Updated News From Kaup

ಫೆಬ್ರವರಿ 1- 4 : ಉದ್ಯಾವರದಲ್ಲಿ ಬಹುಭಾಷಾ ನಾಟಕೋತ್ಸವ

Posted On: 31-01-2024 11:18AM

ಉದ್ಯಾವರ : ನಿರಂತರ್ ಉದ್ಯಾವರ ನೇತೃತ್ವದಲ್ಲಿ 6ನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವವು ಇದೇ ಫೆಬ್ರವರಿ ಒಂದರಿಂದ ನಾಲ್ಕನೇ ತಾರೀಖಿನವರೆಗೆ ಸಂಜೆ ಗಂಟೆ 6:30ಕ್ಕೆ ಸರಿಯಾಗಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ (ಚರ್ಚ್ ವಠಾರ) ನಡೆಯಲಿದೆ.

ಫೆಬ್ರವರಿ 1, ಗುರುವಾರದಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇವರಿಂದ ಕ್ಲಾನ್ವಿನ್ ಫೆರ್ನಾಂಡಿಸ್ ಇವರ ನಿರ್ದೇಶನದ ರಂಗಗೀತೆಗಳು ಮತ್ತು 'ಹ್ಯಾಂಗ್ ಆನ್' (ಕನ್ನಡ), ಫೆಬ್ರವರಿ 2 ಶುಕ್ರವಾರದಂದು ಪ್ರಶಸ್ತಿ ಪುರಸ್ಕೃತ ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ತುಳು ನಾಟಕ 'ಮರಣಗೆಂದಿನಾಯೆ', ಫೆಬ್ರವರಿ 3 ಶನಿವಾರದಂದು ಅಸ್ತಿತ್ವ ಮಂಗಳೂರು ತಂಡದಿಂದ 'ಜುಗಾರಿ' (ಕೊಂಕಣಿ), ಮತ್ತು ಫೆಬ್ರವರಿ 4, ಭಾನುವಾರದಂದು ಲೋಗೋಸ್ ಥಿಯೇಟರ್ ಗ್ರೂಪ್ ಮಂಗಳೂರು ಇವರಿಂದ 'ದಾದ್ಲ್ಯಾo ಮಧೆo ತುo ಸದೆoವ್' ಎನ್ನುವ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಉಚಿತ ಪ್ರವೇಶವಿರುವ ಈ ನಾಟಕೋತ್ಸವವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

