Updated News From Kaup
ಕಾಪುವಿನ ಪಡುವಣ ಕಡಲ ತೀರದಲ್ಲಿ ಕಡಲ ಪರ್ಬದ ಸಂಭ್ರಮ - ಡಿಸೆಂಬರ್ 26,27,28
Posted On: 12 Dec 2025, 08:01 PM
ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ವತಿಯಿಂದ ಅಟಲ್ ಜನ್ಮ ಶತಾಬ್ದಿ ಪ್ರಯುಕ್ತ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಕಾಪು ಕಡಲ ಕಿನಾರೆಯಲ್ಲಿ ಡಿಸೆಂಬರ್ 26,27,28 ರಂದು ಬೀಚ್ ಉತ್ಸವ, ಆಹಾರ ಮೇಳ, ಕ್ರೀಡೋತ್ಸವ, ಸಾಂಸ್ಕೃತಿಕ ಉತ್ಸವಗಳು ಬಹಳ ಅದ್ದೂರಿಯಾಗಿ ನಡೆಯಲಿದ್ಫು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ನಮ್ಮ ಕಾಪು ನ್ಯೂಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮೂಡುಬಿದ್ರಿ ನಿತ್ಯಾನಂದ ಶೆಟ್ಟಿ ಸಹಾಯಕ್ಕಾಗಿ ಮನವಿ
Posted On: 11 Dec 2025, 08:56 PM
ಮೂಡುಬಿದ್ರಿ: ನಿತ್ಯಾನಂದ ಶೆಟ್ಟಿ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಗಂಟಲ್ ಕಟ್ಟೆಯ ನಿವಾಸಿ ತಾರೀಕು 30 11 2025 ರಂದು ವಾಹನ ಅಪಘಾತಕ್ಕೆ ಒಳಪಟ್ಟಿದ್ದು ಸೊಂಟದ ಮೂಳೆ ಮತ್ತು ಕಾಲುಗಳಿಗೆ ತೀವ್ರ ಏಟಾಗಿರುತ್ತದೆ.
ಸದ್ಯ ಇವರು ಮಂಗಳೂರಿನ ಎಜೆ ಆಸ್ಪತ್ರೆಯ ಸರಕಾರಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯವರು ತಕ್ಷಣ ಆಪರೇಷನ್ ನಡೆಸಬೇಕೆಂದು ತಿಳಿಸಿರುತ್ತಾರೆ.
ಚಿಕಿತ್ಸಾ ವೆಚ್ಚ ಸುಮಾರು 10 ಲಕ್ಷ ಅಂದಾಜಿಸಿದ್ದು. ಇವರದ್ದು ಬಡ ಕುಟುಂಬ ಆಗಿರುವ ಕಾರಣ ಆಸ್ಪತ್ರೆ ವೆಚ್ಚ ಭರಿಸಲು ಕಷ್ಟವಾಗುತ್ತಿದೆ. ಆದುದರಿಂದ ನಿತ್ಯಾನಂದ ಶೆಟ್ಟಿ ಅವರ ಕುಟುಂಬಸ್ಥರು ತಮ್ಮಲ್ಲಿ ಹಣದ ಸಹಾಯಕ್ಕಾಗಿ ಕೋರಿಕೊಳ್ಳುತ್ತಿದ್ದಾರೆ.
ಎಬಿವಿಪಿ ಉಡುಪಿ ನಗರ ಉಡುಪಿ ನಗರ ವತಿಯಿಂದ ಪ್ರಬಂಧ ಸ್ಪರ್ಧೆ ; ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ
Posted On: 08 Dec 2025, 06:44 PM
ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ಗೌರವ ನಮನಕ್ಕೆ ಸಾಮರಸ್ಯ ದಿವಸ ಪ್ರಯುಕ್ತ ಸಂವಿಧಾನ ರಚನೆಗೆ ಅಂಬೇಡ್ಕರ್ ನೀಡಿದ ಕೊಡುಗೆಯ ವಿಷಯದ ಬಗ್ಗೆ ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆ ಉಡುಪಿಯ ಸಾಧ್ವಿ ಮಾಧ್ವಿ ಪಾಠಶಾಲೆಯಲ್ಲಿ ನಡೆಯಿತು.
