇನ್ಸ್ಪೆಕ್ಟರ್ ರವರು ಬಂದು ತಾವು ಮಾಡುವ ಕೆಲಸ ಅಭಿನಂದನಾರ್ಹ ಎಂದು ಪ್ರಶಂಸಿಸಿ ಇನ್ನು ಮುಂದೆ ಈ ಪರಿಸರದಲ್ಲಿ ತ್ಯಾಜ್ಯ ಬಿಸಾಡುವವರ ಮಾಹಿತಿಕೊಟ್ಟರೆ ತಾನು ಕ್ರಮ ಕೈಗೊಳ್ಳುವುದಾಗಿ ಭರವಸೆ ಇತ್ತರು.

ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ವತಿಯಿಂದ ರಕ್ತದಾನ ಶಿಬಿರ

Posted On: 05-05-2021 09:31PM

ಕಾಪು : ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ಮತ್ತು ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ವತಿಯಿಂದ ಇಂದು ರಕ್ತದಾನ ಶಿಬಿರವು ಕಳತ್ತೂರು ಶೇಖರ ಶೆಟ್ಟಿಯವರ ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೋರಿಯಂನಲ್ಲಿ ನಡೆಯಿತು. ಒಟ್ಟು 104 ಮಂದಿ ಕಾರ್ಯಕರ್ತರು ರಕ್ತದಾನ ಮಾಡಿದರು.

ಶಿಬಿರವನ್ನು ಉದ್ಯಮಿಗಳಾದ ಹರೀಶ್ ಶೆಟ್ಟಿ ಗುರ್ಮೆಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಶಾರೀರಿಕ ಪ್ರಮುಖರಾದ ಸತೀಶ್ ಕುತ್ಯಾರ್ , ಉದ್ಯಮಿಗಳಾದ ಜಿನೇಶ್ ಬಲ್ಲಾಳ್, ಪ್ರವೀಣ್ ಗುರ್ಮೆ , ಹಿಂ.ಜಾ.ವೇ ಶಿರ್ವ ವಲಯದ ಗೌರವಾಧ್ಯಕ್ಷರಾದ ರಂಗನಾಥ ಶೆಟ್ಟಿ ,ಶಿರ್ವ ವಲಯದ ಹಿಂ.ಜಾ.ವೇ ಅಧ್ಯಕ್ಷರು ರಕ್ಷಿತ್ ಪೂಜಾರಿ ಶಿರ್ವ, ಸಮಾಜ ಸೇವಕರಾದ ನೀತಾ ಪ್ರಭು ,ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ,ಮಹಾಕಾಳಿ ಸಮೂಹ ಸಂಸ್ಥೆ ಉಡುಪಿಯ ಮಾಲಕರಾದ ನಾರಾಯಣ್ ತಂತ್ರಿ , ಹಿಂ.ಜಾ.ವೇ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತ್ ನಾಯಕ್ , ಹಿಂಜಾವೇ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ , ಹಿಂಜಾವೇ ಉಡುಪಿ ಜಿಲ್ಲಾ ನಿಧಿಪ್ರಮುಖರಾದ ಉಮೇಶ್ ಸೂಡ , ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ರಾಜೇಶ ಉಚ್ಚಿಲ , ಹಿಂಜಾವೇ ಕಾಪು ತಾಲ್ಲೂಕು ಅಧ್ಯಕ್ಷರಾದ ಶಶಿಧರ ಹೆಗ್ಡೆ ಹಿರೇಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಹಿಂಜಾವೇ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಗುರುಪ್ರಸಾದ್ ಸೂಡ ಸರ್ವರನ್ನು ಸ್ವಾಗತಿಸಿ , ಹಿಂಜಾವೇ ಕಾಪು ತಾಲೂಕು ಪ್ರಚಾರ ಪ್ರಮುಖ್ ಸಂತೋಷ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಭಾರತ್ ಪ್ರೆಸ್ ಮಾಲಕ ದೇವದಾಸ್ ಪೈ ನಿಧನ

Posted On: 05-05-2021 06:10PM

ಉಡುಪಿ : ಭಾರತ್ ಪ್ರೆಸ್ ನ ಮಾಲಕರೂ ಉಡುಪಿ ಜಿಲ್ಲಾ ಮುದ್ರಣಾಲಯ ಗಳ ಮಾಲಕರ ಸಂಘ ದ ಮಾರ್ಗದರ್ಶಕರು ಧಾರ್ಮಿಕ ಚಿಂತಕರಾದ ದೇವದಾಸ್ ಪೈ ಯವರು ಏಪ್ರಿಲ್ 29 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಸಂತಾಪ ವನ್ನು ಸೂಚಿಸಿದೆ. ಅಧ್ಯಕ್ಷರಾದ ಎಮ್ ಮಹೇಶ್ ಕುಮಾರ್, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ, ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಸದಸ್ಯರಾದ ಅನಿಲ್ ಶೆಟ್ಟಿ ಉಪಸ್ಥಿತರಿದ್ದರು.

