Updated News From Kaup
ಆಗಸ್ಟ್ 25 : ಪಡುಬಿದ್ರಿ ಬಂಟರ ಸಂಘದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

Posted On: 21-08-2024 09:10PM
ಪಡುಬಿದ್ರಿ : ಇಲ್ಲಿನ ಬಂಟರ ಸಂಘ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಆಯೋಜನೆಯಲ್ಲಿ ಆಗಸ್ಟ್ 25 ರಂದು ಪಡುಬಿದ್ರಿ ಬಂಟರ ಸಂಘ ಸಭಾಭವನದಲ್ಲಿ ಯುವಕರಿಗೆ ಮತ್ತು ಮಹಿಳೆಯರಿಗೆ ಒಂದು ದಿನದ ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ಗ್ರಾಮೀಣ ಬಂಟರ ಸಂಘ ಟ್ರಸ್ಟ್ ನ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ಮತ್ತು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರು ಡಾ. ದೇವಿಪ್ರಸಾದ್ ಶೆಟ್ಟಿಯವರು ಬುಧವಾರ ಪಡುಬಿದ್ರಿ ಬಂಟರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಂ. ಆರ್. ಜಿ. ಗ್ರೂಪ್‌ನ ಛೇರ್ಮನ್ ಡಾ. ಕೆ. ಪ್ರಕಾಶ್ ಶೆಟ್ಟಿಯವರು ನೆರವೇರಿಸಲಿದ್ದು, ಪಡುಬಿದ್ರಿ ಬಂಟರ ಸಂಘ ದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ಧಾರೆ. ಮುಖ್ಯ ಅತಿಥಿ ಗಳಾಗಿ ಉಡುಪಿ ಗ್ರಾಮೀಣ ಬಂಟರ ಸಂಘ ಟ್ರಸ್ಟ್ ನ ಅಧ್ಯಕ್ಷರು ಅಶೋಕ ಕುಮಾರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘ ದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶಶಿಧರ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಪೂರ್ವ ಅಧ್ಯಕ್ಷರುಗಳಾದ ರವೀಂದ್ರನಾಥ್ ಜಿ ಹೆಗ್ಡೆ, ಸುರೇಶ ಶೆಟ್ಟಿ, ಸಾಂತೂರ್ ಭಾಸ್ಕರ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿಯವರು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭ ಮುಗಿದ ಬಳಿಕ ಡಾ. ಕೆ. ಪ್ರಕಾಶ್ ಶೆಟ್ಟಿಯವರು ಭಾಗವಹಿಸುವ ಅಭ್ಯರ್ಥಿಗಳಿಗೆ ಯಶಸ್ವಿ ಉದ್ಯಮಿಯಾಗಿ ಸಾಗಿ ಬಂದ ರೀತಿಯ ಬಗ್ಗೆ ಯುವಕರಿಗೆ ತಿಳಿಸಿ, ಅವರು ಮುಂದಿನ ದಿನದಲ್ಲಿ ಸ್ವ - ಉದ್ಯೋಗ ಮಾಡಲು ಪ್ರೇರಣೆ ಕೊಡಲಿದ್ದಾರೆ. ಪ್ರೊ. ದಿವ್ಯಾರಾಣಿ ಪ್ರದೀಪ್ ರವರು ಮಹಿಳಾ ಸಬಲೀಕರಣ ಮತ್ತು ಮಹಿಳೆ ಯವರು ಯಾವ ಉದ್ಯಮ ಮಾಡುವ ಮೂಲಕ ಬೆಳೆಯಬಹುದು ಎಂದು ಮಾಹಿತಿ ನೀಡಲಿದ್ದಾರೆ. ಮೈತ್ರಿ ಮಲ್ಲಿ, ಮಹಿಳಾ ಯುವ ಉದ್ಯಮಿ, ಮಂಗಳೂರು ಇವರು ತನ್ನ ಉದ್ಯಮವನ್ನು ಹೇಗೆ ಬೆಳೆಸುತ್ತ ಯಶಸ್ವಿ ಉದ್ಯಮಿಯಾಗಲು ಪ್ರಯತ್ನ ಪಡುವ ಬಗ್ಗೆ ಯುವಕರಿಗೆ ಮಾಹಿತಿ ಮಾಡಲಿದ್ದಾರೆ. ನಂತರ ಡಾ. ಸಿ. ಕೆ.ಮಂಜುನಾಥ್, ಡಾ. ಶುಭ, ಮಾಹೇ, ಪ್ರವೀಣ್ ಶೆಟ್ಟಿ, ಎಂ. ಐ. ಟಿ, ಡಾ. ಸುಧೀರಾಜ್, ಹರೀಶ್, ಡಿವಿಷನಲ್ ಮ್ಯಾನೇಜರ್, ಲೀಡ್ ಬ್ಯಾಂಕ್ ಇವರು ಲೀಡರ್ ಶಿಪ್, ಕಮ್ಯುನಿಕೇಷನ್ ಸ್ಕಿಲ್, ಇಂಟರ್ವ್ಯೂ ತಯಾರಿ, ಬ್ಯಾಂಕ್ ಗಳಿಂದ ಉದ್ಯಮ ಮಾಡಲು ಸಿಗುವ ಸಹಾಯ ಮುಂತಾದ ಅನೇಕ ವಿಷಯ ಗಳ ಬಗ್ಗೆ ತರಬೇತಿ ನೀಡಲಿದ್ದಾರೆ. ಭಾಗವಹಿಸಿದ ಅಭ್ಯರ್ಥಿಗಳಿಗೆ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಸರ್ಟಿಫಿಕೇಟ್ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯದರ್ಶಿ ವಿಜಿತ್ ಶೆಟ್ಟಿ, ಬಂಟರ ಸಂಘದ ಸಿರಿಮುಡಿ ದತ್ತಿ ನಿಧಿಯ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಮಹಿಳಾ ಘಟಕಾಧ್ಯಕ್ಷೆ ಜ್ಯೋತಿ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ನವೀನ್ ಎನ್ ಶೆಟ್ಟಿ, ಸಂತೃಪ್ತಿ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ : ಕಾಂಗ್ರೆಸ್ ಪಕ್ಷದ ವತಿಯಿಂದ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನೆ

