Updated News From Kaup
ಇನ್ನಂಜೆ ರೋಟರಿ ಸಮುದಾಯದಳ ಉದ್ಘಾಟನೆ ಮತ್ತು ಪದಪ್ರಧಾನ ಸಮಾರಂಭ
Posted On: 04 Oct 2020, 01:22 PM
ರೋಟರಿ ಶಂಕರಪುರ ವಲಯ-5 ರೋಟರಿ ಜಿಲ್ಲೆ 3182
ನೂತನ ರೋಟರಿ ಸಮುದಾಯ ದಳ ಇದರ ಉದ್ಘಾಟನಾ ಮತ್ತು ಪದಪ್ರಧಾನ ಸಮಾರಂಭ ಇಂದು ಇನ್ನಂಜೆಯಲ್ಲಿ ನಡೆಯಿತು.
ಇದರ ನೂತನ ಅಧ್ಯಕ್ಷರಾಗಿ Rcc ಪ್ರಶಾಂತ್ ಶೆಟ್ಟಿ ಮಂಡೇಡಿ ಹಾಗೂ ಕಾರ್ಯದರ್ಶಿಯಾಗಿ Rcc ಮನೋಹರ್ ಕಲ್ಲುಗುಡ್ಡೆ ಹಾಗೂ ದಂಡಪಾಣಿಯಾಗಿ Rcc ಗಣೇಶ್ ಆಚಾರ್ಯ ಇನ್ನಂಜೆ ಆಯ್ಕೆಯಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ ಗವರ್ನರ್ ನವೀನ್ ಅಮೀನ್ ಶಂಕರಪುರ ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ವ್ಯಕ್ತಿತ್ವ ವಿಕಸನಕ್ಕೆ ರೋಟರಿ ಕ್ಲಬ್ ಸಹಾಯ ಮಾಡುತ್ತದೆ ಎಂದರು,
ಸಭಾಪತಿ ರೋಟರಿಯನ್ ಮಾಲಿನಿ ಶೆಟ್ಟಿ ಇನ್ನಂಜೆ ರೋಟರಿ ಕ್ಲಬ್ ನ ಉದ್ದೇಶಗಳನ್ನು ತಿಳಿಸಿದರು. ಡಿಸ್ಟ್ರಿಕ್ ಗವರ್ನರ್ ನಾಗರಾಜ್ ಎಚ್ ಎನ್ ಜನಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಮತ್ತು ಅವಕಾಶಗಳನ್ನು ತೆರೆದಿಡುತ್ತದೆ, ಉದ್ಯೋಗ ಉನ್ನತಿಗಾಗಿ ರೋಟರಿಯು ಸಹಕರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರವಿವರ್ಮ ಶೆಟ್ಟಿ ಇನ್ನಂಜೆ, Rcc ಜಯರಾಮ್ ರೊಡ್ರಿಗಸ್, Rcc ವಿಕ್ಟರ್ ಮಾರ್ಟಿಸ್, Rcc ಸಂದೀಪ್ ಬಂಗೇರ ಶಂಕರಪುರ,Rcc ಹರೀಶ್ ಕುಲಾಲ್, ಕೊಪ್ಪ ಆನಂದ್ ಶೆಟ್ಟಿ, Rcc ಚಂದ್ರ ಪೂಜಾರಿ, ದಿವೇಶ್ ಶೆಟ್ಟಿ ಇನ್ನಂಜೆ, ಗ್ಲಾಡ್ಸನ್ ಕುಂದರ್ ಹಾಗೂ ಮತ್ತಿತರು ಪಾಲ್ಗೊಂಡಿದ್ದರು.
ನಂತರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ, ಅಧ್ಯಕ್ಷರು, ಕಾರ್ಯದರ್ಶಿ ಮತ್ತು ದಂಡಪಾಣಿಯವರಿಗೆ ಪದಪ್ರಧಾನ ಮಾಡಲಾಯಿತು.
ಶಂಕರಪುರ ರೋಟರಿ ಗವರ್ನರ್ ವಿಕ್ಟರ್ ಮಾರ್ಟಿಸ್ ಸ್ವಾಗತಿಸಿ, ಕಾರ್ಯದರ್ಶಿ Rcc ಮನೋಹರ್ ಕಲ್ಲುಗುಡ್ಡೆ ಇವರು ಧನ್ಯವಾದಗೈದರು.
