Updated News From Kaup

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟದಿಂದ ಬೆಳಪು ರಾಜು ಪೂಜಾರಿಗೆ ನೆರವು

Posted On: 13-07-2020 10:49PM

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ ಕಾಪು ಪಡುಬಿದ್ರಿ ಘಟಕದ ವತಿಯಿಂದ.. ರಾಜು ಪೂಜಾರಿ ಅವರನ್ನು ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಧನಸಹಾಯದೊಂದಿಗೆ ಶಾಲು, ಹಣ್ಣು , ಹಂಪಲು ಕೊಟ್ಟು ಗೌರವಿಸಲಾಯಿತು. ರಾಜು ಪೂಜಾರಿಯವರು ಬೆಳಪು ಗ್ರಾಮದ ದಿವಂಗತ ಚಂದು ಪೂಜಾರಿ ಮತ್ತು ಅಕ್ಕು ಪೂಜಾರ್ತಿ ದಂಪತಿಯ ಪುತ್ರ, ರಾಜು ಪೂಜಾರಿ ಯವರು ಸಾಂಪ್ರದಾಯಿಕ ಶಿಕ್ಷಣ ಪಡೆಯದಿದ್ದರೂ 25 ವರ್ಷ ಮುಂಬೈಯಲ್ಲಿ ದುಡಿದು ಆ ಬಳಿಕ ದೈವದ ಆಕರ್ಷಣೆಗೆ ಒಳಗಾಗಿ ಊರಲ್ಲಿ ನೆಲೆನಿಂತರು. ಬೆಳಪು ಜಾರಂದಾಯ ದೈವಸ್ಥಾನದಲ್ಲಿ ದೈವದ ಅನುಗ್ರಹ ಎಣ್ಣೆ ಪಡೆದು ದೈವಾರಾಧನೆ ಕ್ಷೇತ್ರದಲ್ಲಿ ಸುಮಾರು 40 ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಜಾರಂದಾಯ ಬಂಟ ಪಾತ್ರಿಯಾಗಿ ಎಣ್ಣೆ ಪಡೆದು ಉಡುಪಿ ಜಿಲ್ಲೆಯ ಹತ್ತು ಹಲವಾರು ಪ್ರಸಿದ್ಧ ಕ್ಷೇತ್ರ, ದೈವಸ್ಥಾನಗಳಲ್ಲಿ ಬಂಟ ಪಾತ್ರಿಯಾಗಿ ದರ್ಶನ ಸೇವೆಯನ್ನು ನೀಡಿದ್ದಾರೆ ಐದು ವರ್ಷಗಳ ಹಿಂದೆ ದೈವಾರಾಧನೆ ಕ್ಷೇತ್ರದಲ್ಲಿ ನಿವೃತ್ತಿ ಹೊಂದಿದ್ದಾರೆ. ಇದೀಗ 90ರ ಇಳಿವಯಸ್ಸಿನಲ್ಲಿ ಪತ್ನಿ ಗಿರಿಜಾ ಪೂಜಾರ್ತಿ ಮಕ್ಕಳಾದ ವೆಂಕಟೇಶ್ ಚಂದ್ರಾವತಿ ಗಂಗಾಧರ ರಮೇಶ್ ಬಾಲಕೃಷ್ಣ ಅವರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.. ಕೋರೋನ ಎಂಬ ಮಹಾರೋಗದ ತುರ್ತು ಸಂದರ್ಭದಲ್ಲಿ ಯಾವುದೇ ಸರ್ಕಾರವು ದೈವ ಚಾಕ್ರಿ ವರ್ಗದವರಿಗೆ ಸಹಾಯಧನ ಇತರ ಯಾವುದೇ ಯೋಜನೆಗಳು ನೆರವಿಗೆ ಬಂದಿರುವುದಿಲ್ಲ ಈ ತುರ್ತು ಸಂದರ್ಭದಲ್ಲಿ ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ ಹಾಗೂ ಕಾಪು ಪಡುಬಿದ್ರಿ ಘಟಕದ ಸದಸ್ಯರ ಧನಸಹಾಯ, ನೆರವಿನೊಂದಿಗೆ ಗೌರವಿಸಲಾಯಿತು ರಾಜು ಪೂಜಾರಿಯವರಿಗೆ ತುಳು ನಾಡಿನ ಸಮಸ್ತ ದೈವ-ದೇವರು ಅವರಿಗೆ ಆರೋಗ್ಯ ಆಯುಷ್ಯ ಭಾಗ್ಯ ಕೊಟ್ಟು ಕರುಣಿಸಲಿ ಎಂದು ಸರ್ವ ಸದಸ್ಯರು ಪ್ರಾರ್ಥಿಸುತ್ತೇವೆ.. ಈ ಒಂದು ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಘವ ಸೇರಿಗಾರ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಹಾಗೂ ಕಾಪು ಪಡುಬಿದ್ರಿ ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ ಉಪಾಧ್ಯಕ್ಷರಾದ ಮಾಧವ ಪಂಬದ ಹಾಗೂ ಸತೀಶ್ ಪೂಜಾರಿ ಶಮ್ಮಿ ಕಪೂರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಪೂಜಾರಿ ಕಟಪಾಡಿ ಗೌರವಾಧ್ಯಕ್ಷರಾದ ಸುಧಾಕರ್ ಆಚಾರ್ಯ ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು. ವರದಿ : ವಿನೋದ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ

ಯುವಸಮುದಾಯ ರೋಟರಿಯೊಂದಿಗೆ ಕೈಜೋಡಿಸಬೇಕು-ಪಡುಬಿದ್ರಿ ರೋಟರಿ

Posted On: 13-07-2020 09:26PM

ಪಡುಬಿದ್ರಿ: ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕವಾಗಿ ರೋಟರಿ ಸಂಸ್ಥೆಯು ಸೇವೆ ನೀಡುತಿದ್ದು, ಯುವ ಸಮುದಾಯ ರೋಟರಿ ಸಂಸ್ಥೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲಾ ಮಾಜಿ ವೈಸ್‌ಚಯರ್ಮೆನ್ ಇಬ್ರಾಹಿಂ ಸಾಹೇಬ್ ಕರೆ ನೀಡಿದ್ದಾರೆ. ಅವರು ಶನಿವಾರ ಪಡುಬಿದ್ರಿ ಸಾಯಿ ಆರ್ಕೇಡ್ ಸಭಾಭವನದಲ್ಲಿ ಪಡುಬಿದ್ರಿ ರೋಟರಿ ಸಂಸ್ಥೆಯ ೨೦೨೦- ೨೧ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ರೋಟರಿಯ ಗೃಹಪತ್ರಿಕೆ ಸ್ಪಂಧನ ಬಿಡುಗಡೆಗೊಳಿಸಿದ ರೋಟರಿ ವಲಯ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರ್‌ಪು, ಮಾತನಾಡಿ, ಸಮಯವನ್ನು ನಾವು ಕೈಯಲ್ಲಿ ಹಿಡಿದು ಕೊಂಡು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಬೇಕು. ಆಗ ಸಮಾಜ ಸುಧಾರಣೆ ಸಾಧ್ಯ ಎಂದರು. ೨೦೨೦-೨೧ನೇ ಸಾಲಿನ ಅಧ್ಯಕ್ಷ ಕೇಶವ ಸಿ. ಸಾಲ್ಯಾನ್, ಕಾರ್ಯದರ್ಶಿ ನಿಯಾಝ್ ತಂಡದ ಪದಗ್ರಹಣವನ್ನು ಅಮೀನ್ ಮತ್ತು ಅವರ ತಂಡದ ಪದಪ್ರಧಾನ ನಡೆಯಿತು. ಪಡುಬಿದ್ರಿ ಗ್ರಾಮ ಪಂಚಾಯತಿಯ ಸ್ವಚ್ಛತಾ ಕರ್ಮಚಾರಿಗಳಾದ ಶಶಿ ಹಾಗೂ ಸುಶಾಂತ್, ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ, ವಲಯ ಮಾಜಿ ಸೇನಾನಿ ರಮೀಝ್ ಹುಸೈನ್, ನಿಕಟಪೂರ್ವ ಅಧ್ಯಕ್ಷ ರಿಯಾಝ್ ಮುದರಂಗಡಿ, ಕಾರ್ಯದರ್ಶಿ ಸಂತೋಷ್, ಕೃಷ್ಣ ಬಂಗೇರ ಮುಂತಾದವರನ್ನು ಸನ್ಮಾನಿಸಲಾಯಿತು. ವಲಯ ಸೇನಾನಿ ಹರೀಶ್ ಶೆಟ್ಟಿ ಪೊಲ್ಯ ಉಪಸ್ಥಿತರಿದ್ದರು. ರಿಯಾಝ್ ಮುದರಂಗಡಿ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವರದಿ ವಾಚಿಸಿದರು. ಬಿ.ಎಸ್. ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ರೋಟರಿ ಕ್ಲಬ್ ಪಡುಬಿದ್ರಿ 2020-21 ಸಾಲಿನ ಪದಗ್ರಹಣ ಕಾರ್ಯಕ್ರಮ

Posted On: 13-07-2020 09:12PM

ರೋಟರಿ ಕ್ಲಬ್ ಪಡುಬಿದ್ರಿ ಇದರ 2020- 21 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ 11/7/20 ಶನಿವಾರದಂದು ನಡೆಯಿತು. ಅಧ್ಯಕ್ಷರಾಗಿ ಕೇಶವ ಸಿ ಸಾಲ್ಯಾನ್ ಮತ್ತು ಕಾರ್ಯದರ್ಶಿಯಾಗಿ ಮುಹಮ್ಮದ್ ನಿಯಾಜ್ ಅಧಿಕಾರವನ್ನು ಸ್ವೀಕರಿಸಿದರು. ಆ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಇಬ್ರಾಹಿಂ ಸಾಬ್ ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ನವೀನ್ ಅಮೀನ್, ವಲಯ ಸೇನಾನಿ ಹರೀಶ್ ಶೆಟ್ಟಿ ಪೊಲ್ಯ , ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ ವೇದಿಕೆಯಲ್ಲಿ ರಿಯಾಜ್ ಮುದರಂಗಡಿ ಹಾಗೂ ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಪಡುಬಿದ್ರಿ ಪಂಚಾಯತ್ ನಲ್ಲಿ 20 ವರ್ಷ ದಿಂದ ಸೇವೆಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸನ್ಮಾನಿಸಿದರು. ಕಾರ್ಯಕ್ರಮವನ್ನು ಬಿಎಸ್ ಆಚಾರ್ಯರು ನಿರ್ವಹಿಸಿದರು.

ನೀಲಾವರ ಗೋಶಾಲೆಗೆ ಒಂದು ಗೋವು ಮತ್ತು ಹಸಿರು ಆಹಾರವನ್ನು ನೀಡಿದ ಪಡುಬಿದ್ರಿಯ ಭಗವತಿ ತಂಡ

Posted On: 12-07-2020 04:53PM

ಪಡುಬಿದ್ರಿ.12ಜುಲೈ :- ಸಮಾಜ ಸೇವೆಯನ್ನು ಮೂಲದ್ಯೇಯವೆಂದು ಮೈಗೂಡಿಸಿಕೊಂಡಿರುವ ಪಡುಬಿದ್ರಿಯ ಭಗವತಿ ತಂಡ ಕಳೆದ ಎರಡು ದಿನಗಳ ಹಿಂದೆ ಉಡುಪಿಯ ನೀಲಾವರ "ಕಾಮದೇನು" ಗೋಶಾಲೆಗೆ ಒಂದು ಗೋವು ಮತ್ತು ದನದ ಹಸಿರು ಆಹಾರವನ್ನು ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಮತ್ತು ಭಗವತಿ ತಂಡದ ಸದಸ್ಯರು ಉಪಸ್ಥಿತರಿದ್ದರು ಈವರೆಗೆ 57 ಗೋವನ್ನು ರಕ್ಷಿಸಿ, ನೀಲಾವರ ಗೋಶಾಲೆಗೆ ನೀಡಿರುವುದರಿಂದ, ಗೋಶಾಲೆಯ ಪ್ರಮಾಣಿಕ ಕೈಂಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಇಂತಹ ಸೇವೆಯನ್ನು ಮಾಡಿರುವ ಭಗವತಿ ತಂಡ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ.. ಉತ್ತಮ ತಂಡವೆನಿಸಲಿ

