Updated News From Kaup

ಆಗಸ್ಟ್ 15 : ಗ್ರಾಮೀಣ ಕಾಂಗ್ರೆಸ್ ಸಮಿತಿ ಪಡುಬಿದ್ರಿ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Posted On: 13-08-2024 10:02PM

ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ಸಮಿತಿ ಪಡುಬಿದ್ರಿ ವತಿಯಿಂದ ಆಗಸ್ಟ್ 15, ಗುರುವಾರ ಪೂರ್ವಾಹ್ನ 8 ಗಂಟೆಗೆ ಸರಿಯಾಗಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಪಂಡಿತ್ ತೋಮ ಪೂಜಾರಿ ಆಯುರ್ವೇದ ಸ್ಟೋರ್ ನ ಮುಂಭಾಗ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಧ್ವಜಸ್ತಂಭದಲ್ಲಿ ಮಾಜಿ ಸಚಿವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆರವರ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕರುಣಾಕರ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : ಕಂಚಿನಡ್ಕ ಬಳಿ ಟೋಲ್ ನಿರ್ಮಾಣ - ಅಧಿಕಾರಿಗಳು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ

Posted On: 13-08-2024 05:16PM

ಪಡುಬಿದ್ರಿ : ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಬಳಿ ಟೋಲ್ ಬೂತ್ ನಿರ್ಮಾಣದ ಬಗ್ಗೆ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನು ಟೋಲ್ ವಿರೋಧಿ ಹೋರಾಟ ಸಮಿತಿಯವರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.

ಪಡುಬಿದ್ರಿ : ಕಾರ್ಕಳ -ಪಡುಬಿದ್ರಿ ರಸ್ತೆ ಟೋಲ್ ಬೂತ್ ನಿರ್ಮಾಣದ ವಿರುದ್ಧ ಜನಾಗ್ರಹ ಸಭೆ

Posted On: 12-08-2024 08:41PM

ಪಡುಬಿದ್ರಿ : ಹೋರಾಟದ ಸಂಕಲ್ಪದೊಂದಿಗೆ ಶಾಸಕನಾಗಿ ನಿಮ್ಮ ಜೊತೆ ಇರುತ್ತೇನೆ. ನಾವು ಕೈಗೆ ಬಳೆ ತೊಟ್ಟಿಲ್ಲ. ನಾವೆಲ್ಲರೂ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಟ್ಟಾಗಬೇಕು. ನಮ್ಮಲ್ಲಿ ವಿಶ್ವಾಸವಿರಬೇಕು. ಕಂಚಿನಡ್ಕ ಟೋಲ್ ಹಿಂಪಡೆಯದ ಹೊರತು ಹೋರಾಟ ನಿಲ್ಲದು. ಕಾಪು ಕ್ಷೇತ್ರದಲ್ಲಿ ರಾಜ್ಯ ಸರಕಾರ ಮಾಡಲು ಉದ್ದೇಶಿಸಿರುವ ಟೋಲ್ ಎಂದಿಗೂ ಆಗಲು ಬಿಡುವುದಿಲ್ಲ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಕಾರ್ಕಳ -ಪಡುಬಿದ್ರಿ ರಸ್ತೆಯ ಟೋಲ್ ಬೂತ್ ನಿರ್ಮಾಣದ ವಿರುದ್ಧ ಪಡುಬಿದ್ರಿ ಉದಯಾದ್ರಿ ದೇವಸ್ಥಾನದಲ್ಲಿ ಜರಗಿದ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಪು : ವಲಯ ಕುಲಾಲ ಸಂಘದ ಅಧ್ಯಕ್ಷರಾಗಿ ಹರೀಶ್ ಕುಲಾಲ್ ಬೆಳ್ಳಿಬೆಟ್ಟು ಆಯ್ಕೆ

Posted On: 12-08-2024 09:02AM

ಕಾಪು : ಕಾಪು ವಲಯ ಕುಲಾಲ ಸಂಘದ ಅಧ್ಯಕ್ಷರಾಗಿ ಹರೀಶ್ ಕುಲಾಲ್ ಬೆಳ್ಳಿಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಬಿಳಿಯಾರು, ಉಪಾಧ್ಯಕ್ಷರಾಗಿ ಉದಯ ಕುಲಾಲ್ ಕಳತ್ತೂರು ಆಯ್ಕೆಯಾಗಿದ್ದಾರೆ.