ವರದಿ : ವಿಕ್ಕಿ ಪೂಜಾರಿ ಮಡುಂಬು
ಸ್ವಚ್ಛತೆ ಮನೆಯಿಂದಲೇ ಆರಂಭವಾಗಲಿ - ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ
Posted On: 02 Oct 2020, 03:52 PM
ಉಡುಪಿ :- ಸ್ವಚ್ಚತೆ ಎಂಬುದು ನಮ್ಮ ಮನೆಯಿಂದ ಪ್ರಾರಂಭವಾಗಬೇಕು.ಪ್ರತಿ ಪ್ರಜೆಯೂ ಸ್ವಯಂಪ್ರೇರಿತನಾಗಿ ತನ್ನ ಸಮಾಜವನ್ನು ಶುಚಿಯಾಗಿಟ್ಟುಕೊಂಡರೆ ಆಗ ಯಾವುದೋ ಸಂಘ ಸಂಸ್ಥೆಗಳು ಸ್ವಚ್ಛಭಾರತ ಅಭಿಯಾನ ಮಾಡುವ ಅಗತ್ಯವೇ ಇಲ್ಲ ಎಂದು ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು. ಅವರು ಕೆಮ್ಮಣ್ಣು ಸಕಾ೯ರಿ ಪ.ಪೂ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಸ್ವಚ್ಚತಾ ಅಭಿಯಾನ ಮತ್ತು ಗಾಂಧಿ ಜಯಂತಿ ಆಚರಣಿ ಕಾಯ೯ಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ನಾವು ಬದಲಾದರೆ ಮಾತ್ರ ದೇಶ ಬದಲಾಗುವುದು ಎಂದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ನಂದಕಿಶೋರ್, ಶಾಲಾ ಪ್ರಾಂಶುಪಾಲರು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ತೋನ್ಸೆ ಗ್ರಾ.ಪಂ, ಗಣಪತಿ ವ್ಯವಸಾಯ ಸೇವಾ ಸಹಕಾರಿ ಸಂಘ, ನಿಮ೯ಲ ತೋನ್ಸೆ, ಸೌಹಾಧ೯ ಸಮಿತಿ', ಸ್ವಚ್ಚ ಭಾರತ್ ಫ್ರೆಂಡ್ಸ್,ಲಯನ್ಸ್ ರೋಟರಿ ಕ್ಲಬ್, ರಿಕ್ಷಾ ಚಾಲಕರು ಶ್ರೀ.ಕ್ಷೇ.ಧ.ಗ್ರಾ ಯೋಜನೆ,ಪುಟ್ ಬಾಲ್ ಫ್ರೆಂಡ್ಸ್, ಮುಂತಾದವರು ಸಹಕರಿಸಿದರು.
ಇನ್ನಂಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಂದ ಇನ್ನಂಜೆ ಬಾಲವನದಲ್ಲಿ ಸ್ವಚ್ಛತಾ ಕಾರ್ಯಕ್ರಮ
Posted On: 02 Oct 2020, 03:14 PM
ಇನ್ನಂಜೆ ಗ್ರಾಮ ಪಂಚಾಯತ್ ಪ್ರತಿ ಬಾರಿಯೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಹಾಗುಹೋಗುಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡು ಮಾದರಿ ಗ್ರಾಮ ಅನಿಸಿಕೊಂಡಿದೆ.
ಇಂದು 151 ನೇ ಗಾಂಧಿ ಜಯಂತಿಯ ಪ್ರಯುಕ್ತ ಇನ್ನಂಜೆ ಬಾಲವನದಲ್ಲಿ ಬೆಳೆದಿದ್ದ ಗಿಡ, ಬಳ್ಳಿ, ಪೊದೆಗಳನ್ನು ಕಡಿಯುವುದರ ಮೂಲಕ ಸ್ವಚ್ಛ ಇನ್ನಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.
ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರಾಜೇಶ್ ಶೆಣೈ, ಮಾಜಿ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ, ಇನ್ನಂಜೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ಶ್ರೀ ಚಂದ್ರಶೇಖರ ಸಾಲಿಯಾನ್. ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಕಲ್ಯಾಲು, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಪ್ರೀತಿ ಶೆಟ್ಟಿ, ಹರೀಶ್, ಸಂದೀಪ್, ವಜ್ರೇಶ್, ಪವಿತ್ರ, ರೋಕೆಶ್, ಗ್ರಾಮಸ್ಥರು ಆದ ಅರುಣ್ ಶೆಟ್ಟಿ, ಗಣೇಶ್ ಆಚಾರ್ಯ, ಚಿಂತನ್ ಉಪಸ್ಥಿತರಿದ್ದರು
ವರದಿ : ವಿಕ್ಕಿ ಪೂಜಾರಿ ಮಡುಂಬು
NAMMA KAUP NEWS
ಮಂಗಳೂರು ಡ್ರಗ್ಸ್ ಪ್ರಕರಣ ಭೇದಿಸುವರೇ ನೂತನ ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ?
Posted On: 01 Oct 2020, 06:35 PM
ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರ ತಂಡದಲ್ಲಿದ್ದ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ ರಾಜೇಂದ್ರ ನಾಯಕ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಕಾಪು ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ಶಿವಪ್ರಕಾಶ್ ಅವರ ಸ್ಥಾನಕ್ಕೆ ನಿಯೋಜಿಸಲಾಗಿದೆ.
ಡ್ರಗ್ಸ್ ಜಾಲವನ್ನು ಬೇಧಿಸಲು ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಲ್ಪಟ್ಟಿರುವ ನೈಜೀರಿಯಾದ ಪ್ರಜೆ ಫ್ರಾಂಕ್ ಎಂಬಾತನ ವಿಚಾರಣೆ ತೀವ್ರಗೊಳಿಸಿದ್ದಾರೆ. ಈತ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಸ್ಥಳಗಳಲ್ಲಿ ತಪಾಸಣೆ ನಡೆಸುವ ಜೊತೆಗೆ ಬೆಂಗಳೂರಿನಲ್ಲಿ ಆತನೊಂದಿಗೆ ಸಂಪರ್ಕದಲ್ಲಿದ್ದ ಇತರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತ ಸಂಗ್ರಹಿಸಿಟ್ಟುಕೊಂಡಿರಬಹುದಾದ ಮಾದಕ ಪದಾರ್ಥಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಗೂ ಪೊಲೀಸರು ಮುಂದಾಗಿದ್ದಾರೆ.
ಬೆಟ್ಟಿಂಗ್, ಸಿನಿಮಾಕ್ಕೂ ಡ್ರಗ್ಸ್ ನಂಟು:
ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳು ಮತ್ತು ಸಿನಿಮಾರಂಗದ ಕೆಲವರಿಗೂ ಮಂಗಳೂರಿನ ಡ್ರಗ್ಸ್ ಪ್ರಕರಣದೊಂದಿಗೆ ನಂಟಿದೆ. ಬಂಧಿಸಲ್ಪಟ್ಟಿರುವವರು ಡ್ರಗ್ಸ್ ಪಾರ್ಟಿ ನಡೆಸಿರುವುದು ಅದರಲ್ಲಿ ಕೆಲವು ಮಂದಿ ಬುಕ್ಕಿಗಳು ಮುಂಬೈ, ಬೆಂಗಳೂರಿನ ಸಿನಿಮಾ ಕ್ಷೇತ್ರದವರು ಕೂಡ ಪಾಲ್ಗೊಂಡಿರುವ ಬಗ್ಗೆ ಪೊಲೀಸರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇರಳದಿಂದ ಗಾಂಜಾ ಪೂರೈಕೆ
ಒಂದೆಡೆ ಸಿಂತೆಟ್ ಡ್ರಗ್ಸ್ ಗಳ ಪೂರೈಕೆ ಜಾಲದ ಹಿಂದೆ ಸಿಸಿಬಿ ಎಕನಾಮಿಕ್ ಎಂ ನಾರ್ಕೊಟಿಕ್ ಪೊಲೀಸರು ಬೆನ್ನು ಬಿದ್ದಿದ್ದು ಇನ್ನೊಂದೆಡೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯವರು ಗಾಂಜಾ, ಚರಸ್ ಮೊದಲಾದ ಮಾದಕ ವಸ್ತುಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಂಗಳೂರಿಗೆ ಕೇರಳ ಶಿವಮೊಗ್ಗ ಮೊದಲಾದೆಡೆಗಳಿಂದ ಭಾರೀ ಪ್ರಮಾಣದಲ್ಲಿ ಸಾಗಾಟವಾಗುತ್ತಿದೆ ಎನ್ನಲಾಗಿದ್ದು ಪ್ರಮುಖ ಪೆಡ್ಲರ್ಗಳೊಂದಿಗೆ ಸಂಪರ್ಕ ಹೊಂದಿರುವವರ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕುಡಿಯುವ ನೀರು ಪೋಲು ಕೇಳುವವರು ಯಾರು ಇಲ್ಲವೇ ?