ನಗರದ ಹಲವು ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.
ಈ ಸಂಧರ್ಭದಲ್ಲಿ ಡಾ. ಶಿವಾನಂದ ನಾಯಕ್,ಉಡುಪಿ ಜಿಲ್ಲಾ ಪ್ರಮುಖರಾದ ರಾಜಶಂಕರ್, ನಗರ ಸಂಘಟನಾ ಕಾರ್ಯದರ್ಶಿ ರೋಹಿತ್,ನಗರ ಕಾರ್ಯದರ್ಶಿ ಮನೀಶ್ ಉಪಸ್ಥಿತರಿದ್ದರು.
ಶುಕ್ರವಾರ ಡಾ.ಜಿ. ಶಂಕರ್ ಪದವಿ ಕಾಲೇಜಿನಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತರು ಕುಮಾರಿ ಅನನ್ಯ, ದ್ವಿತೀಯ ಸ್ಥಾನ ಕುಮಾರಿ ದೀಪ್ತಿ ಪಡೆದುಕೊಂಡಿರುತ್ತಾರೆ. ಬಹಮಾನವನ್ನು ಡಾ. ಶಿವಾನಂದ ನಾಯಕ್ ವಿತರಿಸಿರುತ್ತಾರೆ.
COSIDICI 11ನೇ ರಾಷ್ಟ್ರೀಯ ಅತ್ಯುತ್ತಮ ಉದ್ಯಮಿ ಪ್ರಶಸ್ತಿ ಪುರಸ್ಕೃತರಾದ ಕಾಪು ಹರೀಶ್ ನಾಯಕ್
Posted On: 06 Dec 2025, 07:01 PM
ಕಾಪು : ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಂಡ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಗೋಲ್ಡನ್ ಲೆಗೆಸಿ ಆಫ್ ಎಕ್ಸಲೆನ್ಸ್ (COSIDICI) ವತಿಯಿಂದ ಪ್ರತಿ ವರ್ಷ ಪ್ರದಾನವಾಗುವ ಹನ್ನೊಂದನೇ ರಾಷ್ಟ್ರೀಯ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಕಾಪುವಿನ ಯುವ ಉದ್ಯಮಿ ಕಾಪು ಹರೀಶ್ ಕಮಲಾಕ್ಷ ನಾಯಕ್ ಅವರಿಗೆ ಪ್ರದಾನಿಸಲಾಯಿತು. ಈ ಪ್ರಶಸ್ತಿಯನ್ನು ಆಂಧ್ರಪ್ರದೇಶ ಸರ್ಕಾರದ MSME–SERP (NRI) ಎಂಪವರ್‌ಮೆಂಟ್ ಅಂಡ್ ರಿಲೇಶನ್ಸ್ ಸಚಿವ ಕೊಂಡಪ್ಪಳ್ಳಿ ಶ್ರೀನಿವಾಸ್ ಮತ್ತು ಇಂಡಸ್ಟ್ರೀಸ್, ಕಾಮರ್ಸ್ ಹಾಗೂ ಫುಡ್ ಪ್ರೊಸೆಸಿಂಗ್ ಸಚಿವ ಟಿ. ಜಿ. ಭಾರತ್ ದೆಹಲಿ COSIDICI ಸಂಜೀವ ಶರ್ಮಾರವರು ವಿಶಾಖಪಟ್ಟಣ MRDA ಚಿಲ್ಡ್ರನ್ ಅರೇನಾ ಸಭಾಂಗಣದಲ್ಲಿ ಪ್ರಧಾನಿಸಿದರು. ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಐದು ಮಂದಿ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾಪು ಹರೀಶ್ ನಾಯಕ್ ಅವರ ಸಾಧನೆಯನ್ನು ಸಚಿವರು ಅಭಿನಂದಿಸಿ, ಮುಂದೆ ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಗಳನ್ನು ತಲುಪಿ ಹೆಚ್ಚಿನ ರಾಷ್ಟ್ರ ಮಟ್ಟದ ಗೌರವಗಳನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ COSIDICI ಅಧ್ಯಕ್ಷ ಡಾ. ಯುವರಾಜ್ IAS, ಕರ್ನಾಟಕ ರಾಜ್ಯ ಹಣಕಾಸು ಮಹಾಮಂಡಳಿಯ ಆಡಳಿತ ನಿರ್ದೇಶಕ ಡಾ. ಎಂ.