ಪಡುಬಿದ್ರಿ : ಕಾಂಗ್ರೆಸ್ ವತಿಯಿಂದ ಆಟಿದ ತಮ್ಮನ ; ಸಾಧಕರಿಗೆ ಸನ್ಮಾನ ; ನೃತ್ಯೋತ್ಸವ ವೈಭವ

Posted On: 11-08-2024 05:54PM

ಪಡುಬಿದ್ರಿ : ಕೃಷಿಯು ಮಹತ್ವದ ವೃತ್ತಿಯಾಗಿದ್ದು, ಕಾಂಗ್ರೆಸ್ ಸರಕಾರ ಕೃಷಿಗೆ ಒತ್ತು ನೀಡಿ ಕೃಷಿಕರಿಗೆ ಮಹತ್ವ ನೀಡಿದೆ. ಉಳುವವನೇ ಹೊಲೆದೊಡೆಯ ಕಾನೂನು ಕಾಂಗ್ರೆಸ್ ನ ಮಹತ್ವದ ನಡೆಯಾಗಿತ್ತು‌. ನನ್ನದೆಂಬುದು ಏನಿಲ್ಲ ಎಂದಾಗ ಜನರಿಗೆ ನೆರವಾದದ್ದು ಕಾಂಗ್ರೆಸ್. ಇಂದು ಸರಕಾರ ತೆರಿಗೆಯ ಮೂಲಕ ಬಡವರ ರಕ್ತ ಹೀರುತ್ತಿದೆ. ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿದಾಗ ಮನೆ ಬೆಳಗಲು ಸಾಧ್ಯ ಅದನ್ನು ಪ್ರಸ್ತುತ ರಾಜ್ಯ ಸರಕಾರ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಗ್ರಾಮೀಣ ಕಾಂಗ್ರೆಸ್ ಸಮಿತಿ, ಮಹಿಳಾ ಮತ್ತು ಯುವ ಕಾಂಗ್ರೆಸ್ ಪಡುಬಿದ್ರಿ ಇವರ ಆಶ್ರಯದಲ್ಲಿ ಪಡುಬಿದ್ರಿ ಸುಜಾತ ಆಡಿಟೋರಿಯಂ ಸಭಾಂಗಣದಲ್ಲಿ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ದಿ| ವೈ.ಹಿರಿಯಣ್ಣ ಪಡುಬಿದ್ರಿ ಸಭಾ ವೇದಿಕೆಯಲ್ಲಿ ಜರಗಿದ ಆಟಿದ ತಮ್ಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಡುಪಿ : ಯಶಸ್ವಿ - ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆ

Posted On: 10-08-2024 05:42PM

ಉಡುಪಿ : ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಯಶಸ್ವಿ ಇವರು ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ.

ಕಿಂಗ್ ಟೈಗರ್ಸ್ ಕಾಪು : 3ನೇ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 10-08-2024 05:04PM

ಕಾಪು : ಕಿಂಗ್ ಟೈಗರ್ಸ್ ಕಾಪು ಇವರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ 3ನೇ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಹಿರಿಯಡ್ಕ : ಪ್ರಕೃತಿಯ ಸೊಬಗಿನ ನಡುವೆ ನಾಗಾರಾಧನೆ

Posted On: 09-08-2024 04:17PM

ಹಿರಿಯಡ್ಕ : ಪ್ರಕೃತಿ ನಡುವೆ ನಡುವೆ ನಡೆಯುತ್ತಿದ್ದ ನಾಗಾರಾಧನೆಯು ಆಧುನಿಕತೆಯ ಭರಾಟೆಯಲ್ಲಿ ಕಾಂಕ್ರೀಟೀಕರಣವಾಗುತ್ತಿರುವ ಸನ್ನಿವೇಶದಲ್ಲಿ ಕೆಲವು ನಾಗಬನಗಳು ಇನ್ನೂ ಹಿಂದಿನ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿದೆ.

ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆಯಿಂದ ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

Posted On: 09-08-2024 04:07PM

ಉಡುಪಿ : ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂದೂ ಶ್ರದ್ಧಾ ಕೇಂದ್ರಗಳ ಧ್ವಂಸ, ಹಿಂದೂಗಳ ಮೇಲೆ ನಡೆಯುತ್ರಿರುವ ಹಿಂಸಾಚಾರ, ಕೊಲೆ ಹಾಗೂ ಮಹಿಳೆಯರ ಅತ್ಯಾಚಾರ ದೌರ್ಜನ್ಯಗಳ ವಿರುದ್ಧ ತಕ್ಷಣ ಮಧ್ಯ ಪ್ರವೇಶ ಮಾಡುವಂತೆ ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಉಡುಪಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ನಾಗರಪಂಚಮಿ - ಪ್ರಕೃತಿಗೆ ಮಾನವ ಕೃತಜ್ಞತೆ ಹೇಳುವ ದಿನ

Posted On: 09-08-2024 09:01AM

ಇಂದು ನಾಗರ ಪಂಚಮಿ. ಪ್ರಕೃತಿಯನ್ನು ಪೂಜಿಸುವ ವಿಶಿಷ್ಟ ಹಬ್ಬವಾದ ನಾಗಾರಾಧನೆ ಈ ಭೂಮಂಡಲದಲ್ಲಿ ಇಂದು- ನಿನ್ನೆಯದಲ್ಲ. ವಿಶ್ವದ ಎಲ್ಲಾ ಭಾಗಗಳ ಧರ್ಮ- ಪುರಾಣ ಮತ್ತು ಜನಪದಗಳಲ್ಲಿ ನಾಗನ ಪ್ರಾಮುಖ್ಯ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ನಮ್ಮ ಪೂರ್ವಜರು ನಾಗನನ್ನು ದೇವತೆಗಳ ಸಾಲಿಗೆ ಸೇರಿಸಿ 'ನಾಗದೇವತೆ' ಎಂದರು. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ, ಕೇವಲ ಸಪ್ಪಳವನ್ನು ಗ್ರಹಸಿ ತನ್ನ ಬೇಟೆಯನ್ನು ಅದು ಕಂಡುಕೊಳ್ಳುತ್ತದೆ. ಅದು ತಾನಾಗಿಯೇ ಯಾರಿಗೂ ಕಚ್ಚುವುದಿಲ್ಲ, ಮೆಟ್ಟಿದಲ್ಲದೇ ಹಾವು ಕಚ್ಚದು ಎಂಬ ಮಾತು ಕೇಳಿದ್ದಿರಲ್ಲವೇ?