Posted On: 30 Sep 2020, 09:55 PM
ಹಿರಿಯಡಕ -ಉಡುಪಿ ಮುಖ್ಯ ರಸ್ತೆಯಲ್ಲಿ (ಅಂಜಾರು ಕ್ರಾಸ್) ಸ್ಯಾಬ್ ಒಡೆದು ಕಳೆದ 10 ದಿನದಿಂದ ನಿರಂತರವಾಗಿ ಕುಡಿಯುವ ನೀರು ಚರಂಡಿ ಸೇರುತ್ತಿದೆ. ಸ್ಥಳೀಯರ ಪ್ರಕಾರ ದಿನಕ್ಕೆ ಅಂದಾಜು ಹತ್ತು ಸಾವಿರ ಲೀಟರ್ ನೀರು ಚರಂಡಿಗೆ ಹೋಗುತ್ತಿದೆ.ಈ ರಸ್ತೆಯ ಪಕ್ಕದಲ್ಲಿ ನಿರಂತರವಾಗಿ ನೀರು ಹರಿಯುತ್ತಿರುದರಿಂದ ಕೆಸರು ಉಂಟಾಗಿ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿದೆ.
ಈ ಬಾರಿ ಮಳೆ ಬಂದ ಕಾರಣ ನೀರಿನ ಸಮಸ್ಯೆ ಉಂಟಾಗಲಾರದು ಆದರೆ ಈ ರೀತಿಯಲ್ಲಿ ಶುದ್ದ ನೀರು ಪೋಲಾಗುತ್ತಿರುದನ್ನು ನೋಡಿಯೂ ಗಮನ ಹರಿಸದ ಗ್ರಾಮ ಪಂಚಾಯತ್ ನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಅತೀ ಶೀಘ್ರದಲ್ಲಿ ನೀರಿನ ಸ್ಲಾಬ್ ದುರಸ್ತಿಗೊಳಿಸಿ ಕುಡಿಯುವ ನೀರು ಹಾಳಾಗದಂತೆ ಮಾಡಬೇಕಾಗಿದೆ.
ವರದಿ : ರಾಘವೇಂದ್ರ ಪ್ರಭು ಕರ್ವಾಲು
ನಮ್ಮ ಕಾಪು ನ್ಯೂಸ್
ಅಕ್ಟೋಬರ್ 19ರವರೆಗೆ 20% ರಿಯಾಯಿತಿ ದರದಲ್ಲಿ ಮೂಡುಬಿದ್ರಿಯ ತೆನಸ್ ರೆಸ್ಟೋರೆಂಟ್
Posted On: 30 Sep 2020, 01:36 PM
ಪಿಜ್ಜಾಪ್ರಿಯರಿಗೆ ಶುಭಸುದ್ದಿ.ಮೂಡಬಿದ್ರೆ ಪರಿಸರದ ಜನತೆ ಇನ್ನುಮುಂದೆ ಸುಪೀರಿಯರ್ ಕ್ವಾಲಿಟಿ ಯ ಪ್ಯಾನ್ ಪಿಜ್ಜಾದ ರುಚಿ ಸವಿಯಲು ದೂರದ ಮಂಗಳೂರಿಗೋ ಇಲ್ಲ ಬೇರಾವುದೋ ಊರಿಗೆ ಹೋಗಬೇಕಾಗಿಲ್ಲ.ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು , ಕೈಗೆಟುಕುವ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ಒದಗಿಸುವ ಉದ್ದೇಶದೊಂದಿಗೆ ಮೂಡುಬಿದಿರೆ ನಗರದ ಹೃದಯಭಾಗದಲ್ಲಿರುವ ಸಿಟಿ ಪಾಯಿಂಟ್ ಕಾಂಪ್ಲೆಕ್ಸ್(ಬದ್ರಿಯಾ ಜುಮ್ಮಾ ಮಸೀದಿ ಬಳಿ) ನಲ್ಲಿ ನೂತನ ಪಿಜ್ಜಾ ರೆಸ್ಟೋರೆಂಟ್ ‘ತೆನಸ್’ ಶುಭಾರಂಭಗೊಂಡಿದೆ.