Posted On: 21-08-2024 05:31PM
ಪಡುಬಿದ್ರಿ : ಪಡುಬಿದ್ರಿ - ಕಾರ್ಕಳ ರಸ್ತೆಯಲ್ಲಿ ಕಂಚಿನಡ್ಕ ಪ್ರದೇಶದಲ್ಲಿ ರಾಜ್ಯ ಸರಕಾರ ನಿರ್ಮಾಣ ಮಾಡಲು ಉದ್ದೇಶಿಸಿದ ಸುಂಕ ವಸೂಲಾತಿ ಕೇಂದ್ರದ ವಿರುದ್ಧ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆ ಜರಗಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪಡುಬಿದ್ರಿ-ಕಾರ್ಕಳ ರಸ್ತೆಯ ಟೋಲ್ ಗೇಟ್ ಬಿಜೆಪಿ ಸರಕಾರ ಇರುವಾಗ ರೂಪಿತವಾದ ಯೋಜನೆಯಾಗಿದೆ. ಬೆಳ್ಮಣ್ ಭಾಗದಲ್ಲಿಯ ಪ್ರತಿಭಟನೆ ನಂತರ ಕಂಚಿನಡ್ಕ ಪ್ರದೇಶದಲ್ಲಿ ಟೋಲ್ ಗೇಟ್ ಸ್ಥಾಪನೆಗೆ ಬಿಜೆಪಿ ಸರಕಾರವೇ ಕಾರಣವಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷದ ಯಾವ ಪಾತ್ರವೂ ಇಲ್ಲ. ಮೊದಲೇ ಟೋಲ್ ಆಗಬೇಕೆನ್ನುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣ ಮಾಡಿ, ಇದೀಗ ಟೋಲ್ ಗೇಟ್ ನಿರ್ಮಾಣಕ್ಕೂ ಮುಂದಾಗಿರುವುದು ಬಿಜೆಪಿ.
ಎನ್ಟಿಪಿಸಿ, ಕೊಜೆಂಟ್ರಿಕ್ಸ್ ಗಳನ್ನು ಪ್ರತಿಭಟನೆಯ ಮೂಲಕ ಒದ್ದೋಡಿಸಿ ಈ ಭಾಗದಲ್ಲಿ ಅನೇಕ ಪ್ರತಿಭಟನೆಗಳಾಗಿದೆ. ಯಾವುದೇ ಕಾರಣಕ್ಕೂ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ. ಉಡುಪಿ ಉಸ್ತುವಾರಿ ಸಚಿವರ ಜೊತೆಗೂಡಿ ನಮ್ಮ ನಿಯೋಗವು ಆಗಸ್ಟ್ 22ರಂದು ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಲಿದ್ದೇವೆ ಎಂದರು.
ಉಡುಪಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶೇಖರ ಹೆಜ್ಮಾಡಿ, ಡಾ. ದೇವೀಪ್ರಸಾದ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಡುಪಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶೇಖರ ಹೆಜ್ಮಾಡಿ, ಡಾ. ದೇವೀಪ್ರಸಾದ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೈ ಸುಕುಮಾರ್, ಕರುಣಾಕರ ಪೂಜಾರಿ ಪಡುಬಿದ್ರಿ, ನವೀನ್ ಚಂದ್ರ ಜೆ. ಶೆಟ್ಟಿ, ನವೀನ್ ಎನ್ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಶಿವಾಜಿ ಸುವರ್ಣ, ಶರ್ಪುದ್ದೀನ್ ಶೇಖ್, ರಮೀಜ್ ಹುಸೇನ್ ಪಡುಬಿದ್ರಿ, ನಿಯಾಜ್ ಹುಸೈನ್ ಮುದರಂಗಡಿ, ದೀಪಕ್ ಎರ್ಮಾಳು, ಗುಲಾಂ ಅಹ್ಮದ್, ಆಶಾ ಕಟಪಾಡಿ, ಸುಲೋಚನಾ ಬಂಗೇರಾ, ತಸ್ನೀನ್ ಅರಾ, ಜ್ಯೋತಿ ಮೆನನ್, ಮೊದಲಾದವರು ಉಪಸ್ಥಿತರಿದ್ದರು.
ಕಾಪು ವಲಯ ಕುಲಾಲ ಸಂಘದ ಮಹಿಳಾ ಘಟಕದ ನೂತನ ಅಧ್ಯಕ್ಷೆ, ಕಾರ್ಯದರ್ಶಿ ಆಯ್ಕೆ