ಸರಿಸುಮಾರು 400 ವರ್ಷ ಇತಿಹಾಸವಿರುವ ಉಡುಪಿಯ ಅಬ್ಬರದ ಬೊಬ್ಬರ್ಯ

Posted On: 11-07-2020 08:57AM

ಉಡುಪಿಯ ಕಾರಣಿಕದ ಕ್ಷೇತ್ರ 400 ವರ್ಷಗಳ ಇತಿಹಾಸವಿರುವ ದೈವಸ್ಥಾನ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ವುಡ್ ಲ್ಯಾಂಡ್ಸ್ ಹೋಟೆಲ್ ಹತ್ತಿರ ಉಡುಪಿಯ ನಗರದ ಹೃದಯ ಭಾಗದಲ್ಲಿದೆ. ಬೊಬ್ಬರ್ಯನ ಉಡುಪಿಗೆ ಆಗಮನದ ವಿಷಯ ತತ್ರ ಯುಗದಲ್ಲಿ ಚಂದ್ರನಿಗೆ ರಾಹು ವಿನಿಂದ ಶಾಪ ವಿಮೋಚನೆ ಗೊಳಿಸಲು ಉಡುಪಿಗೆ ಬಂದಿದ್ದು. ಕಲಿಯುಗದಲ್ಲಿ ಉಡುಪಿಗೆ ಬೊಬ್ಬರ್ಯನ ಆಗಮನ. ಬೊಬ್ಬರ್ಯನು ಇಂದ್ರಾಳಿಗೆ ಬಂದು ಪಂಚ ದುರ್ಗಿ ದೇವಿ ಜೊತೆ ನಿನ್ನ ಸನ್ನಿಧಾನದಲ್ಲಿ ನನಗೆ ನೆಲೆ ನಿಲ್ಲಲು ಜಾಗ ಕೊಡಬೇಕು ಎಂದು ಕೇಳಲು, ದೇವಿಯು ಇಲ್ಲಿ ಬೇಡ ಉಡುಪಿಯಲ್ಲಿ ಅನಂತೇಶ್ವರ ದೇವರ ರಥೋತ್ಸವ ನಡೆಯುತ್ತಿದೆ ಅಲ್ಲಿಗೆ ಹೋದರೆ ನಿನಗೆ ನಿಲ್ಲಲು ಜಾಗ ಸಿಗುವುದು ಎಂದು ದೇವಿಯ ವಾಣಿಯನ್ನು ತಿಳಿದು ಉಡುಪಿ ಅನಂತೇಶ್ವರ ದೇವರ ರಥ ಎಳೆಯುವಾಗ ರಥಕ್ಕೆ ಎದೆಕೊಟ್ಟು ನಿಲ್ಲಿಸಿದನು. ಜನರು ಎಷ್ಟೇ ಪ್ರಯತ್ನ ಪಟ್ಟು ರಥವನ್ನು ಎಳೆದರು ರಥ ಸ್ವಲ್ಪವೂ ಮುಂದೆ ಕದಲುವುದಿಲ್ಲ. ಆ ಸಮಯದಲ್ಲಿ ದೇವಸ್ಥಾನ ಮುಖ್ಯಸ್ಥರು ಚರ ಮಾಡಿ ಜ್ಯೋತಿಷ್ಯ ಪ್ರಶ್ನೆ ರೂಪದಲಿ ನೋಡಲು ಬೊಬ್ಬರ್ಯನ ನೆಂಬ ವಿರಾಟ ರೂಪದ ದೈವವು ರಥವನ್ನು ತಡೆ ಹಿಡಿದಿದೆ ಎಂದು ತಿಳಿಯಿತು ಮತ್ತು ದೈವಕ್ಕೆ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ನೆಲೆನಿಲ್ಲಲು ಜಾಗವನ್ನು ಒದಗಿಸಿಕೊಡಬೇಕು ಎಂದು ತಿಳಿಯಿತು ಆ ಸಮಯದಲ್ಲಿ ದೇವಸ್ಥಾನ ಮುಖ್ಯಸ್ಥರು ಬೊಬ್ಬರ್ಯನನು ತಂಕು ಪೇಟೆಯಲ್ಲಿದ್ದ. ಜುಮಾದಿ ಮತ್ತು ಕಲ್ಕುಡ ದೈವದೊಂದಿಗೆ ಪ್ರತಿಷ್ಠೆ ಮಾಡಿ ನಂಬುದಾಗಿ ತೀರ್ಮಾನಿಸಿದರು, ನಂತರ ರಥವು ಕದಲಿತು. ಅನಂತರ ತೆಂಕು ಪೇಟೆಯಲ್ಲಿ ಜುಮಾದಿ ಮತ್ತು ಕಲ್ಕುದ ದೈವದ ಒಟ್ಟಿಗೆ ಸ್ಥಾನವನ್ನು ನಿರ್ಮಿಸಿ ಬೊಬ್ಬರ್ಯನನು ನೆಲೆಗೊಳಿಸಿದರು. ಈಗಲೂ ಅನಂತೇಶ್ವರ ದೇವಸ್ಥಾನದ ವತಿಯಿಂದ ಕೋಲಾ ಹೂವಿನ ಪೂಜೆ ವಿಶೇಷ ಪೂಜೆ ಮಾರಿಪೂಜೆ ಪೂಜಾದಿಗಳು ನಡೆಯುತ್ತಿದೆ. ಉಡುಪಿ ನಗರದ ಅಬ್ಬರದ ದೈವವಾಗಿ ಕಾರ್ಣಿಕ ವನ್ನು ಮೆರೆಯುತ್ತಿದೆ. ಈ ಪುಣ್ಯ ಕ್ಷೇತ್ರದ ದೈವಸ್ಥಾನದಲ್ಲಿ ಮೂರು ದಿವಸ ಹೊಸ ನೇಮೋತ್ಸವ ನಡೆಯುತ್ತದೆ. ಮೊದಲ ದಿವಸ ಬೊಬ್ಬರ್ಯನ ನೇಮೋತ್ಸವ ಹಾಗೂ ಸವಾರಿ ಎರಡನೇ ದಿವಸ ಕಾಂತೇರಿ ಜುಮಾದಿ ಹಾಗೂ ಬಂಟ ಪಿಲಿಚಂಡಿ ಹಾಗೂ ಬಂಟ ಆಗು ಪಂಜುರ್ಲಿ ದೈವದ ನೇಮ ನಡೆಯುತ್ತದೆ ಮೂರನೇ ದಿವಸ ಕಲ್ಕುಡ ಬೈಕಡ್ತಿ ಕೊರಗಜ್ಜ ದೈವದ ನೇಮೋತ್ಸವ ನಡೆಯುತ್ತದೆ. ಪ್ರತಿ ತಿಂಗಳು ಸಂಕ್ರಮಣ ಪೂಜೆ ನಡೆಯುತ್ತದೆ. ಸಾವಿರಾರು ಭಕ್ತಾದಿಗಳು ಗಂಧಪ್ರಸಾದ ಹಣ್ಣುಕಾಯಿ ಕಾಯಿ ಮಾಡಿ ಸನ್ನಿಧಾನಕ್ಕೆ ಭೇಟಿಕೊಡುತ್ತಾರೆ ತಮ್ಮ ಕಷ್ಟ ಸಮಸ್ಯೆಗಳನ್ನು ಹೇಳಿಕೊಂಡು ದೈವಕ್ಕೆ ಹರಕೆ ಹೇಳುತ್ತಾರೆ. ದೈವದ ಹೆಸರು ಅಬ್ಬರದ ಬಬ್ಬರ್ಯ ಎಂದೆ ಹೆಸರುವಾಸಿಯಾಗಿದೆ. ಬರಹ :ವಿನೋದ್ ಶೆಟ್ಟಿ ಶೆಟ್ಟಿ ಬೊಬ್ಬರ್ಯ ದೈವಸ್ಥಾನ ಉಡುಪಿ