ಫೆಬ್ರವರಿ 3 : ಡಾನ್ಸ್ ಪಡುಬಿದ್ರಿ ಡಾನ್ಸ್-2024

Posted On: 30-01-2024 06:48PM

ಪಡುಬಿದ್ರಿ : ಇಲ್ಲಿನ ರೋಟರಿ‌ ಕ್ಲಬ್ ಮತ್ತು ಓಂಕಾರ ಕಾಸ್ಟ್ಯೂಮ್ ಮತ್ತು ಕಲಾಸಂಗಮದ ವತಿಯಿಂದ ಕಲಾ ಪ್ರತಿಭೆಗಳಿಗೆ ವೇದಿಕೆ ರೂಪಿಸುವ ಸಲುವಾಗಿ ಡಾನ್ಸ್ ಪಡುಬಿದ್ರಿ ಡಾನ್ಸ್-2024 ರಾಜ್ಯ ಮಟ್ಟದ ಸಮೂಹ ಫಿಲ್ಮಿ ನೃತ್ಯ ಸ್ಪರ್ಧೆಯನ್ನು ಫೆಬ್ರವರಿ 3 ಶನಿವಾರದಂದು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಅಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಪಡುಬಿದ್ರಿ ಸ್ಥಾಪಕ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹೇಳಿದರು. ಅವರು ಕಾಪು ಪತ್ರಕರ್ತರ ಸಂಘದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಬೆಂಗಳೂರು, ಹಾಸನ, ಬಾಗಲಕೋಟೆ , ಚಿಕ್ಕಮಗಳೂರು , ಶಿವಮೊಗ್ಗ, ಉಡುಪಿ , ಮಂಗಳೂರು ‌ಭಾಗ ಗಳಿಂದ ಸುಮಾರು 30 ಪ್ರಸಿದ್ಧ ನೃತ್ಯ ತಂಡಗಳು ಹಾಗೂ ಸ್ಥಳೀಯ ನೃತ್ಯ ತಂಡಗಳು ಕೂಡಾ ಭಾಗವಹಿಸಲಿದೆ. ಅಲ್ಲದೆ ಓಂಕಾರ ಕಲಾ ಸಂಗಮದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಕೂಡಾ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಡ ಕುಟುಂಬದ ಅಂಗವಿಕಲ ಮಹಿಳೆಗೆ ವೀಲ್ ಚಯರ್ ವಿತರಣೆ ಮಾಡಲಿದ್ದು, ವಿವಿಧ ವಿಭಾಗದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಈ ಅದ್ದೂರಿ ಕಾರ್ಯಕ್ರಮವನ್ನು ಉಡುಪಿಯ ಉಜ್ವಲ ಗ್ರೂಪ್ ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ| ಅಂಶುಮಾನ್ ಗೌಡ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಉಡುಪಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ, ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ರೋಟರಿ ಜಿಲ್ಲಾ ಕಾರ್ಯದರ್ಶಿ ಡಾ| ಪ್ರೀತಿ ಮೋಹನ್, ವಲಯ ಸಹಾಯಕ ಗವರ್ನರ್ ಶೃೆಲೇಂದ್ರ ರಾವ್, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸೊಸೈಟಿ ಅಧ್ಯಕ್ಷ ವೃೆ.ಸುದೀರ್ ಕುಮಾರ್, ಕಲ್ಲಟ್ಟೆ ಶ್ರೀ ಧರ್ಮ ಜಾರಂದಾಯ ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ವೃೆ. ಸುಕುಮಾರ್, ಉದ್ಯಮಿ ಗುಲಾಂ ಮೊಹಮ್ಮದ್, ಉಡುಪಿಯ ಹಿರಿಯ ವಕೀಲರಾದ ಸಂಕಪ್ಪ ಎ., ಪೂರ್ವ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಕೃಷ್ಣ ಬಂಗೇರ, ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ‌ನ‌ ಗೌರವ ಅಧ್ಯಕ್ಷ ಶರತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿಯ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಪಡುಬಿದ್ರಿ ಪೋಲಿಸ್ ಠಾಣಾಧಿಕಾರಿ ಪ್ರಸನ್ನ ಎಮ್.ಎಸ್, ಕಾಪು ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ರಮೇಶ್ ಯು ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಕಿರುತೆರೆ ಹಾಗು ಚಲನಚಿತ್ರ ನಟ ನಟಿಯರಾದ ಸಾಯಿ ಕೃಷ್ಣ ಕುಡ್ಲ, ವಿನೀತ್ ಕುಮಾರ್, ನೀರಿಕ್ಷಾ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕಿ ಶಿವಾನಿ ನವೀನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಂದನಾ ರೈ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಓಂಕಾರ ಕಾಸ್ಟ್ಯೂಮ್ ಮತ್ತು ಕಲಾ ಸಂಗಮ ಪಡುಬಿದ್ರಿ ಪಾಲುದಾರೆ ಗೀತಾ ಅರುಣ್, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಪಿ ಕೃಷ್ಣ ಬಂಗೇರ, ಕಾರ್ಯದರ್ಶಿ ಪವನ್ ಸಾಲ್ಯಾನ್, ರೋಟರಿ ಸಮುದಾಯದಳ ಅಧ್ಯಕ್ಷ ರಚನ್ ಸಾಲ್ಯಾನ್ ಉಪಸ್ಥಿತರಿದ್ದರು.

ಶಿರ್ವ : ಮೂಡುಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನ - ಜೀರ್ಣೋದ್ಧಾರದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ಸಂಪನ್ನ

Posted On: 30-01-2024 06:35PM

ಶಿರ್ವ : ಮೂಡುಮಟ್ಟಾರು ಶ್ರೀ ಬಬ್ಬರ್ಯ ದೈವಸ್ಥಾನ ಇದರ ಅಮೂಲಾಗ್ರಹ ಜೀರ್ಣೋದ್ಧಾರದ ಪ್ರಯುಕ್ತ ಸಾನ್ನಿಧ್ಯ ಸಂಕೋಚ ಬಾಲಾಲಯ ಪ್ರತಿಷ್ಠೆ ವಿಧಿ ವಿಧಾನವು ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ, ಕ್ಷೇತ್ರ ಪುರೋಹಿತರು ರಘುಪತಿ ಗುಂಡು ಭಟ್ ಇವರ ನೇತೃತ್ವದಲ್ಲಿ ಸಂಪನ್ನಗೊಂಡಿತು.

