Updated News From Kaup
ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ಗ್ರಾಮೀಣ ಕ್ರೀಡಾಕೂಟ
Posted On: 21-10-2025 09:48AM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ 13 ನೇ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವದ ಪ್ರಯುಕ್ತ ನಡೆದ ಗ್ರಾಮೀಣ ಕ್ರೀಡಾಕೂಟವನ್ನು ಶಿರ್ವ ನಡಿಬೆಟ್ಟು ಬಳಿಯ ಕೃಷಿಕರಾದ ಶ್ರೀನಿವಾಸ ಆಚಾರ್ಯ ಉದ್ಘಾಟಿಸಿದರು.
ಕೆ ಕೆ ಫ್ರೆಂಡ್ಸ್ ಕಡಂಬು, ಶಿರ್ವ : ದೀಪಾವಳಿ ಸಂಭ್ರಮ ; ಕಣ್ಮನ ಸೆಳೆದ ಬೃಹತ್ ಗೂಡುದೀಪ
Posted On: 21-10-2025 09:39AM
ಶಿರ್ವ : ಇಲ್ಲಿನ ಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ಬೃಹತ್ ಗಾತ್ರದ ಗೂಡುದೀಪವನ್ನು ಕಡಂಬು ಮೈದಾನದಲ್ಲಿ ಅಳವಡಿಸಿ ದೀಪಾವಳಿ ಆಚರಿಸಲಾಯಿತು.
ಎಸ್ ಡಿ ಎಂ ಆಯುರ್ವೇದ ಆಸ್ಪತ್ರೆಗೆ ಕೊಡುಗೆಗಳ ಹಸ್ತಾಂತರ
Posted On: 18-10-2025 10:16PM
ಉಡುಪಿ : ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣೈ ಇವರ ಪ್ರಾಯೋಜಕತ್ವದಲ್ಲಿ ಎಸ್ ಡಿ ಎಮ್ ಆಯುರ್ವೇದ ಆಸ್ಪತ್ರೆ ಉದ್ಯಾವರ ಇಲ್ಲಿಗೆ ರೋಗಿಗಳ ಅನುಕೂಲಕ್ಕಾಗಿ ಎರಡು ವೀಲ್ ಚೇರ್ ಮತ್ತು ವಾಕರ್ ಗಳನ್ನು ನೀಡಲಾಯಿತು.
ಕಾಪು : ರಾ.ಹೆ. 66 ರಲ್ಲಿ ಸರ್ವಿಸ್ ರಸ್ತೆ ನಿಮಾಣಕ್ಕೆ ಸಮಾಜ ಸೇವಕ ಜಯರಾಮ ಆಚಾರ್ಯ ಕಾಪು ಆಗ್ರಹ
Posted On: 18-10-2025 10:11PM
ಕಾಪು : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗೆ ಎರಡು ಬದಿಗಳಲ್ಲೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಮಾಜ ಸೇವಕ ಜಯರಾಮ ಆಚಾರ್ಯ ಕಾಪು ಇವರು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪುನರ್ಮನವಿ ನೀಡಿ ಆಗ್ರಹಿಸಿದ್ದಾರೆ.
ಕಾಪು : ಇಗ್ನೇಷಿಯಸ್ ಮೆಂಡೋನ್ಸ ಇವರಿಗೆ ಸಂತಾಪ ಸೂಚಕ ಸಭೆ
Posted On: 17-10-2025 12:08PM
ಕಾಪು : ಮಲಂಗೋಳಿ ನಿವಾಸಿ ಕಳತ್ತೂರು ವಿನ್ಸೆಂಟ್ ಪಾವಲೇ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಇಗ್ನೇಷಿಯಸ್ ಮೆಂಡೋನ್ಸ ನಿಧನರಾಗಿದ್ದು, ಇವರ ಸಂತಾಪ ಸೂಚಕ ಸಭೆಯನ್ನು ಕಳತ್ತೂರು ಇಗರ್ಜಿ ವಠಾರದಲ್ಲಿ ನಡೆಯಿತು.
ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ವಳದೂರು ನಾರಾಯಣ ಶೆಟ್ಟಿ ನಿಧನ
Posted On: 17-10-2025 12:03PM
ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿಗಳು, ದೈವ ಭಕ್ತರೂ, ಪರೋಪಕಾರಿಗಳು, ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ವಿಶೇಷ ಆರಾಧಕರೂ ಆದ ವಳದೂರು ನಾರಾಯಣ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಸ್ವರ್ಗಸ್ಥರಾಗಿರುತ್ತಾರೆ.