"ಆನ್ ಲೈನ್ ಆಫ್ ಲೈನ್ ಮಧ್ಯೆ ಮಕ್ಕಳು ಲೈನ್ ತಪ್ಪದಿರಲಿ"

Posted On: 10-07-2020 10:17PM

ಇತ್ತೀಚೆಗೆ ನಮ್ಮೆಲ್ಲರನ್ನು ಕಾಡುತ್ತಿರುವ ಆತಂಕ ಈ ಕರೋನಾ ವೈರಸ್ ನದ್ದು. ಈ ಮಾರಕ ವ್ಯಾಧಿಯ ಭೀತಿ ಜನಜೀವನದ ಶೈಲಿಯನ್ನು ಬದಲಾಯಿಸಿದೆ ಎಲ್ಲರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿದೆ. ಇದರ ಮಧ್ಯೆ ದೊಡ್ಡ ಸವಾಲು ಇದ್ದದ್ದು ಶಿಕ್ಷಣ ಕ್ಷೇತ್ರಕ್ಕೆ ಶಾಲಾ ಕಾಲೇಜುಗಳ ಪರೀಕ್ಷೆಗಳಾಗಿಲ್ಲ ಎನ್ನುವ ಚಿಂತೆ ಪಾಲಕ, ಶಿಕ್ಷಕರನ್ನು ಕಾಡುತ್ತಿದೆ.ಶಿಕ್ಷಣವನ್ನು ಅತ್ಯಂತ ಸ್ಪಧಾ೯ತ್ಮಕವಾಗಿ ಸ್ವೀಕರಿಸಿದ ಮಕ್ಕಳು ಆತಂಕಕ್ಕೆ ಒಳಗಾದಾಗ ಈ ಕ್ಷೇತ್ರಕ್ಕೆ ತಂತ್ರಜ್ಞಾನದ ನೆರಳು ಬಿದ್ದಿದೆ.ಇದರ ಸಾಧಕ ಬಾಧಕದ ಬಗ್ಗೆ ಯೋಚನೆ ಮಾಡುದಾದರೆ, ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡಿದರೆ ದಾರಿ ತಪ್ಪುವ ಭಯದಿಂದ ಮೊಬೈಲ್ ನೀಡಲು ಹಿಂದೆ ಮುಂದೆ ನೋಡುತ್ತಿದ್ದವರು ಇಂದು ಅವರೇ ಸ್ವತಃ ಮಕ್ಕಳ ಕೈಗೆ ಮೊಬೈಲ್ ನೀಡಿ ಸಣ್ಣ ಸ್ಕ್ರೀನ್ ಒಳಗೆ ತರಗತಿ ಪ್ರಾರಂಭವಾಗಿದೆ. ಈಗ ಪಾಲಕರ ಸಮಸ್ಯೆ ಎನೆಂದರೆ ಮಗುವಿನ ಕೈಗೆ ಮೊಬೈಲ್ ನೀಡಿ ಎದ್ದು ಹೋಗುವ ಹಾಗಿಲ್ಲ ಅವರ ಹತ್ತಿರ ಮೂರು ನಾಲ್ಕು ಗಂಟೆ ಕುಳಿತಿರಬೇಕಾದ ಅನಿವಾಯ೯ತೆ ಸೃಷ್ಟಿಯಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ತಯಾರು ಮಾಡುವ ಸಾಧ್ಯತೆ ಕಡಿಮೆಯಾಗಿದೆ. ಶಾಲೆಯಲ್ಲಿ ಶಿಕ್ಷಕರು ಕರಿಹಲಗೆಯ ಮೇಲೆ ಬರೆದು ಮಗುವಿಗೆ ಶಿಕ್ಷಣ ನೀಡುವ ರೀತಿ ಶಿಕ್ಷಕರ ಮಾತೃ ವಾತ್ಸಲ್ಯದ ಪ್ರೀತಿ ತೋರುವ ಶಿಕ್ಷಣ ನಾವು ಆನ್ ಲೈನ್ ಶಿಕ್ಷಣದಲ್ಲಿ ಖಂಡಿತ ಕಾಣಲು ಸಾಧ್ಯವಿಲ್ಲ .ಈ ಯಾಂತ್ರಿಕ ಶಿಕ್ಷಣದಿಂದ ಗುರು ಶಿಷ್ಯರ ಸಂಬಂಧ ದೂರವಾಗುವ ಸಂಭವ ಹೆಚ್ಚಾಗುತ್ತಿದೆ.ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಉದ್ದೇಶ ತನ್ನಮಗುವಿನ ಭವಿಷ್ಯ ಉತ್ತಮವಾಗಲಿ ತಾನು ಪಟ್ಟ ಕಷ್ಟದ ಶಿಕ್ಷಣ, ಜೀವನ ತನ್ನ ಮಗ/ಮಗಳಿಗೆ ಸಿಗಬಾರದು ಎಂಬ ಉದ್ದೇಶವಾಗಿದೆ.