ಸಮಾರಂಭದಲ್ಲಿ ನಡಿಬೆಟ್ಟು ಮನೆತನದ ರತ್ನವರ್ಮ ಹೆಗ್ಡೆ, ಕಾರ್ಯಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷರಾದ ಎಸ್. ಕೆ ಸಾಲ್ಯಾನ್. ,ಜಗದೀಶ್ ಶೆಟ್ಟಿ, ವಾದಿರಾಜ ಆಚಾರ್ಯ, ವಿಠ್ಠಲ ಪೂಜಾರಿ, ಗೌರವ ಸಲಹೆಗಾರರಾದ ಶಂಕರ್ ಶೆಟ್ಟಿ ದರ್ಮೆಟ್ಟು, ವಿವೇಕ್ ಆಚಾರ್ಯ, ಹರಿಶ್ಚಂದ್ರ ಶೆಟ್ಟಿ, ಸಂತೋಷ ಆಚಾರ್ಯ, ಸುಧಾಕರ್ ಶೆಟ್ಟಿ, ರಾಜು ಬಿ ಸುವರ್ಣ, ಪ್ರಶಾಂತ್ ಪೂಜಾರಿ, ಕಾರ್ಯದರ್ಶಿ ಹರೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ರವಿ ಪೂಜಾರಿ, ಕೋಶಾಧಿಕಾರಿ ಮಂಜುನಾಥ್ ಆಚಾರ್ಯ, ಸಂದೀಪ್ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಬಳಗ, ಸ್ಥಳವಂದಿಗರು ಮೂಡು ಮಟ್ಟಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ಪಲಿಮಾರು : ಸರ್ಕಾರಿ ಪದವಿ ಪೂರ್ವ ಕಾಲೇಜು - ಬೀಳ್ಕೊಡುಗೆ ಸಮಾರಂಭ

Posted On: 30-01-2024 06:29PM

ಪಲಿಮಾರು : ಇಲ್ಲಿನ ಪ್ರೌಢಶಾಲಾ ವಿಭಾಗದ ಶಿಕ್ಷಕರಿಬ್ಬರು ಮುಂಬಡ್ತಿ ಪಡೆದ ನಿಮಿತ್ತ ಗೌರವ ಸನ್ಮಾನ ಕಾರ್ಯಕ್ರಮ ಜರಗಿತು.

ಹಿರಿಯ ಸಹಶಿಕ್ಷಕಿ ಸುನಿತಾ ಇವರು ಸರ್ಕಾರಿ ಪ್ರೌಢಶಾಲೆ ಮೂಳೂರು ಮತ್ತು ಇನ್ನೋರ್ವ ಸಹಶಿಕ್ಷಕರಾದ ಪ್ರಸನ್ನ ಇವರು ಸರ್ಕಾರಿ ಪ್ರೌಢಶಾಲೆ ಮೂಡುಶೆಡ್ಡೆ, ಮಂಗಳೂರು ಇಲ್ಲಿಗೆ ಮುಂಬಡ್ತಿ ಪಡೆದು ಮುಖ್ಯ ಶಿಕ್ಷಕರಾಗಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶೋಭಾ ವಹಿಸಿದ್ದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರು, ಗ್ರಾಮ ಪಂಚಾಯತಿಯ ನಿಕಟ ಪೂರ್ವ ಅಧ್ಯಕ್ಷರಾದ ಗಾಯತ್ರಿ ಡಿ.ಪ್ರಭು, ಸದಸ್ಯರಾದ ಸುಜಾತ, ಬೆಳಪು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಆಶಾ ಕೆ.ಉಪಸ್ಥಿತರಿದ್ದರು.

ವಿದ್ಯಾರ್ಥಿ ಪ್ರತಿನಿಧಿಗಳಾದ ಲಾವಣ್ಯ, ಯಶಸ್, ಅಮ್ರೀನ ಮತ್ತು ರಿಫಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕನ್ನಡ ಉಪನ್ಯಾಸಕರಾದ ಜ್ಯೋತಿ, ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಅಭಿನಂದನಾ ನುಡಿಗಳನ್ನಾಡಿದರು. ಪ್ರೌಢಶಾಲಾ ಹಿರಿಯ ಸಹಶಿಕ್ಷಕರಾದ ಶಿವಾನಂದ ಸ್ವಾಗತಿಸಿದರು. ಕನ್ನಡ ಶಿಕ್ಷಕರಾದ ಪಿಲಾರು ಸುಧಾಕರ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ - ಮುಷ್ಟಿ ಕಾಣಿಕೆ ಸಮರ್ಪಣೆ ; ವಿವಿಧ ಧಾರ್ಮಿಕ ಪ್ರಕ್ರಿಯಾದಿಗಳು

Posted On: 29-01-2024 07:48PM

ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ತಂತ್ರಿಗಳಾದ ವೇ| ಮೂ| ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಮುಷ್ಟಿ ಕಾಣಿಕೆ ಸಮರ್ಪಣಾ ವಿಧಿ ವಿಧಾನಗಳು ನೆರವೇರಿತು.     

ಬೆಳಿಗ್ಗೆ ರುದ್ರ ಪಾರಾಯಣ ಸಹಿತ ಏಕಾದಶ ರುದ್ರಾಭಿಷೇಕ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ನವಕ ಕಲಶಾಭಿಷೇಕಗಳು, ವಿಶೇಷ ನೈವೇದ್ಯ ಸಮರ್ಪಣೆಯೂ ನಡೆಯಿತು.

ದೇವಳದ ಸನ್ನಿಧಿಯಲ್ಲಿ ಕರ್ಮಾಂಗ ಸಾಂಗತಾ ಸಿದ್ಧಿಗಾಗಿ ವೇ| ಮೂ| ಶಿವರಾಜ ಉಪಾಧ್ಯಾಯ ಅವರ ಪ್ರಾರ್ಥನೆಯ ಬಳಿಕ ನೆರೆದಿದ್ದ ಗ್ರಾಮ ಸೀಮೆಯವರಿಂದ ಮುಷ್ಟಿ ಕಾಣಿಕೆಗಳು ಅರ್ಪಣೆಯಾದವು.

ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪೇಟೆಮನೆ ಭವಾನಿಶಂಕರ ಹೆಗ್ಡೆ, ವೇ| ಮೂ| ಶ್ರೀನಿವಾಸ ಉಪಾಧ್ಯಾ̧ಯ ವೇ| ಮೂ| ಸುರೇಂದ್ರ ಉಪಾಧ್ಯಾಯ, ಅರ್ಚಕರಾದ ವೈ. ಗುರುರಾಜ ಭಟ್, ಪದ್ಮನಾಭ ಭಟ್ ಎಚ್., ಗಣಪತಿ ಭಟ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ಹಾಗೂ ಸದಸ್ಯರು, ವಿವಿಧ ಗುತ್ತು ಬರ್ಕೆಗಳ ಪ್ರಮುಖರು, ಶ್ರೀ ದೇವಸ್ಥಾನದ ಸಿಬಂದಿ ವರ್ಗ, ವೈ. ಎನ್. ರಾಮಚಂದ್ರ ರಾವ್, ವೈ. ಸುರೇಶ್ ರಾವ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಅಡ್ವೆ ಅರಂತಡೆ ಲಕ್ಷ್ಮಣ ಶೆಟ್ಟಿಬಾಲ್, ಎರ್ಮಾಳು ಉದಯ ಕೆ. ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಅಶೋಕ್ ಸಾಲ್ಯಾನ್, ಸುಕುಮಾರ ಶ್ರೀಯಾನ್, ಸದಾಶಿವ ಪಡುಬಿದ್ರಿ, ಪ್ರಕಾಶ್ ದೇವಾಡಿಗ, ರಾಜ ದೇವಾಡಿಗ, ವೈ. ಸುಕುಮಾರ್, ಶೀನ ಪೂಜಾರಿ ಕನ್ನಂಗಾರ್ ಸಹಿತ ಭಕ್ತಾದಿಗಳು ಉಪಸ್ಥಿತರಿದ್ದರು.