ಟಿ. ರೇಜು IAS, ಕೆಎಸ್‌ಎಫ್‌ಸಿ ಜಿಎಮ್ ಮಂಜುನಾಥ್, ಆಂಧ್ರ ಪೆಟ್ರೋ ಕೆಮಿಕಲ್ ನ ಪಾರ್ಥ ಸಾರಥಿ ಹಾಗೂ ಅನುಪೂರ್ವಿ ಸಮೂಹ ಸಂಸ್ಥೆಯ ಪ್ರವರ್ತಕಿ ಮತ್ತು ಪೂರ್ವಿ ವೆಂಚರ್ಸ್‌ನ ಮಾಲಕಿ ಪೂರ್ವಿ ನಾಯಕ್ ಕಾಪು ಉಪಸ್ಥಿತರಿದ್ದರು.
ಕಾಪು : ಇನ್ನಂಜೆ ಮಹಿಳಾ ಮಂಡಳಿಯ ಪದಗ್ರಹಣ
Posted On: 23 Nov 2025, 04:46 PM
ಕಾಪು : ಇನ್ನಂಜೆ ಮಹಿಳಾ ಮಂಡಳಿ (ರಿ.) ಇನ್ನಂಜೆ ಇದರ ಪದಗ್ರಹಣ ಸಮಾರಂಭವು ಇನ್ನಂಜೆ ಎಸ್. ವಿ. ಎಸ್. ಶಾಲೆಯ ದಾಸ ಭವನ ಇಲ್ಲಿ ಜರಗಿತು. ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುಶೀಲ ಅಮೀನ್ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಆಗ್ಯೇಷ್ ಡೇಸಾ, ಇನ್ನಂಜೆ ಮಹಿಳಾ ಮಂಡಳಿ ಗೌರವಾಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಇನ್ನಂಜೆ ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ವೇತಾ ಎಲ್. ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಇನ್ನಂಜೆ ಮಹಿಳಾ ಮಂಡಳಿಯ ಕಾರ್ಯದರ್ಶಿ ಸಿಲ್ವಿಯ ವಿನಿಫ್ರೆಡ್ ಕ್ಯಾಸ್ತಲಿನೋ, ಕೋಶಾಧಿಕಾರಿ ಪೂರ್ಣಿಮ ಸುರೇಶ್, ನಿಯೋಜಿತ ಅಧ್ಯಕ್ಷರಾದ ಸುನಂದನ್ ಕುಮಾರ್, ನಿಯೋಜಿತ ಕಾರ್ಯದರ್ಶಿ ಸೀಮಾ ಮಾರ್ಗರೇಟ್ ಡಿ'ಸೋಜ, ನಿಯೋಜಿತ ಕೋಶಾಧಿಕಾರಿ ಅನಿತಾ ಮಥಾಯಸ್, ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾಪು : ಯುವ ಉದ್ಯಮಿ ಹರೀಶ್ ಕಮಲಾಕ್ಷ ನಾಯಕ್ ರಿಗೆ ಅತ್ಯುತ್ತಮ ಉದ್ಯಮಿ ಪ್ರಶಸ್ತಿ
Posted On: 22 Nov 2025, 04:19 PM