Posted On: 21-08-2024 05:06PM
ಕಾಪು : ಕುಲಾಲ ಸಂಘ (ರಿ.) ಕಾಪು ವಲಯ ಇದರ 2024 - 2026ರ ಅವಧಿಗೆ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಸುಮಲತಾ ಶೇಖರ್ ಇನ್ನoಜೆ ಮತ್ತು ನೂತನ ಕಾರ್ಯದರ್ಶಿಯಾಗಿ ಸುಜಾತ ಹರೀಶ್ ಕುಲಾಲ್ ಕಳತ್ತೂರು ಆಯ್ಕೆಯಾಗಿರುತ್ತಾರೆ.
ಜೊತೆ ಕಾರ್ಯದರ್ಶಿಯಾಗಿ ವಿನೋದ ರಾಜೇಶ್ ಕುಲಾಲ್ ಬಂಡ ಶಾಲೆ ಹಾಗೂ ಉಪಾಧ್ಯಕ್ಷರಾಗಿ ಶಾಂಭವಿ ಕುಲಾಲ್, ಮಹಿಳಾ ಸಮಿತಿ ನಿರ್ದೇಶಕರಾಗಿ ಗೀತಾ ಕುಲಾಲ್ ಮತ್ತು ಸುಜಾತ ಕುಲಾಲ್ ಪಾದೆಬೆಟ್ಟು ಇವರನ್ನು ಕುಲಾಲ ಸಂಘ ಕಾಪು ವಲಯ ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿಯೋಜಿತ ಪದಾಧಿಕಾರಿಗಳ ಸಮಕ್ಷಮದಲ್ಲಿ ಆಯ್ಕೆ ಮಾಡಲಾಯಿತು.
ಆಗಸ್ಟ್ 22 : ಜೆಸಿಐ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ರಿಕೇಶ್ ಶರ್ಮ ಶಂಕರಪುರ ಭೇಟಿ