ಕಾರ್ಕಳದ ಅಂಡಾರು ಗ್ರಾಮದ ಶಾಲಿನಿ ಕುಲಾಲರ ವೈದಕೀಯ ಚಿಕಿತ್ಸೆಗೆ ನೆರವಾಗುವಿರಾ...?

Posted On: 28-01-2024 06:44PM

ಕಾರ್ಕಳ : ತಾಲೂಕಿನ ಅಂಡಾರು ಗ್ರಾಮ ನಿವಾಸಿ ಕರುಣಾಕರ ಕುಲಾಲ್ ಪತ್ನಿ ಶಾಲಿನಿ ಕುಲಾಲ್ ರವರಿಗೆ ಹೊಟ್ಟೆಯೊಳಗೆ ಗಡ್ಡೆಯ ಸಮಸ್ಯೆಗೆ ಸುಮಾರು 3.7 ಲಕ್ಷದಷ್ಟು ಖರ್ಚು ಆಗಿದ್ದು, ಇದೀಗ ಕಿಮೋಥೆರಪಿ ವಾರಕೊಮ್ಮೆ ಮಾಡಬೇಕಿದೆ. ಒಂದೆಡೆ ಹಿರಿಯ ವೃದ್ಧ ತಾಯಿ, ಎರಡು ಸಣ್ಣ ಮಕ್ಕಳ ಜೊತೆಗೆ ಜೀವನ ನಡೆಸುತ್ತ ಇರುವ ಕರುಣಾಕರ ಕುಲಾಲ್ ತನ್ನ ಪತ್ನಿಯ ಚಿಕಿತ್ಸೆಗೆ ನೆರವಾಗಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ನೆರವು ನೀಡುವವರು ಶಾಲಿನಿ ಅವರ ಬ್ಯಾಂಕ್ ಈ ಕೆಳಗಿನ ಖಾತೆಗೆ ಹಣ ಜಮಾ ಮಾಡಬಹುದು. Contact :karunakara kulal .. 9880842136.. Name :Shalini. Canara Bank. Agumbe road.Muniyal Karkala. A/c Number :01702200031072. IFSC CODE:CNRB0010170.

ಕಾಪು : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಲ್ಲುಗುಡ್ಡೆಯ ಕಾಲಾವಧಿ ನೇಮೋತ್ಸವ

Posted On: 28-01-2024 06:31PM

ಕಾಪು : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಲ್ಲುಗುಡ್ಡೆಯ ಕಾಲಾವಧಿ ನೇಮೋತ್ಸವವು ಜನವರಿ 28ರಿಂದ 30ರವರೆಗೆ ನಡೆಯಲಿದೆ.

ಜನವರಿ‌‌ 28, ಆದಿತ್ಯವಾರದಂದು ಹಸಿರುವಾಣಿಯೊಂದಿಗೆ ಗರಡಿ ಪ್ರವೇಶ. 29, ಸೋಮವಾರ ರಾತ್ರಿ ನೈವೇದ್ಯದ ಅಗಲು ಸೇವೆ. 30, ಮಂಗಳವಾರ ಮಧ್ಯಾಹ್ನ 12:30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7ರಿಂದ ಬೈದರ್ಕಳ ನೇಮೋತ್ಸವ, ರಾತ್ರಿ 8ರಿಂದ 10ರ ತನಕ ಅನ್ನಸಂತರ್ಪಣೆ, ಬೆಳಗ್ಗೆ 3 ಗಂಟೆಗೆ ಮಾಯಂದಾಲ ದೇವಿಯ ನೇಮ ನಡೆಯಲಿದೆ. 31, ಬುಧವಾರ ರಾತ್ರಿ ಶುದ್ಧದ ಅಗಲು ಸೇವೆ ನಡೆಯಲಿದೆ ಎಂದು ‌ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.

ಮುಲ್ಕಿ : ಧಮ್ಮ ದೀಪ ಕಾರ್ಯಕ್ರಮ

Posted On: 28-01-2024 06:07PM

ಮುಲ್ಕಿ : ಭಾಸ್ಕರ್ ಕವತ್ತಾರು ಧಮ್ಮ ದೀಪ ಗೌತಮ ಬುದ್ಧ ನಗರ ಕವತ್ತಾರು ಮುಲ್ಕಿ ಇಲ್ಲಿ ದ.ಕ ಜಿಲ್ಲೆ ಭೌದ್ಧ ಮಹಾಸಭಾ ಧಮ್ಮಚಾರಿ ಎಸ್ ಆರ್ ಲಕ್ಷ್ಮಣ್ ಇವರ ಉಪಸ್ಥಿತಿಯಲ್ಲಿ ಧಮ್ಮ ದೀಪ ಕಾರ್ಯಕ್ರಮ ಜರುಗಿತು.