ಕಾಪು : ಸಾಧನಾ ಶಿಖರವೇರಿದ ಸಾಹಿತಿ ಎಸ್.ಎಲ್.ಭೈರಪ್ಪ - ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ
Posted On: 15-10-2025 05:15AM
ಕಾಪು : ಬದುಕಿನ ಸಮಸ್ಯೆಗಳನ್ನು ಲೆಕ್ಕಿಸದೆ ಸಾಧನಾ ಶಿಖರವನ್ನು ಏರಿದ ಸಾಹಿತಿ ಭೈರಪ್ಪ ನಮಗೆ ಸ್ಪೂರ್ತಿ ಆಗಬೇಕು. ಇವರ ಕೃತಿಗಳು ಚರ್ಚೆಗೆ ಒಳಗಾದ್ದರಿಂದ ಎಡ ಬಲ ಚಿಂತಕರೂ ಕೊಂಡು ಓದಿದವರಿದ್ದಾರೆ. ಕೃತಿಗಳ ಮೂಲಕ ಚಿರಾಯುವಾದ ಸಾಹಿತಿ ಎಸ್.ಎಲ್.ಭೈರಪ್ಪ ಎಂದು ಉಡುಪಿ ಎಮ್.ಜಿ.ಎಮ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ನುಡಿದರು. ಅವರು ಮಂಗಳವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನೇತೃತ್ವದಲ್ಲಿ ಸಾಹಿತ್ಯ ಸಂಘ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು ಇವರ ಸಹಭಾಗಿತ್ವದಲ್ಲಿ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಏರ್ಪಡಿಸಿದ "ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ" ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರು ಎಲ್ಲಿ ? ಎನ್ನುವವರಿಗೆ ದೇವರು ಇಲ್ಲಿ ಎಂದು ತೋರಿಸಿ ಕೊಟ್ಟ ಭೈರಪ್ಪರವರನ್ನು ಹೊಗಳುವವರೂ ತೆಗಳುವವರೂ ಇದ್ದಾರೆ. ಇವರ ಕೃತಿಗಳಲ್ಲಿ ವಾಸ್ತವತೆ ಮತ್ತು ಬದುಕಿನ ಚಿಂತೆನೆಯೂ ಇದೆ ಎಂದರು.
ಕಾಪು : ನಾಯ್ಕ್ ಟ್ರೋಫಿ ಪಯ್ಯಾರು -2025 ಕ್ರಿಕೆಟ್ ಪಂದ್ಯಕೂಟದ ಸಮಾರೋಪ
Posted On: 15-10-2025 05:04AM
ಕಾಪು : ಗಣೇಶ್ ನಾಯ್ಕ್ ಪೈಯಾರು ಹಾಗೂ ಆರ್ಯನ್ ನಾಯ್ಕ್ ಬೆಳಪು ಪ್ರಾಯೋಜಕತ್ವದ ನಾಯ್ಕ್ ಟ್ರೋಫಿ -2025 ಇದರ ಕ್ರಿಕೆಟ್ ಪಂದ್ಯಕೂಟ ಸಮಾರೋಪಗೊಂಡಿತು.
ಬ್ರಹ್ಮಾವರ : ರುಡ್ ಸೆಟ್ ಆಸರೆಯ ಬಸ್ಸು ತಂಗುದಾಣ ಲೋಕಾರ್ಪಣೆ
Posted On: 15-10-2025 04:58AM
ಉಡುಪಿ : ಬ್ರಹ್ಮಾವರ ರುಡ್ ಸೆಟ್ ಆಸರೆ ಸಂಘಟನೆ ಇದರ 20ನೇ ವರ್ಷದ ಸವಿ ನೆನಪಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ರುಡ್ ಸೆಟ್ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿರುವ ಬಸ್ಸು ತಂಗುದಾಣದ ಲೋಕಾರ್ಪಣೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ ಸುವರ್ಣ ಅವರು ಉದ್ಘಾಟಿಸಿ, ಶುಭ ಹಾರೈಸಿದರು.
ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳ ಪೂರ್ವಭಾವಿ ಪ್ರಥಮ ಸಭೆ ; ಫೆ. 28ರಂದು ಕಂಬಳ
Posted On: 12-10-2025 04:59PM
ಪಡುಬಿದ್ರಿ : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪೂರ್ವಭಾವಿ ಪ್ರಥಮ ಸಭೆಯು ಎರ್ಮಾಳು ಜನಾರ್ಧನ ದೇವಳದ ಆವರಣದಲ್ಲಿ ಭಾನುವಾರ ಜರಗಿತು. ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ನಾವು ಈ ಬಾರಿ ಪ್ರಥಮವಾಗಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕಾಗಿ ನಿಗದಿ ಪಡಿಸಿದ್ದೇವೆ. ಹಿಂದೆ ಜೈನ ಮತದವರು ಕಂಬಳ ಮಾಡುತ್ತಿದ್ದ ಜಾಗ ಇದಾಗಿತ್ತು. ಊರ ಜನರಿಗೆ ಯಾವುದೇ ತೊಂದರೆ ಬರದಂತೆ ನಾವು ವ್ಯಾಘ್ರ ಚಾಮುಂಡಿ ದೈವಕ್ಕೆ ಸೂಕ್ತ ನೆಲೆ ಕಲ್ಪಿಸಿ, ಇದೀಗ ಕಂಬಳ ಮಾಡಲು ಉದ್ದೇಶಿಸಿದ್ದೇವೆ. ಅ.22ರಂದು ಕಂಬಳ ಕರೆಗೆ ಭೂಮಿ ಪೂಜೆ, ಫೆ.28ರಂದು ಕಂಬಳ ಜರಗಲಿದೆ ಎಂದರು. ಕಂಬಳ ಜಾತ್ಯಾತೀತ ಜನಪದ ಕ್ರೀಡೆ. ಇದು ಕಂಬಳದ ಮೊದಲ ಸಭೆ. ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವರ ಉತ್ಸವದಂತೆ ಎರ್ಮಾಳು ತೆಂಕ - ಬಡ ಕಂಬಳವನ್ನು ಎಲ್ಲರೂ ಸೇರಿ ಅದ್ದೂರಿಯಾಗಿ ಮಾಡೋಣ ಎಂದರು.