Posted On: 21-08-2024 04:56PM
ಕಟಪಾಡಿ : ಜೆಸಿಐ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ JFS C.R. ರಿಕೇಶ್ ಶರ್ಮ ಆಗಸ್ಟ್ 22 ರಂದು ಸಂಜೆ 7 ಗಂಟೆಗೆ ಜೆಸಿಐ ಶಂಕರಪುರ ಜಾಸ್ಮಿನ್ ಘಟಕಕ್ಕೆ ಆಗಮಿಸಲಿದ್ದಾರೆ. ಬಹು ಘಟಕ ಸಮಾವೇಶದಲ್ಲಿ ಪಾಲ್ಗೊಂಡು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ವಿವಿಧ ಘಟಕಗಳ ಅಧ್ಯಕ್ಷರುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜೆಸಿಐ ಶಂಕರಪುರ ಜಾಸ್ಮಿನ್ ಇದರ ಅಧ್ಯಕ್ಷರಾದ ಜೆಸಿ ಹರೀಶ್ ಪೂಜಾರಿ ಇನ್ನಂಜೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಚ್ಚಿಲ ರೋಟರಿ ಕ್ಲಬ್ : ಡೆಂಗ್ಯು, ಮಲೇರಿಯಾ ಜಾಗೃತಿ ಕಾರ್ಯಕ್ರಮ ; ಕರಪತ್ರ ಹಂಚಿಕೆ

Posted On: 20-08-2024 05:44PM
ಉಚ್ಚಿಲ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಉಚ್ಚಿಲದ ಸರಸ್ವತಿ ಮಂದಿರ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಡೆಂಗ್ಯು ಮತ್ತು ಮಲೇರಿಯಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಕರಪತ್ರಗಳನ್ನು ಹಂಚಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚ್ಚಿಲ ರೋಟರಿ ಅಧ್ಯಕ್ಷರಾದ ಇಬಾದುಲ್ಲ ರಫೀಕ್ ಅಹಮದ್ ವಹಿಸಿದ್ದರು.
ಈ ಸಂದರ್ಭ ರೋಟರಿ ಸಂಸ್ಥೆಯ ಸತೀಶ್ ಕುಂಡಂತಾಯ, ಅಚ್ಯುತ ಶೆಣೈ, ಚಂದ್ರಹಾಸ ಪೂಜಾರಿ, ನಜ್ಮ, ಮುಖ್ಯ ಶಿಕ್ಷಕ ಸದಾಶಿವ ನಾಯಕ್, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಿಮಾ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಉಡುಪಿ : ರಾಜ್ಯಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಪನ್ನ

Posted On: 20-08-2024 10:45AM
ಉಡುಪಿ : ಕಲಿಮಾ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಬೆಂಗಳೂರಿನ ಬಿ. ಬಿ.ಎಂ. ಪಿ ಮೈದಾನ ಜಯಂತಿನಗರ ಹೊರಮಾವು ಎಂಬಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಬ್ರಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕ ಡಿ, ಕೆ ಗೋಪಾಲ್ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕಲಿಮಾ ಫೌಂಡೇಶನ್ ಹಾಗೂ ಚಾರಿಟೇಬಲ್ ಅಧ್ಯಕ್ಷರು ಡಾ.ತಿಗ್ಬತ್ ಉಲ್ಲಾ ಶರೀಫ್ ರವರರು ವಹಿಸಿದ್ದರು.

ವೇದಿಕೆಯಲ್ಲಿ ಮಹಿಳಾ ಅಧ್ಯಕ್ಷರಾದ ಮಹಾಲಕ್ಷ್ಮಿ,ಕೃಷ್ಣ ಮೂರ್ತಿ, ಡಾ.ಪಿ, ಕೆ ಶ್ರೀ ವಾಸ್ತವ್, ಡಾ.ಅಖಿಲ್ ಮನೋಜ್, ಡಾ. ಅಂಜನಾ ಕೆ. ವಿ, ಡಾ.ಅಜ್ಮ್ ಅನ್ಸರ್, ಡಾ.ನಮೀರಾ ಶೈಕ್, ಡಾ.ದರ್ಶನ್, ಟ್ರಸ್ಟ್ ನ ಬೆಂಗಳೂರು ಸಂಯೋಜಕರಾದ ದಿವ್ಯ ಸರಸ್ವತಿ, ಹಾಗೂ ಚೆನ್ನಮ್ಮ, ಟ್ರಸ್ಟ್ ನ ಸದಸ್ಯರಾದ ನಾಗೇಂದ್ರ ಶಾನುಬಾಗ್, ರವಿಕಿರಣ್, ಸಿಂದ್ಯಾ ಡಿಸೋಜ,, ಹಸೀನಾ ಫರ್ ಹಾನ ಹಾಗೂ ಹೊರ ಮಾವು ಅರೋಗ್ಯ ಇಲಾಖೆಯ ಅಧಿಕಾರಿ ಉಪಸ್ಥಿತರಿದ್ದರು.
ಸುಮಾರು 450 ಜನರು ಶಿಬಿರದ ಸದುಪಯೋಗ ಪಡೆದುಕೊಂಡರು. ಡಾ.ವಿಜಯ್ ಕುಮಾರ್ ಹಳ್ಳಿರವರು ಸ್ವಾಗತಿಸಿ, ಟ್ರಸ್ಟ್ ನ ಕಾರ್ಯದರ್ಶಿ ದಿವಾಕರ ಡಿ. ಶೆಟ್ಟಿ ಕಳತ್ತೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾಪು ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