ಭಾರತೀಯ ಭೌದ್ಧ ಮಹಾಸಭಾ ಉಡುಪಿಯ ಪುಷ್ಟಕರ್ ಮುರಳೀಧರ್ ಎಂ, ಆನಂದ್ ಬಿ, ಶಂಕರ್, ರವೀಂದ್ರ, ಕುಶಲ, ಸುರೇಶ್, ಸಂತೋಷ್ ಎರ್ಮಾಳು, ಸುಧಾಕರ್ ಕೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೂರು ನವದಂಪತಿಗಳಿಗೆ ಶುಭ ಹಾರೈಸಿ ಧಮ್ಮ ದೀಪ ಕುಟುಂಬಸ್ಥರಿಂದ ಭೋಜನ ವ್ಯವಸ್ಥೆ ಮಾಡಲಾಯಿತು.

ನಂದಿಕೂರು : ರಾಲ್ಫಿ ಡಿʼಕೋಸ್ತರವರ ಆಪ್ತ ಬಳಗದ ಜೀವರಕ್ಷಕ ನೂತನ ಆ್ಯಂಬುಲೆನ್ಸ್‌ ಲೋಕಾರ್ಪಣೆ

Posted On: 28-01-2024 06:01PM

ನಂದಿಕೂರು : ಉದ್ಯಮಿ ರಾಲ್ಫಿ ಡಿʼಕೋಸ್ತರವರ ಆಪ್ತ ಬಳಗದ ಹೆಜಮಾಡಿ, ನಡ್ಸಾಲು ಗ್ರಾಮ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲಿರುವ ಜೀವರಕ್ಷಕ ನೂತನ ಆ್ಯಂಬುಲೆನ್ಸ್‌ ಲೋಕಾರ್ಪಣೆ ಹಾಗೂ ಕೀ ಹಸ್ತಾಂತರದ ಕಾರ್ಯಕ್ರಮ ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಭಾನುವಾರ ಜರಗಿತು. ಮೂಲ್ಕಿ ಚರ್ಚ್ ನ ಧರ್ಮಗುರುಗಳಾದ ರೆ| ಫಾ| ಸಿಲ್ವೆಸ್ಟರ್ ಡಿ`ಕೋಸ್ತ ಪ್ರಾರ್ಥನೆ ಸಲ್ಲಿಸಿ ಶುಭಾಶೀರ್ವಾದದ ನುಡಿಗಳನ್ನಿತ್ತರು.