ಸ್ವಚ್ಛತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ 100% ಪ್ಯಾನ್ ಪಿಜ್ಜಾ ಒದಗಿಸುವುದು ಮತ್ತು ಪಿಜ್ಜಾ ಡೊ, ಸಾಸ್ ಇತ್ಯಾದಿಗಳನ್ನು ದಿನಂಪ್ರತಿ ತಾಜಾವಾಗಿ ರೆಸ್ಟೋರೆಂಟ್ ನ ಕಿಚನ್ ನಲ್ಲಿಯೇ ತಯಾರಿಸುವುದು ಇಲ್ಲಿನ ವಿಶೇಷ.
ರುಚಿರುಚಿಯಾದ ಪಿಜ್ಜಾದೊಂದಿಗೆ ಬರ್ಗರ್, ಪಾಸ್ತಾ, ಮೊಮೋಸ್, ಐಸ್ ಕ್ರೀಮ್ , ಜ್ಯೂಸ್ ಸೇರಿದಂತೆ ವಿವಿಧ ವೈರೈಟಿಯ ರುಚಿಕರ ಆಹಾರತಿನಿಸುಗಳು ರೆಸ್ಟೋರೆಂಟ್ ನಲ್ಲಿ ಲಭ್ಯವಿದೆ.
ಗೆಳೆಯರ ಜೊತೆ ಇಲ್ಲ ಫ್ಯಾಮಿಲಿ ಜೊತೆ ಬಂದು ರೆಸ್ಟೋರೆಂಟ್ ನಲ್ಲೆ ಕುಳಿತು, ಹರಟೆಯೊಡೆಯುತ್ತ ‘ತೆನಸ್’ ನ ಫ್ರೆಶ್ ಅಂಡ್ ಹಾಟ್ ಫುಡ್ ಸವಿಯಬೇಕೆನ್ನುವರಿಗೆ ಆರಾಮದಾಯಕ ಆಸನದ ವ್ಯವಸ್ಥೆಇದೆ ಮಾತ್ರವಲ್ಲ ವಾಹನದ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.
ಉದ್ಘಾಟನಾ ಕೊಡುಗೆಯಾಗಿ ಆಹಾರ ತಿನಿಸುಗಳ ಬಿಲ್ ಮೇಲೆ ಅಕ್ಟೋಬರ್ 19 ರವರೆಗೆ ಶೇ.20ರ ನೇರ ರಿಯಾಯಿತಿ ಕೂಡ ಲಭ್ಯ ಎಂಬುದಾಗಿ ರೆಸ್ಟೋರೆಂಟ್ ಮಾಲಕರು ತಿಳಿಸಿದ್ದಾರೆ. ಇನ್ನು, ಮನೆಯಿಂದಲೇ ಆರ್ಡರ್ ಮಾಡುವಿರಾದರೆ 3 ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ಹೋಂ ಡೆಲಿವಿರಿ ವ್ಯವಸ್ಥೆ ರೆಸ್ಟೋರೆಂಟ್ ಕಡೆಯಿಂದ ದೊರಕುತ್ತದೆ.