ಕರಂದಾಡಿ ಗ್ರಾಮದ ಬ್ರಹ್ಮರಗುಂಡಿ ಹೊಳೆಯ ಪಾವಿತ್ರ್ಯತೆ ಕಾಪಾಡಿ : ಸಾರ್ವಜನಿಕರ ಆಗ್ರಹ

Posted On: 02-05-2021 10:31PM

ಕಾಪು : ಕಾಪು ತಾಲೂಕಿನ ಕರಂದಾಡಿ ಗ್ರಾಮದ ಬ್ರಹ್ಮರಗುಂಡಿ ಹೊಳೆಯು ಪವಿತ್ರವಾಗಿದ್ದು, ಇಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಳಕದ ಸ್ಥಳವಾಗಿರುತ್ತದೆ. ಈ ಪವಿತ್ರ ಸ್ಥಳದಲ್ಲಿ ಯಾವುದೇ ತರಹದ ತ್ಯಾಜ್ಯ ಮತ್ತು ಕಸ ಕಡ್ಡಿ ಹಾಕಬಾರದೆಂದು ವಿನಂತಿಸುವ ಬ್ಯಾನರ್ ಅಳವಡಿಸಲಾಗಿದೆ.

ಜನರು ಪ್ಲಾಸ್ಟಿಕ್, ಕೋಳಿ ತ್ಯಾಜಗಳನ್ನು ಎಸೆಯುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಆ ಮೂಲಕ ಹೊಳೆಯ ಪಾವಿತ್ರ್ಯತೆಯನ್ನು ಉಳಿಸಬೇಕಾಗಿದೆ ಎಂದಿದ್ದಾರೆ.

ಶಿರ್ವ : ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕರು ನೀರು ಪಾಲು

Posted On: 02-05-2021 07:11PM

ಕಾಪು : ಶಿರ್ವ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಗ್ರಾಮದ ಪಾಂಬೂರು ಕಬೆಡಿ ಪರಿಸರದಲ್ಲಿ ಇರುವ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲಾದ ಘಟನೆ ಇಂದು ಸಂಜೆ ನಡೆದಿದೆ.

ಪಾಂಬೂರಿನಲ್ಲಿ ಕೂಲಿ ಕಾರ್ಮಿಕರಾಗಿದ್ದು ಶಂಕರಪುರ ಸರ್ಕಾರಿ ಗುಡ್ಡೆ ನಿವಾಸಿಗಳೆಂದು ತಿಳಿದು ಬಂದಿದೆ. ಶಂಕರಪುರ ಸುಭಾಸ್ ನಗರದ ಕ್ಯಾಲ್ವಿನ್ ಕಸ್ತಲಿನೊ (21), ಜಾಬೀರ್ (18), ರಿಜ್ವಾನ್ (28) ಎಂದು ತಿಳಿದು ಬಂದಿದೆ. ನದಿಯಿಂದ ಈಶ್ವರ ಮಲ್ಪೆಯವರ ಸಹಕಾರದಿಂದ ಮೂವರ ಶವವನ್ನು ದಡಕ್ಕೆ ತರಲಾಗಿದೆ.

ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ : ವಿಶಿಷ್ಟ ರೀತಿಯಲ್ಲಿ ಕಾಮಿ೯ಕರ ದಿನಾಚರಣೆ

Posted On: 02-05-2021 06:43PM

ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ವಿಶಿಷ್ಟ ಶೈಲಿಯಲ್ಲಿ ಕಾರ್ಮಿಕರ ದಿನವನ್ನು ಮೇ.1ರಂದು ಆಚರಿಸಲಾಯಿತು.

ಲಾಕ್ ಡೌನ್ ನಿಂದ ತೀರಾ ಸಂಕಷ್ಟದಲ್ಲಿದ್ದ ರೋಗಿ ,ಅಸಹಾಯಕರು,ಒಂಟಿ ವೃದ್ದರು ಇರುವ ಅಸಹಾಯಕ ಕಾರ್ಮಿಕರಿಗೆ ನಾವಿದ್ದೇವೆ ನಿಮ್ಮ ಜೊತೆ ಎಂದು ಅಭಯ ನೀಡುವುದರೊಂದಿಗೆ ಸಹಾಯಧನ, ಊಟಕ್ಕೆ ಬೇಕಾದ ಅಕ್ಕಿ ಮತ್ತಿತರ ವಸ್ತುಗಳನ್ನು ನೀಡಲಾಯಿತು. ಅಲ್ಲದೆ ಬಡ ಕಾಮಿ೯ಕ ರೋಗಿಗೆ ವಾಟರ್ ಬೆಡ್ಡ್ ನೀಡಲಾಯಿತು. ಪೇತ್ರಿ,ಚೇರ್ಕಾಡಿ ,ಕರಂಬಳ್ಳಿದೊಡ್ಡನಗುಡ್ಡೆ ,ಉಡುಪಿ, ಮಣಿಪಾಲದ 10 ಬಡ ಕಾರ್ಮಿಕ ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಯಿತು.