ಖಾಸಗಿ ಶಾಲೆಗೆ ನೀಡುವ ಶುಲ್ಕ ಹೊಂದಾಣಿಕೆಗೆ ಪಾಲಕರು ಪಡುತ್ತಿರುವ ಕಷ್ಟ ದೇವರಿಗೆ ಪ್ರೀತಿ. ಇದೀಗ ಆನ್ ಲೈನ್ ಶಿಕ್ಷಣದಿಂದ ತನ್ನ ಮಕ್ಕಳಿಗೆ ಎಂಡ್ರಾಯಿಡ್ ಫೋನ್ ಅದೇ ರೀತಿ ಇಂಟರ್ ನೆಟ್ ಪ್ಯಾಕ್ ಹಾಕಬೇಕಾದ ಅನಿವಾಯ೯ತೆ ಯಿದೆ.ಶುಲ್ಕ ಕಟ್ಟಲು ಕಷ್ಟಪಡುವ ತಂದೆ ತಾಯಂದಿರಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಈ ಆನ್ ಲೈನ್ ವ್ಯವಸ್ಥೆಗೆ ಮತ್ತಷ್ಟು ಸಾಲ ಮಾಡುವ ಅನಿವಾಯ೯ತೆಯಿದೆ. ಮೊದಲೇ ಈ ಕರೋನಾ ಪರಿಣಾಮದಿಂದ ಜೀವನ ನಡೆಸುದೇ ಕಷ್ಟವಾಗಿರುವ ಪೋಷಕರು ವ್ಯಥೆ ಪಡಬೇಕಾಗಿದೆ. ನಮ್ಮ ಮನೆಯ ಹತ್ತಿರದ ಪಾಲಕರು ಹೇಳಿದ ಮಾತು ನೆನಪಿಗೆ ಬರುತ್ತದೆ ಮೊದಲೇ ಜೀವನ ನಡೆಸಲು ಸಾಲ ಮಾಡಬೇಕಾದ ಅನಿವಾಯ೯ತೆ ಇರುವ ನಾವು ಈ ಆನ್ ಲೈನ್ ನಿಂದ ದಿಕ್ಕೆ ತೋರದಿರುವ ದೋಣಿಯಾಗಿದ್ದೆವೆ" ಅವರ ಮಾತು ಎಷ್ಟೋ ಮಂದಿ ಪಾಲಕರಿಗೆ ಅನ್ವಯವಾಗುತ್ತದೆ.ಕೆಲವು ಖಾಸಗಿ ಶಾಲೆಗಳು ಇದನ್ನು ಹಗಲು ದರೋಡೆಯಾಗಿ ಮಾಡಿರುವುದು ಒಪ್ಪತಕ್ಕ ವಿಷಯವಲ್ಲ.ಸಕಾ೯ರಕ್ಕೆ ಈ ಬಗ್ಗೆ ಇರುವ ಗೊಂದಲ ಇನ್ನು ಸರಿಯಾಗಿಲ್ಲ. ಕಾಲೇಜಿಗೆ ಹೋಗುವ ಮಕ್ಕಳದ್ದು ಇನ್ನೊಂದು ಕಥೆ .ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಕಂಪ್ಯೂಟರ್, ಲ್ಯಾಪ್ ಟಾಪ್ ತೆರೆದು ಆನ್ ಲೈನ್ ತರಗತಿಗೆ ಲಾಗಿನ್ ಮಾಡಿ ಕೂತರೂ ಪಾಠದಲ್ಲಿ ಏಕಾಗ್ರತೆಯಿಲ್ಲ ಮನ ಬಂದಂತೆ ಸಾಮಾಜಿಕ ಜಾಲ ತಾಣದ ಆನ್ವೇಷಣೆ ಯಲ್ಲಿ ಮಗ್ನರಾಗಿರುತ್ತಾರೆ ಎಂಬುದು ಬಹಳಷ್ಟು ಪಾಲಕರ ದೂರು.ತರಗತಿಯಲ್ಲಿಯೇ ಈ ಮನೋಭಾವದ ವಿದ್ಯಾಥಿ೯ ಯ ಕಡೆಗೆ ಗಮನ ಹರಿಸುದೇ ಕಷ್ಟವಾಗಿರುವಾಗ ಈ ಆನ್ ಲೈನ್‌ ನಲ್ಲಿ ಕೇವಲ ಕಾಟಚಾರಕ್ಕಾಗಿ ತರಗತಿ ಯಾಗುತ್ತಿದೆ ಎಂಬುವುದು ಉಪನ್ಯಾಸಕರ ವಾದ. ಈ ವಾದ ವಿವಾದದ ಮಧ್ಯೆ ಮಕ್ಕಳ ಮೇಲೆ ಈ ರೀತಿಯ ಶಿಕ್ಷಣ ಯಾವ ರೀತಿ ಪರಿಣಾಮ ಬೀಳುತ್ತದೆ ಎನ್ನುವುದು ಮುಖ್ಯವಾಗಿದೆ. ಶಾಲಾ ತರಗತಿಯೊಳಗೆ ಮೌನವಿರುತ್ತದೆ ಶಿಕ್ಷಕರು ಪಾಠ ಮಾಡುವ ಸಂದಭ೯ ವಿದ್ಯಾಥಿ೯ಗಳು ನೋಟ್ಸ್ ಮಾಡುವುದು ಮುಖ್ಯಾಂಶಗಳು ಗುರುತು ಹಾಕುವ ಸಂದಭ೯ ಅವರಿಗೆ ಮನನವಾಗುತ್ತದೆ. ಶಿಕ್ಷಕರ ಮೇಲಿನ ಗೌರವ, ಭಯದಿಂದ ಪಾಠವನ್ನು ಓದುತ್ತಾರೆ ಇದರಿಂದ ವಿದ್ಯಾಥಿ೯ಗಳಿಗೆ ಪರೀಕ್ಷಾ ದೃಷ್ಟಿಯಿಂದ ಅಲ್ಲದೆ ಸಾಂಪ್ರದಾಯಿಕ ಶಿಕ್ಷಣದ ದೃಷ್ಠಿಯಿಂದ ಒಳ್ಳೆಯದು. ಆದರೆ ಆನ್ ಲೈನ್ ನಲ್ಲಿ ಯಾವುದೇ ಸಂವಾದ ಚಚೆ೯ಯಿಲ್ಲದ ಏಕಮುಖ ಸಂವಹನವಾಗಿದೆ. ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಈ ಅನ್ ಲೈನ್ ವ್ಯವಸ್ಥೆ ಯಾಕೆ ಸಕಾ೯ರಿ ಶಾಲೆಯ ವಿದ್ಯಾಥಿ೯ಗಳ ಬಗ್ಗೆ ಯಾಕೆ ಚಿಂತನೆಯಿಲ್ಲ ಎಂಬ ವಾದವೂ ಇದೆ. ಮಕ್ಕಳ ಹಕ್ಕುಗಳ ಆಂದೋಲನದ ಒತ್ತಾಯದ ಪ್ರಕಾರ: ಮಕ್ಕಳಿಗೆ ಉಚಿತ ಇಂಟರ್ ನೆಟ್ ನೀಡಬೇಕು. ಆರ್.ಟಿ.ಇ ವಿದ್ಯಾಥಿ೯ಗಳಿಗೆ ಉಚಿತ ಕಂಪ್ಯೂಟರ್ ವ್ಯವಸ್ಥೆ ನೀಡಬೇಕು. ಮಕ್ಕಳ ರಕ್ಷಣಾ ನಿಯಮಗಳನ್ನು ಜಾರಿಗೆ ತರಬೇಕು. ಶಿಕ್ಷಕರಿಗೆ ತರಬೇತಿಯ ವ್ಯವಸ್ಥೆಯಾಗಬೇಕು. ಮಕ್ಕಳ ಸ್ವಾತಂತ್ರಕ್ಕೆ ಧಕ್ಕೆಯಾಗಬಾರದು ಎಂಬ ಅಂಶಗಳನ್ನು ಸಕಾ೯ರಕ್ಕೆ ಸಲ್ಲಿಸಿದೆ. ಮತ್ತೊoದು ವಾದ ಪ್ರಕಾರ ಈಗೀರುವ ಪರಿಸ್ಥಿತಿಯಲ್ಲಿ ಶಾಲೆ ಕಾಲೇಜುಗಳನ್ನು ತೆರೆಯುವುದು ಸರಿಯಲ್ಲ. ಮಕ್ಕಳು ಸಮಾಜದ ಆಸ್ತಿ ಈ ಅಸ್ತಿಗೆ ಶಕ್ತಿ ತುಂಬಿಸುವ ಕಾಯ೯ ಶಿಕ್ಷಕರಿಂದ ನಡೆಯುತ್ತಿದೆ. ಎಲ್ಲರ ಹಿತದೃಷ್ಠಿಯಿಂದ ಈಗಿರುವ ಈ ಪರಿಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣ ಒಳ್ಳೆಯದು ಆದರೆ ಈ ಬಗ್ಗೆ ಪೋಷಕರಿಗೆ ತಿಳಿ ಹೇಳುವುದು ಅಗತ್ಯವಿದೆ.ಹೊಸ ತನಕ್ಕೆ ಬದಲಾವಣೆ ಸಂದಭ೯ ಹಲವಾರು ತೊಂದರೆಯಿರುತ್ತದೆ ಆದರೆ ಅದೆಲ್ಲವನ್ನು ನಿವಾರಿಸಿ ಮುಂದೆ ಸಾಗಬೇಕು. ಮಕ್ಕಳ ಭವಿಷ್ಯದ ದೃಷ್ಠಿ ಯಿoದ ಇದು ಅಗತ್ಯವಿದೆ. ನಿರಾಸೆ ಬೇಡ ಆಶಾವಾದಿಯಾಗಿರೋಣ.ಶಾಲೆ ಕಾಲೇಜುಗಳು ವ್ಯಾಪಾರಿ ಮನೋಭಾವನೆ ಕಡಿಮೆ ಮಾಡಲಿ ಸಕಾ೯ರ ಈ ಬಗ್ಗೆ ಸ್ಪಷ್ಟ ನಿಧಾ೯ರ ತಿಳಿಸಲಿ .ಈ ಕರೋನಾದೊಂದಿಗೆ ಬದುಕುವ ಸಂದಭ೯ ಆಗುವ ತೊಂದರೆಗಳನ್ನು ಸಮಥ೯ವಾಗಿ ಎದುರಿಸೋಣ.ಮಕ್ಕಳ ಭವಿಷ್ಯ ಅದೇ ರೀತಿ ನಮ್ಮ ಭವಿಷ್ಯದ ಹಿತ ದೃಷ್ಠಿಯಿಂದ ಜಾಗ್ರತೆಯಾಗಿರೋಣ. ಅದಷ್ಟು ಬೇಗ ಈ ವ್ಯಾಧಿ ದೂರವಾಗಿ ಶಾಲೆ ಕಾಲೇಜುಗಳಲ್ಲಿ ಮಕ್ಕಳ್ಳ ಕಲರವ ಮತ್ತೊಂಮ್ಮೆ ಮೊಳಗಲಿ' ಭರವಸೆಯ ಹೊಸ ಬೆಳಕು ಮೂಡಲಿ.ಕಟ್ಟುವೆವು ನಾವು ಹೊಸ ನಾಡನ್ನು ಕಲೆಯ ಬೀಡನ್ನು ಎಂಬಂತೆ ಜೊತೆಯಾಗಿ ಬೆಳೆಯೋಣ. ರಾಘವೇಂದ್ರ ಪ್ರಭು, ಕವಾ೯ಲು ಉಡುಪಿ ಯುವ ಲೇಖಕರು, ಶಿಕ್ಷಣ ಪ್ರೀಯರು