ಕಾಪು : ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಶನ್ಸ್ ಆಫ್ ಇಂಡಿಯಾ (COSIDICI) ವತಿಯಿಂದ ಪ್ರತಿ ವರ್ಷ ನೀಡಲಾಗುವ 11 ನೇ ರಾಷ್ಟ್ರೀಯ 'ಅತ್ಯುತ್ತಮ ಉದ್ಯಮಿ' ಪ್ರಶಸ್ತಿಗೆ ಕಾಪುವಿನ ಯುವ ಉದ್ಯಮಿ ಹರೀಶ್ ಕಮಲಾಕ್ಷ ನಾಯಕ್ ಆಯ್ಕೆಯಾಗಿದ್ದಾರೆ. ಎಂ.ಎಸ್.ಎಂ.ಇ. ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ, ನವೀನತೆ ಹಾಗೂ ಉದ್ಯಮ ಶೀಲತೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ದೇಶದ ವಿವಿಧ ರಾಜ್ಯಗಳ ಉದ್ಯಮಿಗಳಿಗೆ ನೀಡ ಲಾಗುವ ಈ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭವು ಡಿ. 5ರಂದು ವಿಶಾಖಪಟ್ಟಣದಲ್ಲಿ ನಡೆ ಯಲಿದೆ. ಕರ್ನಾಟಕ ರಾಜ್ಯ ಹಣಕಾಸು ನಿಗಮ ಬೆಂಗಳೂರು ಇವರ ಶಿಫಾರಸ್ಸಿನ ಮೇರೆಗೆ ಹರೀಶ್ ನಾಯಕ್ ಅವರನ್ನು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸಿಒಎಸ್‌ಐಡಿಐಸಿಐ ಆಯೋಜನಾ ಸಮಿತಿಯು ಅನುಮೋದಿಸಿದೆ. ಹರೀಶ್ ನಾಯಕ್ ಸಹಿತ ರಾಜ್ಯದ ಐದು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಶನ್ಸ್ ಆಫ್ ಇಂಡಿಯಾ ಸಂಸ್ಥೆಯ ಮಹಾನಿರ್ದೇಶಕ ಹನ್ಸ್ ರಾಜ್ ವರ್ಮಾ ಮಾಹಿತಿ ನೀಡಿದ್ದಾರೆ.
ಪಡುಕುತ್ಯಾರು : ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಆರನೇ ವಾರ್ಷಿಕ ಮಹಾಸಭೆ
Posted On: 20 Nov 2025, 07:11 PM
ಕಾಪು : ಪಡುಕುತ್ಯಾರು, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಆರನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ನಾಗೇಶ ಆರ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ದುರ್ಗಾ ಮಂದಿರದಲ್ಲಿ ಜರಗಿತು. ಮುಖ್ಯ ಅತಿಥಿ ಸಮಾಜ ಸೇವಕರಾದ ಶಶಿಧರ್ ಪುರೋಹಿತರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘವು ಉತ್ತರೋತರ ಅಭಿವೃದ್ದಿ ಹೊಂದಲಿ ಹಾಗೂ ಮಂದಿರದ ಜೀರ್ಣೋದ್ಧಾರ ಕೆಲಸ ಶ್ರೀಘ್ರ ಪ್ರಾರಂಭವಾಗಲಿ ಎಂದು ಹಾರೈಸಿದರು. ಪ್ರಾಸ್ತಾವಿಕವಾಗಿ ಗೌರವಾಧ್ಯಕ್ಷರಾದ ಹರಿಶ್ಚಂದ್ರ ಎಚ್ ಆಚಾರ್ಯ ಮತ್ತು ಸದಾಶಿವ ವಿ ಆಚಾರ್ಯ ರವರು ಮಾತನಾಡಿದರು. ಸನ್ಮಾನ/ಪ್ರತಿಭಾ ಪುರಸ್ಕಾರ/ಬಹುಮಾನ ವಿತರಣೆ : ಸಮಾಜ ಸೇವಕ ಶಶಿಧರ ಆಚಾರ್ಯ, ರಂಗಭೂಮಿ ಕಲಾವಿದ, ಚಲನಚಿತ್ರ ನಟ ಹಾಗೂ ಸಂಘದ ಪದಾಧಿಕಾರಿ ಶಶಿರಾಜ ಪಿ ಆಚಾರ್ಯ ರವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮತ್ತು ಕಲಾ ನೈಪುಣ್ಯತೆ ಹೊಂದಿದ ಸಮಾಜದ ಆರು ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ರೀಡೆ, ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಂದಿನ 3 ವರುಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಯಿತು. ಕೋಶಾಧಿಕಾರಿಯಾದ ಗಂಗಾಧರ ಎಸ್ ಆಚಾರ್ಯರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಜಯರಾಮ ಆಚಾರ್ಯ, ಗೌರವ ಸಲಹೆಗಾರರು, ಮೊಕ್ತೆಶ್ವರರಾದ ಪ್ರಕಾಶ್ ಎಸ್ ಆಚಾರ್ಯ ಮತ್ತು ಚಂದ್ರಯ್ಯ ಪಿ ಆಚಾರ್ಯ, ಉಪಾಧ್ಯಕ್ಷರಾದ ಕೆ ವಿವೇಕಾನಂದ ಆಚಾರ್ಯ, ಪದಾಧಿಕಾರಿಗಳಾದ ಪ್ರವೀಣ ಎಸ್ ಆಚಾರ್ಯ, ಪ್ರಕಾಶ್ ಎಸ್ ಆಚಾರ್ಯ, ಉದಯಕುಮಾರ್, ಹೇಮಾವತಿ ಪಿ ಆಚಾರ್ಯ, ಪ್ರಸನ್ನ ಎಸ್ ಆಚಾರ್ಯ, ಸುರೇಂದ್ರ ಎ ಆಚಾರ್ಯರವರು ಉಪಸ್ಥಿತರಿದ್ದರು. ಸುರೇಶ್ ಆರ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ ವರದಿ ಮಂಡಿಸಿದರು. ಶ್ರೀಲತಾ ಪ್ರಸಾದ ಆಚಾರ್ಯ, ಶಶಿರಾಜ್ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ಗಂಗಾಧರ ಎಸ್ ಆಚಾರ್ಯ ವಂದಿಸಿದರು.
ಕಳತ್ತೂರು ಶ್ರೀ ಬ್ರಹ್ಮಬೈದೆರುಗಳ ಗರಡಿಯ ಜೀರ್ಣೋದ್ದಾರಕ್ಕೆ ಧನ ಸಹಾಯ
Posted On: 16 Nov 2025, 08:17 PM
ಕಾಪು : ಕಳತ್ತೂರು ಟೈಗರ್ಸ್ ಕಳತ್ತೂರು ಇವರ ವತಿಯಿಂದ ಕಳತ್ತೂರು ಬ್ರಹ್ಮ ಬೈದೇರುಗಳ ಗರಡಿಯ ಸಮಗ್ರ ಜೀರ್ಣೋದ್ದಾರಕ್ಕೆ ಸುಮಾರು 2 ಲಕ್ಷ ರೂಪಾಯಿಯ ಧನ ಸಹಾಯ ಗರಡಿ ಪ್ರಮುಖರ ಸಮ್ಮುಖದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಕಳತ್ತೂರು ಟೈಗರ್ ಪದಾಧಿಕಾರಿಗಳು, ಗರಡಿಯ ಪ್ರಮುಖರು ಉಪಸ್ಥಿತರಿದ್ದರು.