ಈ ಸಂದರ್ಭದಲ್ಲಿ ಹೋಂಡಾಕ್ಟರ್ ತಂಡದ ಸದಸ್ಯರಾದ ಡಾ.ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಸವಿತಾ ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲು ,ದಿನಕರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಬಂಟಕಲ್ಲು : ಲಾಕ್ ಡೌನ್ ಸಮಯ ಕೊರೋನೇತರ ರೋಗಿಗಳಿಗೆ ಬಂಟಕಲ್ಲಿನಿಂದ ಉಚಿತ ಅಂಬುಲೆನ್ಸ್ ಸೇವೆ

Posted On: 01-05-2021 02:15PM

ಕಾಪು : ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೊರೋನಾ ಸೋಂಕಿತರನ್ನು ಹೊರತು ಪಡಿಸಿ ಅನಾರೋಗ್ಯದಿಂದಿರುವ ರೋಗಿಗಳಿಗೆ ಉಡುಪಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋಗುವವರಿಗೆ ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರು ಉಚಿತ ಅಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದಾರೆ.

ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಉಚಿತ ಸೇವೆಯನ್ನು ನೀಡಲಾಗುವುದು . ತುರ್ತು ಸಂಧರ್ಭದಲ್ಲೂ ಇದರ ಸೇವೆಯನ್ನು ಪಡೆಯಬಹುದಾಗಿದೆ.

ಬಂಟಕಲ್ಲು, ಶಿರ್ವ ಆಸುಪಾಸಿನ ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯಬಹುದಾಗಿದೆ.

ಈ ಸೇವೆಯನ್ನು ಪಡೆಯಲಿಚ್ಚಿಸುವವರು (ಉಮೇಶ್ ರಾವ್ : 9880181052) ಇವರನ್ನು ಸಂಪರ್ಕಿಸಬಹುದು ಎಂದು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಬಂಟಕಲ್ಲು ತಿಳಿಸಿದ್ದಾರೆ.

ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ

Posted On: 01-05-2021 02:09PM

ಕಾಪು : ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕರಾದ ಲಾಲಾಜಿ ಆರ್. ಮೆಂಡನ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ಸಭೆ ನಡೆಸಿದ ಮಾನ್ಯ ಶಾಸಕರು ದಾನಿಗಳ ಮುಖಾಂತರ ಆಕ್ಸಿಜನ್ ವ್ಯವಸ್ಥೆ ಆರಂಭಿಸಿ, ಆಸ್ಪತ್ರೆಗೆ ಬರುವ ಒಳ ಹಾಗೂ ಹೊರ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದೆ, ಆಸ್ಪತ್ರೆಗೆ ಕೋವಿಡ್ -19 ವಾಕ್ಸಿನ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಸ್ಥಳೀಯರ ನೆರವಿನೊಂದಿಗೆ ಸಮರ್ಪಕವಾಗಿ ಜನಸಂದಣಿಯಾಗದೆ ಸೂಕ್ತವ್ಯವಸ್ಥೆಯೊಂದಿಗೆ ಮಾಡುವುದಾಗಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದೆ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ ಎಂದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷರಾದ ಯಶೋದ, ಹೆಜಮಾಡಿ ಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್, ತಾಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಸ್ಥಳೀಯರಾದ ಪ್ರಕಾಶ್ ಶೆಟ್ಟಿ, ಸುರೇಶ್ ಹಾಗೂ ವೈದ್ಯಾಧಿಕಾರಿ ರಾಜಶ್ರೀ, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹೆಜಮಾಡಿ : ಹೊಳೆಯಲ್ಲಿ ಅನಾಥ ಶವ ಪತ್ತೆ

Posted On: 01-05-2021 01:32PM

ಕಾಪು : ಕೆಲ ದಿನಗಳ ಹಿಂದೆ ಹೆಜಮಾಡಿ ಭಾಗದಲ್ಲಿ ಶಾಂಭವಿ ನದಿಯಲ್ಲಿ ತೇಲುತ್ತಿದ್ದ ಅನಾಥ ಶವವನ್ನು ಕಂಡು ಸಾರ್ವಜನಿಕರು ಪಡುಬಿದ್ರಿ ಪೋಲೀಸರಿಗೆ ಮಾಹಿತಿ ನೀಡಿದ್ದರು. ಪೋಲೀಸರು ಬಂದಾಗ ಶವವು ಮುಲ್ಕಿ ವ್ಯಾಪ್ತಿಯಲ್ಲಿದ್ದ ಪರಿಣಾಮ ಮುಲ್ಕಿ ಠಾಣೆಗೆ ಮಾಹಿತಿಯನ್ನು ನೀಡಿದ್ದರು. ಮುಲ್ಕಿ ಪೋಲೀಸರು ಸ್ಥಳಕ್ಕಾಗಿಮಿಸಿದಾಗ ನೀರಿನ ಹರಿತಕ್ಕೆ ಶವವೇ ಇರಲಿಲ್ಲ.