‘ತೆನಸ್’ ರುಚಿಕರ, ತಾಜಾ, ವೈರೈಟಿ ತಿನಿಸುಗಳು ಮಾತ್ರವಲ್ಲದೇ ತಮ್ಮ ರೆಸ್ಟೋರೆಂಟ್ ನ ಬೋರ್ಡ್, ಸ್ಟಿಕ್ಕರ್ಸ್, ವಿಸಿಟಿಂಗ್ ಕಾರ್ಡ್ ನಲ್ಲಿ ತುಳುಲಿಪಿ ಬಳಸುವ ಮೂಲಕ ಗಮನಸೆಳೆದಿದೆ.ಈ ಮೂಲಕ ನಾವು ತುಳುವಿನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದೇವೆ ಎನ್ನುತ್ತಾರೆ ರೆಸ್ಟೋರೆಂಟ್ ಮಾಲಕರು.
Source: News Bhandara/ನ್ಯೂಸ್ ಭಂಡಾರ
ಕುಂಜೂರಿನಲ್ಲಿ ತುಳು ಬರೆಕ ಅಭಿಯಾನ, ತುಳು ಲಿಪಿ ಫಲಕ ಅಳವಡಿಕೆಗೆ ಚಾಲನೆ
Posted On: 30 Sep 2020, 11:49 AM
ಕಾಪು : ತುಳು ಭಾಷೆ - ಸಂಸ್ಕೃತಿಯ ಮೂಲ ಮೌಲ್ಯವನ್ನು ತಿಳಿಯುವ ಉದ್ದೇಶದಿಂದ 'ತುಳು ಲಿಪಿ' ಕಲಿಯಬೇಕು. ಜನರಿಗೆ ಕಲಿಸಬೇಕು, ತುಳುಲಿಪಿಯಲ್ಲಿ ಬರೆಯಲಾದ ಸಾಹಿತ್ಯವನ್ನು ಓದಬೇಕು ಎಂಬ ಉದ್ದೇಶಗಳಿಂದ ತುಳುವಾಸ್ ಕೌನ್ಸಿಲ್ ಆಯೋಜಿಸಿರುವ "ತುಳು ಬರೆಕ" ಅಭಿಯಾನಕ್ಕೆ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಚಾಲನೆ ನೀಡಲಾಯಿತು.
"ತುಳು ಬರೆಕ" ಅಭಿಯಾನದ ಅಂಗವಾಗಿ ಕುಂಜೂರು ಶ್ರೀ ದುರ್ಗಾದೇವಸ್ಥಾನದ "ನಾಮ ಫಲಕ"ವನ್ನು ತುಳು ಲಿಪಿಯಲ್ಲಿ ಬರೆಯಿಸಿ ಅಳವಡಿಸಲಾಯಿತು .
ಪವಿತ್ರಪಾಣಿ ಕೆ. ಎಲ್. ಕುಂಡಂತಾಯ ಮಾತನಾಡಿ, ತುಳು ಬರೆಯುವ ಅಭಿಯಾನದ ಮೊದಲ ಹೆಜ್ಜೆಯಾಗಿ ಕುಂಜೂರಿನ ಯುವಕರು ಕುಂಜೂರು ದೇಗುಲದ ನಾಮಫಲಕವನ್ನು ತುಳುವಿನಲ್ಲೇ ಬರೆಯಿಸಿ ಮಾತೃ ಭಾಷೆಯನ್ನು ಗೌರವಿಸಿದ್ದಾರೆ. ತುಳುವಾಸ್ ಕೌನ್ಸಿಲ್ ಸಂಘಟನೆಯ ಪ್ರಯತ್ನ ಮಾದರಿಯಾಗಿದೆ ಎಂದರು.
ತುಳುವಾಸ್ ಕೌನ್ಸಿಲ್ ನಿರ್ದೇಶಕ ಅವಿನಾಶ್ ಶೆಟ್ಟಿ ಕುಂಜೂರು ಮಾತನಾಡಿ, ತುಳು ಬರೆಕ ಅಭಿಯಾನದ ಅಂಗವಾಗಿ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ "ನಾಮ ಫಲಕ"ವನ್ನು ತುಳು ಲಿಪಿಯಲ್ಲಿ ಬರೆಯಿಸಿ ಅಳವಡಿಸಲಾಗಿದ್ದು, ಅಭಿಯಾನದ ಮೂಲಕ ಪ್ರತೀ ಮನೆ ಮನೆಗೂ ತುಳು ನಾಮ ಫಲಕ ಅಳವಡಿಸಲು ಯೋಚಿಸಲಾಗಿದೆ ಎಂದರು.
ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಆಡಳಿತ ಮಂಡಳಿ ಸದಸ್ಯ ಶ್ರೀವತ್ಸ ರಾವ್, ಅರ್ಚಕ ವೇ.ಮೂ. ಚಕ್ರಪಾಣಿ ಉಡುಪ, ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ವಿಶ್ವನಾಥ ಉಡುಪ, ಸುಬ್ರಹ್ಮಣ್ಯ ಭಟ್, ಶ್ರೀಧರ ಮಂಜಿತ್ತಾಯ, ಅನಂತರಾಮ ರಾವ್, ರಘುಪತಿ ಉಡುಪ, ರಾಕೇಶ್ ಕುಂಜೂರು, ಪುಷ್ಪರಾಜ ಶೆಟ್ಟಿ, ಭಾರ್ಗವ ಕುಂಡಂತಾಯ, ಕೌಶಿಕ್ ಉಡುಪ ಮೊದಲಾದವರು ಉಪಸ್ಥಿತರಿದ್ದರು.
ಮಾನವೀಯತೆ ಮೆರೆದ ಸುರತ್ಕಲ್ ನ ವೆಂಕಟೇಶ್
Posted On: 30 Sep 2020, 10:08 AM
ಪಲಿಮಾರು ಗ್ರಾಮದ ಅವರಾಲುಮಟ್ಟು ನಿವಾಸಿ ಸುನೀತ ಇವರು ಮೂರು ಸಾವಿರದಷ್ಟು ಹಣ, ದಾಖಲೆಗಳಿರುವ ಪರ್ಸ್ ನ್ನು ಮೂರು ಕಾವೇರಿ ಬಳಿ ಕಳೆದುಕೊಂಡಿದ್ದರು. ಈ ಪಸ್೯ ಸುರತ್ಕಲ್ ನ ಪಡ್ರೆ ಪುಣೋಡಿ ಮನೆಯ ವೆಂಕಟೇಶ್ ಗೆ ಸಿಕ್ಕಿತ್ತು. ಅದರಲ್ಲಿದ್ದ ಮಾಹಿತಿಯ ಆಧಾರದ ಮೇಲೆ ಪರ್ಸನ್ನು ಸುನೀತಾರವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕಾಪು ಹಳೆಮಾರಿಗುಡಿಯಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ವಿಶೇಷ ಚಂಡಿಕಾಯಾಗ
Posted On: 29 Sep 2020, 02:36 PM
ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ,ಕಾಪು, ಅಧಿಕ ಆಶ್ವೀಜ ಪುರುಷೋತ್ತಮ ಮಾಸ ಅಂಗವಾಗಿ ಶ್ರೀ ದೇವಳದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ವಿಶೇಷ ಚಂಡಿಕಾಯಾಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಇಂದು ಜರಗಿತು.
ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ಅಪ್ಪ ಸೇವೆ
Posted On: 29 Sep 2020, 01:35 PM
ಉಚ್ಚಿಲ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಅಪ್ಪ ಸೇವೆಯು ದಿನಾಂಕ 28.9.2020 ನೇ ಸೋಮವಾರ ನಡೆಯಿತು. ಒಟ್ಟು 1115 ಅಪ್ಪ ಸೇವೆಯು ಭಕ್ತರಿಂದ ಬಂದಿದ್ದು. (ಸುಮಾರು 13,000 ಅಪ್ಪ ತಯಾರಿಸಲಾಗಿತ್ತು) ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ, ಅರ್ಚಕ ಯು. ಸೀತಾರಾಮ ಭಟ್, ಗೋವಿಂದ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ದ್ಯುಮಣಿ ಭಟ್, ಸಮಿತಿ ಸದಸ್ಯರು ಮತ್ತು ವ್ಯವಸ್ಥಾಪಕರು ಸಂತೋಷ ಪುತ್ರನ್ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವರದಿ : ವಿಕ್ಕಿ ಪೂಜಾರಿ ಮಡುಂಬು (ನಮ್ಮ ಕಾಪು ನ್ಯೂಸ್)