ಡಿ 12 : ಕಾಪುವಿನಲ್ಲಿ ಸಮಾಜರತ್ನ ದಿ.ಕೆ. ಲೀಲಾಧರ ಶೆಟ್ಟಿ ಮತ್ತು ದಿ. ವಸುಂಧರಾ ಎಲ್ ಶೆಟ್ಟಿ ಪುಣ್ಯಸ್ಮರಣೆ
Posted On: 16 Nov 2025, 08:12 PM
ಕಾಪು : ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಹಾಗೂ ಸರ್ವ ಧರ್ಮದ ಬಂಧುಗಳ ಸಹಕಾರದೊಂದಿಗೆ ಸಮಾಜ ರತ್ನ ಕೆ. ದಿ. ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ದಿ. ವಸುಂದರಾ ಶೆಟ್ಟಿ ಅವರ ದ್ವಿತೀಯ ವರ್ಷದ ಸಂಸ್ಮರಣೆಯೊಂದಿಗೆ ಡಿ. 12 ರಂದು ಮಜೂರು ಸರ್ಕಲ್ ಬಳಿಯ ಲೀಲಾಧರ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ನಂತರ ಕಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಅವರ ಹೆಸರಿನಲ್ಲಿ ಪೂಜೆ, ನಂತರ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ, ಗಣ್ಯರ ಉಪಸ್ಥಿತಿಯಲ್ಲಿ ಎಸ್ ಎಸ್ಎಲ್ ಸಿ ಪರೀಕ್ಷೆಯಲ್ಲಿ 2024-2025 ಸಾಲಿನಲ್ಲಿ (ಅನುದಾನಿತ ಶಾಲೆ )ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ನಗದಿನೊಂದಿಗೆ ಸನ್ಮಾನ, ಹಾಗೂ 3 ಮಂದಿ ಮಾಜಿ ಸೈನಿಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಸಮಾಜ ರತ್ನ ಕೆ. ಲೀಲಾಧರ ಶೆಟ್ಟಿ ಅಭಿಮಾನಿ ಬಳಗ ಕಾಪು ಇವರ ಪ್ರಕಟಣೆಯು ತಿಳಿಸಿದೆ.
ಕುಲಾಲ ಸಂಘ ಮೂಡುಬಿದಿರೆ ವತಿಯಿಂದ ತುರ್ತು ಆರೋಗ್ಯ ನಿಧಿ ಹಸ್ತಾಂತರ
Posted On: 09 Nov 2025, 07:31 PM
ಮೂಡುಬಿದಿರೆ : ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡುಬಿದಿರೆ ಪಡುಮಾರ್ನಾಡ್ ಶ್ಯಾಮ ಅಂಚನ್ ಅವರ ಪುತ್ರ ಸಾತ್ವಿಕ್ ಕುಲಾಲ್ ನ ಚಿಕಿತ್ಸಾ ವೆಚ್ಚಕ್ಕಾಗಿ ಕುಲಾಲ ಸಂಘ (ರಿ) ಮೂಡುಬಿದಿರೆ ವತಿಯಿಂದ ತುರ್ತು ಆರೋಗ್ಯ ನಿಧಿ ಯೋಜನೆಯಡಿ ದಾನಿಗಳಿಂದ ಸಂಗ್ರಹಿಸಿದ ರೂ 21,000 ಮೊತ್ತವನ್ನು ಫಲಾನುಭಾವಿಯ ಮನೆಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್ ಕುಲಾಲ್ ಏರಿಮಾರು, ಕಾರ್ಯದರ್ಶಿ ವಿಶ್ವನಾಥ್ ಕುಲಾಲ್, ಮಹಿಳಾ ಘಟಕದ ಕಾರ್ಯದರ್ಶಿ ಮಮತಾ ಕುಲಾಲ್, ಸದಸ್ಯರುಗಳಾದ ವೆಂಕಟೇಶ್ ಬಂಗೇರ, ವಿಜಯ್ ಕುಮಾರ್, ಸೀತರಾಮ ಕುಲಾಲ್, ಸಂಪಾ ಸದಾಶಿವ ಮೂಲ್ಯ ಉಪಸ್ಥಿತರಿದ್ದರು. ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿ ಧನ ಸಹಾಯವಿತ್ತ ಮಹಾದಾನಿಗಳಿಗೆ ಕುಲಾಲ ಸಂಘ (ರಿ) ಮೂಡುಬಿದಿರೆ ವತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ.