ತುಳುನಾಡ ದೈವರಾಧಕರೆನ ಸಂಘಟನೆ ಒಡಿಪು ಜಿಲ್ಲೆದ ಪಡುಬಿದ್ರಿ ಘಟಕದ ಉದಿಪನದ ಲೇಸ್

Posted On: 10-07-2020 10:10PM

ಕಾಪು:(10/07/2020 ನಮ್ಮ ಕಾಪು ನ್ಯೂಸ್) ತುಳುನಾಡು ದೈವಾರಾಧಕೆರೆನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆದ ಕಾಪು ಪಡುಬಿದ್ರಿ ಘಟಕದ ಉಚ್ಚಯ ಕಾಪು ವಿಧಾನ ಸಭಾ ವ್ಯಾಪ್ತಿದ ಕಳತ್ತೂರು ಪೈಯ್ಯಾರುದ ಬರ್ಪಾಣಿ ಶ್ರೀ ಧೂಮಾವತಿ ದೈವಸ್ದಾನದ ಅಂಗಣಡ್ ಈ ತಿಂಗಳುದ ಎಡ್ಮ ತಾರೀಖುದಾನಿ ನಡುತುಂಡು.. ಒಡಿಪು ಜಿಲ್ಲೆದ ದೈವದ ಚಾಕ್ರಿ ಮಲ್ಪುನಗುಲ್ ಬೊಕ್ಕ ತುಳು ನಾಡುದ ಸರ್ವ ಬಂಧುಲು ಮಾತ ಒಟ್ಟಾಯಿನ ಈ ಕೂಟಡ್ ಕಾಪು ಪಡುಬಿದ್ರಿ ಘಟಕದ ಅಧ್ಯಕ್ಷರಾದ್ ಯಶೋಧರ ಶೆಟ್ಟಿ ಬಗ್ಗೇಡಿ ಗುತ್ತು ಎರ್ಮಾಳು ಮಾತೇರ್ಗ್ ಲ ಒಮ್ಮತಡ್ ಅಯ್ಕೆ ಅಯೆರ್.. ಅರೆನೊಟ್ಟುಗೆ ಬೆರಿಸಾಯದ್ ಹಿರಿಯೆರ್ ಕಿರಿಯೆರ್ ಈ ಸಂಘಟನೆಗ್ ಪದಾಧಿಕಾರಿಲು ಅದ್ ಮುಲ್ಪ ಅಯ್ಕೆಯಾಯೆರ್.. ತುಳುನಾಡ ಅಚಾರ ವಿಚಾರದ ಬಗ್ಗೆ ಸಂಘಟನೆ ನನಾತ್ ಬುಲೆಯಡ್ ತುಳುನಾಡುದ ದೈವ ದೇವೆರೆನ ಅನುಗ್ರಹ ನಿಗಲೆನ ಮಿತ್ತ್ ಸದಾ ಉಪ್ಪಡ್.. ನಮ್ಮ ಕಾಪು ನ್ಯೂಸ್.

ಶಿರ್ವದಲ್ಲಿ ಕಾಣೆಯಾಗಿದ್ದ ಯುವತಿಯ ಮೃತದೇಹ ಬಾವಿಯಲ್ಲಿ ಪತ್ತೆ

Posted On: 10-07-2020 10:47AM

ಶಿರ್ವ.10, ಜುಲೈ : ಕ್ವಾಲಿಟಿ ಕೋಳಿ ಫಾರ್ಮ ಹಿಂದುಗಡೆ ಶಿರ್ವ ಗ್ರಾಮದಲ್ಲಿ ವಾಸವಾಗಿದ್ದ ಯಲಪ್ಪ ಇವರ ಮಗಳಾದ ಸೌಭಾಗ್ಯ 18 ವರ್ಷ ಈಕೆಯು ದಿನಾಂಕ 08/07/2020 ರ ಬುಧವಾರ ಬೆಳಿಗ್ಗೆ 10:00 ಗಂಟೆಗೆ ಶಿರ್ವ ಗ್ರಾಮದ ಕ್ವಾಲಿಟಿ ಪೌಲ್ಟ್ರಿ ಫಾರ್ಮ್ ಎಂಬಲ್ಲಿರುವ ಬಾಡಿಗೆ ಮನೆಯಿಂದ ಭೂತಬೆಟ್ಟು ಎಂಬಲ್ಲಿರುವ ಸಬಾಸ್ಟಿನ್ ಬರ್ಬೋಜ ಎಂಬವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಅಲ್ಲಿಗೂ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ, ಎಂದು ಶಿರ್ವ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿರುತ್ತಾರೆ, ದೂರಿನ ಅನ್ವಯ ಪರಿಶೀಲನೆ ನಡೆಸಿದಾಗ ಕಾಣೆಯಾಗಿದ್ದ ವ್ಯಕ್ತಿಯ ಮೃತ ದೇಹ ಮನೆಯ ವಠಾರದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ, ಸಮಾಜ ಸೇವಕ ಸೂರಿ ಶೆಟ್ಟಿ ಅವರು ಮೃತ ದೇಹವನ್ನು ಬಾವಿಯಿಂದ ಹೊರ ತೆಗೆಯಲು ಸಹಕರಿಸಿದರು.