Posted On: 20-08-2024 10:37AM
ಕಾಪು : ತಾಲೂಕು ಆಡಳಿತ ವತಿಯಿಂದ ಮಂಗಳವಾರ ಕಾಪು ತಾಲೂಕು ಆಡಳಿತ ಸೌಧದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಆಚರಿಸಲಾಯಿತು.
ಪತ್ರಕರ್ತ ರಾಕೇಶ್ ಕುಂಜೂರು ನಾರಾಯಣ ಗುರುಗಳ ಕುರುತಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್., ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಹಾಗೂ ಕಾಪು ತಾಲೂಕಿನ ವಿವಿಧ ಬಿಲ್ಲವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಮುದರಂಗಡಿ : ಋಗುಪಾಕರ್ಮ ಯಜ್ಞೋಪವೀತ ಧಾರಣೆ

Posted On: 20-08-2024 10:28AM
ಮುದರಂಗಡಿ : ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಮುದರಂಗಡಿ ಇದರ ಆಶ್ರಯದಲ್ಲಿ ಸೋಮವಾರ ಜರುಗಿದ ಶ್ರಾವಣ ಪೌರ್ಣಮಿ ಋಗುಪಾಕರ್ಮ ಯಜ್ಞೋಪವೀತ ಧಾರಣೆ ಧಾರ್ಮಿಕ ಅನುಷ್ಠಾನಗಳನ್ನು ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವೈದಿಕರಾದ ವೇ.ಮೂ.ಶ್ರೀಕಾಂತ್ ಭಟ್ ನೆರವೇರಿಸಿದರು.
ಸಂಘದ ಅಧ್ಯಕ್ಷ ವೈ.ಉಪೇಂದ್ರ ಪ್ರಭು, ಕಾರ್ಯದರ್ಶಿ ದೇವದಾಸ್ ಪಾಟ್ಕರ್, ಕೋಶಾಧಿಕಾರಿ ಕೇಶವ ನಾಯಕ್, ಸದಸ್ಯರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಮುಂಡಾಲ ಯುವ ವೇದಿಕೆ ಮತ್ತು ಮಹಾದೇಶ್ವರ ಭಜನಾ ಮಂಡಳಿಯಿಂದ ರಕ್ಷಾಬಂಧನ ಕಾರ್ಯಕ್ರಮ