ಮಂಗಳೂರು ಕೆನರಾ ಬ್ಯಾಂಕಿನ ವಲಯ ಎಜಿಎಂ ಆ್ಯಂಟೊನಿ ಅವರು ಆ್ಯಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದರು. ಪಡುಬಿದ್ರಿಯ ಅಪರಾದ ವಿಭಾಗದ ಎಸ್‌ಐ ಸುದರ್ಶನ್ ದೊಡ್ಡಮನಿ ಅವರು ವಾಹನಕ್ಕೆ ಚಾಲನೆ ನೀಡಿ, ರಾಲ್ಫಿ ಡಿʼಕೋಸ್ತರವರ ಆಪ್ತರ ಬಳಗಕ್ಕೆ ವಾಹನದ ಕೀಲಿಗೈ ಹಸ್ತಾಂತರಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುಂಶಿಕ ಅರ್ಚಕರಾದ ವೇ| ಮೂ| ಅನಂತಪದ್ಮನಾಭ ಅಸ್ರಣ್ಣ, ವೇ| ಮೂ| ಹರಿನಾರಾಯಣದಾಸ ಆಸ್ರಣ್ಣ, ಹೆಜಮಾಡಿಯ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಹಾಜಿ ಅಶ್ರಫ್ ಸಖಾಫಿ, ಸೈಂಟ್ ಫಿಲೊಮಿನಾ ಕಾಲೇಜು ಪುತ್ತೂರಿನ ನಿವೃತ್ತ ಪ್ರಾಂಶುಪಾಲ ರೆ| ಫಾ| ಫ್ರಾನ್ಸಿಸ್ ಝ್ಸೇವಿಯರ್ ಗೋಮ್ಸ್, ಕಳವಾರು ಚರ್ಚ್ ಧರ್ಮಗುರುಗಳಾದ ರೆ| ಫಾ| ಮಾರ್ಸೆಲ್ ಸಲ್ದಾನ, ವಾಲ್ಟರ್ ಡಿ`ಸೋಜ, ಕೆನರಾ ಬ್ಯಾಂಕ್ ಮೂಲ್ಕಿಯ ವ್ಯವಸ್ಥಾಪಕ ಅತುಲ್, ಹಾಜಿ ಶೇಖಬ್ಬ ಕೋಟೆ, ನಾರಾಯಣ ಮೆಂಡನ್, ಪಡುಬಿದ್ರಿ ಗ್ರಾ ಪಂ. ಅಧ್ಯಕ್ಷೆ ಶಶಿಕಲಾ, ಹೆಜಮಾಡಿ ಗ್ರಾ ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ಸದಾಶಿವ ಕೋಟ್ಯಾನ್ ಮತ್ತು ಹೆಜಮಾಡಿಯ ರಾಲ್ಫಿ ಡಿʼಕೋಸ್ತ ದಂಪತಿ ಮತ್ತು ಆಪ್ತರ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಿವಾಕರ್ ಹೆಜ್ಮಾಡಿ, ನಿತಿನ್ ಕಾರ್ಯಕ್ರಮ ನಿರೂಪಿಸಿದರು.

ಪಲಿಮಾರು : ಹೊೖಗೆ ಫ್ರೆಂಡ್ಸ್ - 11ನೇ ವಾರ್ಷಿಕೋತ್ಸವ ಸಂಪನ್ನ

Posted On: 28-01-2024 07:06AM

ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರು ಸಂಸ್ಥೆಯ 11ನೇ ವಾರ್ಷಿಕೋತ್ಸವವು ಶುಕ್ರವಾರದಂದು ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.

ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸರ್ವ ಜನ ಸುಖಿನೋ ಭವತು ಎಂಬ ತತ್ವದಲ್ಲಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಯ ಕಾರ್ಯವೈಖರಿ ಆದರ್ಶ ಸಮಾಜ ನಿರ್ಮಾಣ ಮಾಡುವಂತ ಒಂದು ಮಾದರಿ ಸಂಸ್ಥೆ ಎಂದರು. ಸನ್ಮಾನ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಈಶ್ವರ್ ಮಲ್ಪೆ, ನಿವೃತ್ತ ಶಿಕ್ಷಕರಾದ ಜೋನ್ ವಿ ಡಿಸೋಜ, ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ರಾದ ಮ್ಯಾಕ್ಸಿಂ ಡಿಸೋಜಾರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸಮಾಜ ಸೇವಕರಾದ ದಿನೇಶ್ ಗುಜರನ್, ಬಿಲ್ಲವರ ಅಸೋಸಿಯೇಷನ್ ನ ಜೊತೆ ಕಾರ್ಯದರ್ಶಿ ರವಿ ಎಸ್ ಸನಿಲ್, ವಿಶ್ವನಾಥ ಶೆಟ್ಟಿ ಕರ್ನಿರೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ದಿನೇಶ್ ಕೋಟ್ಯಾನ್, ಸಂಸ್ಥೆಯ ಗೌರವಾಧ್ಯಕ್ಷರಾದ ಗೋಕುಲ್ ಪಲಿಮಾರು, ಅಧ್ಯಕ್ಷರಾದ ರಿತೇಶ್ ದೇವಾಡಿಗ, ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು ಉಪಸ್ಥಿತರಿದ್ದರು.

ಸಚಿನ್ ಪೂಜಾರಿ ಸ್ವಾಗತಿಸಿದರು. ರಾಘವೇಂದ್ರ ಜೆ ಸುವರ್ಣ ವರದಿ ವಾಚಿಸಿದರು. ಸಂತೋಷ್ ದೇವಾಡಿಗ , ಸಂಪತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಕುಮಾರ್ ವಂದಿಸಿದರು.