ಕಟೀಲು ದೇವಸ್ಥಾನದ ಎರಡು ಪ್ರತ್ಯೇಕ ಪ್ರಕರಣಗಳ ಆರೋಪ-ಆರೋಪಿತರಿಗೆ ನಿರೀಕ್ಷಣಾ ಜಾಮೀನು

Posted On: 09-07-2020 08:37PM

ಕಟೀಲು ದೇವಸ್ಥಾನದ ಅಸ್ರಣ್ಣರ ಆಡಳಿತ ವೈಫಲ್ಯದ ಬಗ್ಗೆ ಹಾಗೂ ಅಲ್ಲಿಯ ದೇವಸ್ಥಾನದ ವಿಧಿವಿಧಾನ, ಹಣಸಂದಾಯದ ದುರುಪಯೋಗ, ಮತ್ತಿತರ ಅವ್ಯವಹಾರಗಳ ಬಗ್ಗೆ ಸಾರ್ವಜನಿಕವಾಗಿ ಯೂಟ್ಯೂಬ್ ಪಬ್ಲಿಕ್ ಮಿರರ್ ಚಾನೆಲ್ ಮುಖಾಂತರ ಪ್ರಸಾರ ಮಾಡಿ ಕಟೀಲು ದೇವಸ್ಥಾನದ ಪ್ರಖ್ಯಾತಿ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ವಸಂತ ಗಿಳಿಯಾರ್, ಸಂಜೀವ ಮಡಿವಾಳ, ಮತ್ತು ಅನಂತ ರಾವ್ ರವರ ಮೇಲೆ ಮೂಲ್ಕಿ ಪೊಲೀಸ್ ಠಾಣೆ ಮತ್ತು ಬಜ್ಪೆ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ರಾಜೇಶ್ ಕೊಟ್ಟಾರಿ ಮತ್ತು ಗಣೇಶ್ ಶೆಟ್ಟಿ ಅವರು ದಾಖಲಿಸಿದ್ದು, ಮಾನ್ಯ ಮೂರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ವಾದವನ್ನು ಆಲಿಸಿ ಯಾವುದೇ ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವುದಿಲ್ಲವೆಂದು ಪರಿಗಣಿಸಿ ಎರಡು ಪ್ರಕರಣಗಳಲ್ಲಿಯೂ ನಿರೀಕ್ಷಣಾ ಜಾಮೀನನ್ನು ಮೂವರು ಆರೋಪಿತರಿಗೆ ಆದೇಶಿಸಿರುತ್ತಾರೆ. ಆರೋಪಿತರ ಪರವಾಗಿ ನ್ಯಾಯವಾದಿಗಳಾದ ಆರೂರು ಸುಕೇಶ್ ಶೆಟ್ಟಿ, ಗಿರೀಶ್ ಎಸ್.ಪಿ ಏಳಿಂಜೆ, ಸಂತೋಷ್ ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.

ಆನ್ಲೈನ್ ಶಿಕ್ಷಣ ವಿದ್ಯಾರ್ಥಿಗಳ ಜೀವನಕ್ಕೆ ದೊಡ್ಡ ಕಂಟಕ

Posted On: 09-07-2020 10:11AM

ರಾಜ್ಯ ಸರ್ಕಾರ ಯಾರದೋ ಒತ್ತಾಯಕ್ಕೆ ಮಣಿದು, ಬಡ ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡಲು ಹೊರಟಿರುವ ಶಿಕ್ಷಣ ಯಾವತ್ತೂ ವಿದ್ಯಾರ್ಥಿಗಳ ವಿಕಸನಕ್ಕೆ ಅಡಿಪಾಯವಾಗದು.ಅದೆಷ್ಟೋ ಮನೆಯಲ್ಲಿ ಉಣ್ಣಲು ಗತಿ ಇಲ್ಲದೆ ಇರುವ ಕಡೆಯಲ್ಲಿ ಮಕ್ಕಳು ಮೊಬೈಲ್ ಲ್ಯಾಪ್ಟಾಪ್ ಹಿಡಿದು ವಿದ್ಯಾಭ್ಯಾಸ ಮಾಡಲು ಹೇಗೆ ಸಾಧ್ಯ? ಮಳೆಗಾಲದಲ್ಲಿ ಕೆಲವು ಕಡೆ ಇಂಟರ್ನೆಟ್ ತೊಂದರೆ ಇವುಗಳನ್ನು ಅರಿಯದೆ, ಇವತ್ತು ಹೈಕೋರ್ಟ್ ಕೊಟ್ಟ ತೀರ್ಪು ಸಮಂಜಸವಲ್ಲ. ಯಾವುದೋ ವಿದ್ಯಾಸಂಸ್ಥೆಗಳ ಒತ್ತಡಕ್ಕೆ ಮಣಿದು ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ. ಈ ವಿಚಾರದ ಬಗ್ಗೆ ಇನ್ನೊಮ್ಮೆ ಚರ್ಚೆ ನಡೆಸಿ ಕೋರೋನ ಕಮ್ಮಿಯಾದ ಮೇಲೆ ಶಾಲೆಗಳನ್ನು ತೆರೆಯುವುದು ಒಳಿತು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಸರ್ಕಾರ ದಾರಿ ಮಾಡಿಕೊಟ್ಟಂತ್ತಾಗುತ್ತೆ. ಕೆಲವು ದಂಧೆಕೋರರ ಹಣದ ಆಸೆಗೆ ಬಡ ಮಕ್ಕಳ ಜೀವನವನ್ನು ಬಲಿ ಕೊಡಬೇಡಿ.