Posted On: 19-08-2024 11:55PM
ಪಡುಬಿದ್ರಿ : ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ಮತ್ತು ಪಲಿಮಾರಿನ ಶ್ರೀ ಮಹಾದೇಶ್ವರ ಭಜನಾ ಮಂಡಳಿಯ ಸಹಯೋಗದಲ್ಲಿ ಸೋಮವಾರ ಶ್ರಾವಣ ಮಾಸದ ಹುಣ್ಣಿಮೆಯ ರಕ್ಷಾಬಂಧನ ಕಾರ್ಯಕ್ರಮ ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆಯೊಂದಿಗೆ ಆರಂಭದೊಂದಿಗೆ ಪರಸ್ಪರ ರಕ್ಷಾಬಂಧನ ಕಟ್ಟಿ ಆಶೀರ್ವಾದಿಸಲಾಯಿತು.
ಮಹಾದೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಸುಧಾಕರ ಕೆ. ಕಾರ್ಯಕ್ರಮಕ್ಕೆ ಶುಭಹಾರೈಸಿದರು. ರಕ್ಷಾಬಂಧನದ ಮಹತ್ವ ಮತ್ತು ಮುಂಡಾಲ ವೇದಿಕೆಯ ಹಿನ್ನಲೆ ಹಾಗೂ ಭವಿಷ್ಯದ ಸಂಘಟನೆಯ ಬಗ್ಗೆ ಸಂತೋಷ್ ನಂಬಿಯಾರ್ ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ಪ ಸಾಲ್ಯಾನ್ ವಹಿಸಿದ್ದರು.
ಈ ಸಂಧರ್ಭದಲ್ಲಿ ಮಹಿಳಾ ಮಂಡಳಿಯ ಪುಷ್ಪ, ಸವಿತಾ, ಪ್ರಮುಖರಾದ ಭಾಸ್ಕರ್ ಪಲಿಮಾರು, ಶ್ರೀಧರ್ ಪಲಿಮಾರು, ಮಂಜುನಾಥ ಎರ್ಮಾಳು ಮೊದಲಾದವರು ಉಪಸ್ಥಿತರಿದ್ದರು. ಪ್ರಸನ್ನ ಪಡುಬಿದ್ರಿ ಪ್ರಾಸ್ತಾವನೆಗೈದರು. ಕಾರ್ಯದರ್ಶಿ ಸುರೇಶ್ ಪಡುಬಿದ್ರಿ ನಿರೂಪಿಸಿದರು.
ಹೆಜಮಾಡಿ : ಅಮಾಸೆ ಕರಿಯದಲ್ಲಿ ಸಮುದ್ರ ಪೂಜೆ

Posted On: 19-08-2024 09:22PM
ಹೆಜಮಾಡಿ : ಏಳೂರು ಮೊಗವೀರ ಮಹಾಸಭಾ ವತಿಯಿಂದ ಹೆಜಮಾಡಿ ಮೊಗವೀರ ಸಭಾದ ಆಯೋಜನೆಯಲ್ಲಿ ಸೋಮವಾರ ಹೆಜಮಾಡಿಯ ಅಮಾಸೆ ಕರಿಯದಲ್ಲಿ ಸಮುದ್ರಕ್ಕೆ ಪೂಜೆ ಸಲ್ಲಿಸಿ ಹಾಲು, ಸೀಯಾಳ, ತೆಂಗಿನಕಾಯಿಯನ್ನು ಸಮರ್ಪಣೆ ಮಾಡಲಾಯಿತು.
ಏಳು ಗ್ರಾಮಗಳ ಮೊಗವೀರ ಸಭಾದ ವತಿಯಿಂದ ಹೆಜಮಾಡಿಯ ವೀರ ಮಾರುತಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಜನೆಯ ಮೂಲಕ ಹೂವು, ಹಣ್ಣು, ಹಾಲನ್ನು ಹೆಜಮಾಡಿಯ ಅಮಾಸೆ ಕರಿಯ ಸಮುದ್ರ ಕಿನಾರೆಗೆ ತರಲಾಯಿತು.
ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಪೂಜೆ ಸಲ್ಲಿಸಿದ ಬಳಿಕ ಸಮುದ್ರಕ್ಕೆ ಹೂ, ಹಣ್ಣು, ತೆಂಗಿನಕಾಯಿ ಹಾಗೂ ಹಾಲನ್ನು ಸಮರ್ಪಿಸಲಾಯಿತು.
ಈ ಸಂದರ್ಭ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಏಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ದಿವಾಕರ ಹೆಜಮಾಡಿ, ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ, ಮಾಜಿ ಅಧ್ಯಕ್ಷರು ಗಳಾದ ಸದಾಶಿವ ಕೋಟ್ಯಾನ್, ವಿಜಯ ಕೋಟ್ಯಾನ್, ಎಚ್ ರವಿ ಕುಂದರ್, ಏಳು ಗ್ರಾಮಗಳ ಗುರಿಕಾರರು, ಅಧ್ಯಕ್ಷರು, ಸಮಿತಿ ಸದಸ್ಯರು, ಮಹಿಳಾ ಮಂಡಳಿಗಳ ಸದಸ್ಯೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.