ದಿನ ಕಳೆದು ಕೊಳೆತು, ಗುರುತು ಸಿಗದ ಸ್ಥಿತಿಯಲ್ಲಿದ್ದ ಆ ಶವವು ಹೆಜಮಾಡಿ ಕಡವಿನ ಬಾಗಿಲು ಬಳಿ ಪತ್ತೆಯಾದ ಸಂದರ್ಭ ಹೆಜಮಾಡಿ ಗ್ರಾಮಪಂಚಾಯತ್, ಪಡುಬಿದ್ರಿ ಪೋಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಲಾಯಿತು. ಶವವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.

ಬಂಟಕಲ್ಲು: ಕೋವಿಡ್ ಲಸಿಕೆ ಪೂರ್ವ ರಕ್ತದಾನ ಶಿಬಿರ

Posted On: 30-04-2021 08:21PM

ಕಾಪು : ಸ್ಥಳೀಯ ರಾಜಾಪುರ ಸಾರಸ್ವತ ಯುವ ವೃಂದದ ಸದಸ್ಯರು ಕೋವಿಡ್ ಲಸಿಕೆ ಪಡೆಯುವ ಮುಂಚಿತವಾಗಿ ರಕ್ತದಾನ ಮಾಡುವ ಉಪಯುಕ್ತ ಕಾರ್ಯಕ್ರಮವು ಇಂದು ಜರುಗಿತು. 60 ಕ್ಕೂ ಹೆಚ್ಚು ಭಾರಿ ರಕ್ತ ದಾನ ಮಾಡಿದ ರಕ್ತದಾನಿ ಶ್ರೀ ದೇವದಾಸ್ ಪಾಟ್ಕರ್ ಲವರ ನೇತೃತ್ವದಲ್ಲಿ ಇಂದು ಮಣಿಪಾಲ ಕೆ ಎಮ್ ಸಿ ಯ ಬ್ಲಡ್ ಬ್ಯಾಂಕ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಿರ್ವ ಗ್ರಾ.ಪಂ ಅಧ್ಯಕ್ಷ , ರಾ ಸಾ ಯುವ ವೃಂದದ ಗೌರವಾಧ್ಯಕ್ಷರೂ ಆಗಿರುವ ಕೆ. ಆರ್. ಪಾಟ್ಕರ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು. ಕೊರೋನಾ ಸಂಕಷ್ಟ ಸಮಯದಲ್ಲಿ ಯುವ ವೃಂದದ ಸದಸ್ಯರು ಲಸಿಕೆ ಪಡೆಯುವ ಮುಂಚಿತವಾಗಿ ಸ್ವಯಂ ಪ್ರೇರಿತರಾಗಿ ರಕ್ತ ದಾನ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.

ರಕ್ತದ ಕೊರತೆಯಾಗುವಂತಹ ಈ ಸಂಧರ್ಭದಲ್ಲಿ ಇದರ ನೇತೃತ್ವ ವಹಿಸಿ ಕಾರ್ಯಕ್ರಮ ಆಯೋಜಿಸಿದ ರಕ್ತದಾನಿ ದೇವದಾಸ ಪಾಟ್ಕರ್ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತ ನಿಧಿ ಮಣಿಪಾಲ ಇವರು ಸಹಯೋಗ ನೀಡಿದ್ದು ಅಭಯ ಹೆಲ್ಪ್ ಲೈನ್ ನ ಸತೀಶ್ ಸಾಲಿಯಾನ್, ರಕ್ತ ನಿಧಿಯ ಡಾ| ದಿವ್ಯ , ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಡಾ| ಶ್ರೀರಾಮ್ ಮರಾಠೆ ಹಾಗೂ ಯುವ ವೃಂದದ ಸದಸ್ಯರು ಉಪಸ್ಥಿತರಿದ್ದರು. 25 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ವೃಂದದ ಪೂರ್ವಧ್ಯಕ್ಷ ವಿರೇಂದ್ರ ಪಾಟ್ಕರ್ ಹಾಗೂ ಸುಬ್ರಹ್ಮಣ್ಯ ವಾಗ್ಲೆ ಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

< controls src="https://nammakaup.in/application/upload/14922" alt="" --->